ಜೊತೆಜೊತೆಯಲಿ ಅನು ಡಿಬಾಸ್ ಬಗ್ಗೆ ಏನಂದ್ರು ನೋಡಿ

0
3145

ಜೊತೆ ಜೊತೆಯಲಿ ಅನು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚಿನ ನಟಿ ಅನ್ನುವುದಕ್ಕಿಂತ ಮನೆಮಗಳು ಎನ್ನುವುದೇ ಸೂಕ್ತ. ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈಗ ನಂಬರ್ ಒನ್ ಧಾರಾವಾಹಿ ಪಟ್ಟಕ್ಕೆ ಏರಿದೆ.ಮೊದಲ ವಾರದಿಂದಲೇ ವೀಕ್ಷಕರ ಮನಗೆದ್ದಿರುವ ಇದು ವಿಷ್ಣುವರ್ಧನ್ ಅಳಿಯ ಅನಿರುದ್ದಗೆ ಇನ್ನೊಂದು ಕಮ್ ಬ್ಯಾಕ್ ಘಟ್ಟ.

ಈ ಧಾರಾವಾಹಿಯಲ್ಲಿ 45 ವರ್ಷದ ಆರ್ಯವರ್ಧನ್ 23 ವರ್ಷದ ಅನು ನಡುವಿನ ಪ್ರೇಮ ಕತೆಯನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡಲಾಗಿದೆ. ಮಧ್ಯಮ ವರ್ಗದ ಹೆಣ್ಣುಮಕ್ಕಳ ತಳಮಳ,ಆಸೆ,ಬಡತನ,ದುಡಿತ ಇವುಗಳನ್ನು ಬಹಳ ನೀಟಾಗಿ ಹೇಳಿದ್ದಾರೆ. ಅನು ಪಾತ್ರಧಾರಿ ಮೇಘನಾ ಶೆಟ್ಟಿಗೆ ಇದು ಮೊದಲ ಧಾರಾವಾಹಿ.

ಮಂಗಳೂರಿನ ಮೂಲವಾದರೂ ಹುಟ್ಟಿದ್ದು, ಬೆಳೆದಿದ್ದು ,ಓದಿದ್ದು ಎಲ್ಲಾ ಬೆಂಗಳೂರಿನಲ್ಲಿ.ಐಎಎಸ್ ಆಗಲು ಯುಪಿಎಸ್ ಎಕ್ಸಾಮ್’ಗೆ ಪ್ರಿಪೇರ್ ಆಗುತ್ತಿದ್ದ ಮೇಘನಾಗೆ ಇದ್ದಕ್ಕಿದ್ದಂತೆ ಅದೃಷ್ಟ ಒಲಿದು ಬಂದಿದೆ.ತಂಡದ ನಿರ್ದೇಶಕರು ಇವರಿಗೆ ಯಾವ ರೀತಿಯಲ್ಲಿ ಅಭಿನಯ ಮಾಡಬೇಕು ಎಂದು ವರ್ಕ್ ಶಾಪ್ ಮಾಡಿದ್ದಾರೆ.

ಅವರನ್ನೆಲ್ಲ ನೆನೆಯುವ ಅನು ಅನಿರುದ್ದರ ಬಗ್ಗೆ ಗೌರವದಿಂದ ಕಾಣುತ್ತಾರೆ. ಅವರು ಬಹಳ ಡೌನ್ ಟು ಅರ್ಥ್. ಅಷ್ಟು ದೊಡ್ಡ ಕುಟುಂಬದವರಾದರೂ ಬಹಳ ಸರಳ ವ್ಯಕ್ತಿ ಎನ್ನುತ್ತಾರೆ.ಅವರ ಜೊತೆ ಅಭಿನಯಿಸುವಾಗ ಪ್ರಾರಂಭದಲ್ಲಿ ಸ್ವಲ್ಪ ಭಯವಾದರೂ ನಂತರ ಸರಿಹೋಯಿತು.

ಚಿತ್ರರಂಗದಿಂದ ಅವಕಾಶ ಬರುತ್ತಿದೆಯಾ ಎಂದು ಕೇಳಿದ್ದಕ್ಕೆ ಬಹಳ ಸಿನಿಮಾಗಳಿಂದ ಅವಕಾಶ ಬರುತ್ತಿವೆ. ಸದ್ಯ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಧಾರಾವಾಹಿ ಮುಗಿಯುವವರೆಗೂ ಸದ್ಯ ಸಿನಿಮಾಕ್ಕೆ ಸಹಿ ಮಾಡುವುದಿಲ್ಲ ಎಂದಿದ್ದಾರೆ. ಇನ್ನ ಡಿ ಬಾಸ್ ಅಂದರೆ ದರ್ಶನ್ ಬಗ್ಗೆ ಹೇಳಿ ಅಂದರೆ. ಡಿ ಬಾಸ್ ಅಂದರೆ ನನಗೆ ಇಷ್ಟ. ನಾನು ಅವರ ಅಭಿಮಾನಿ ನಾನು. ಅವರ ಜೊತೆ ಅಭಿನಯಿಸಲು ಅವಕಾಶ ಸಿಕ್ಕರೆ ಖಂಡಿತ ಒಪ್ಪಿಕೊಳ್ಳುವೆ ಎಂದು ಹೇಳುತ್ತಾರೆ.

ಅನು ಅರ್ಯವರ್ಧನ್’ಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ. ಅವರ ಸಿನಿ ಜೀವನಕ್ಕೆ ಆಲ್ ದಿ ಬೆಸ್ಟ್ ಹೇಳೋಣ.

LEAVE A REPLY

Please enter your comment!
Please enter your name here