ಕಲ್ಲಂಗಡಿ ಹೃದಯಘಾತವನ್ನು ತಡೆಯುವದಲ್ಲದೆ ಇಷ್ಟೊಂದು ಅರೋಗ್ಯ ಸಮಸ್ಯೆಗಳಿಗೆ ಸಿಗುತ್ತದೆ ಪರಿಹಾರ..!!

0
2442

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ, ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಇದು ಸಹಕಾರಿ.

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಸಮಸ್ಯೆ ನೀಗುತ್ತದೆ, ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ಶಕ್ತಿವರ್ಧನೆಯಾಗಿ ಕೆಲಸ ಮಾಡುತ್ತದೆ, ಅಸ್ತಮಾ ರೋಗಗಿಳಿಗೆ ಪ್ರಯೋಜನಕಾರಿ.

ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ, ಕೊಬ್ಬನ್ನು ಕಡಿಮೆ ಮಾಡಿ ತೂಕ ಇಳಿಸುತ್ತದೆ, ದೇಹಕ್ಕೆ ಅವಶ್ಯ ನೀರಿನಂಶ ಸಿಗುತ್ತದೆ.

ಮೂಳೆ, ಸ್ನಾಯುಗಳು ಬಲಗೊಳ್ಳುತ್ತವೆ, ಕಲ್ಲಂಗಡಿ ಜ್ಯೂಸ್ ಕುಡಿದರೆ ವ್ಯಾಯಾಮದ ನಂತರ ಉಂಟಾಗುವ ಮೂಳೆ ನೋವು ನಿವಾರಣೆಯಾಗುತ್ತದೆ, ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ.

ಕಲ್ಲಂಗಡಿಯಲ್ಲಿ 92% ರಷ್ಟು ನೀರಿನಂಶ ತುಂಬಿದೆ ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ, ಕಲ್ಲಂಗಡಿ ಗರ್ಭಿಣಿಯರ ಆರೋಗ್ಯಕ್ಕೂ ಹಿತ.

ಬೇಸಿಗೆಯ ಬಾಯಾರಿಕೆ ಮಾತ್ರ ನೆನಪಾಗುವ ಕಲ್ಲಂಗಡಿ ಹಣ್ಣು ಹೃದಯ ಸಂಬಂಧಿ ಕಾಯಿಲೆಗಳನ್ನೂ ದೂರ ಇಡುವುದರ ಜೊತೆಗೆ ದೇಹದ ತೂಕ ಮತ್ತು ಕೊಬ್ಬನ್ನೂ ಕಡಿಮೆ ಮಾಡುತ್ತದೆ.

ಪ್ರತಿದಿನ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಕೊಬ್ಬು ಕಡಿಮೆಯಾಗಿ, ಹೃದಯಾಘಾತ, ಅಧಿಕ ರಕ್ತದೊತ್ತಡ ಮೊದಲಾದ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕದ ಪುರ್ಡ್ಯು ವಿವಿ ನಡೆಸಿದ ಸಂಶೋಧನೆ ತಿಳಿಸಿದೆ.

ರಕ್ತದೊತ್ತಡವನ್ನು ಇದು ಕೂಡಲೇ ಶಮನ ಮಾಡುವಂತಹ ಗುಣವನ್ನು ಹೊಂದಿದೆ ಜೊತೆಯಲ್ಲಿ ಕಲ್ಲಂಗಡಿ ಹಣ್ಣಿನ ರಸ ಕುಡಿಯುವ ಬದಲು ಹೋಳುಗಳ ರೂಪದಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ ನೀರಿಗಿಂತ ಈ ಹಣ್ಣು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

ಸಂಶೋಧನೆಗೆ ಒಂದಷ್ಟು ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಕೆಲವು ತಿಂಗಳಕಾಲ ಒಂದು ಗುಂಪಿಗೆ ನೀರನ್ನೂ, ಇನ್ನೊಂದು ಗುಂಪಿಗೆ ಕಲ್ಲಂಗಡಿ ರಸವನ್ನು ಸೇವಿಸಲು ಕೊಡಲಾಯಿತು ಕಲ್ಲಂಗಡಿ ರಸ ಸೇವಿಸಿದ ಗುಂಪಿನವರ ದೇಹಸ್ಥಿತಿ, ನೀರು ಸೇವಿಸಿದವರಿಗಿಂತ ಶೇ 50ರಷ್ಟು ಸಮತೋಲನ ಕಾಯ್ದುಕೊಂಡಿತ್ತು ಎಂದು ತಮ್ಮ ಸಂಶೋಧನೆ ಕುರಿತು ವಿವರಿಸಿದರು ಡಾ ಶುಬಿನ್ ಶಾಹ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here