ಮಂಡಿ ನೋವಿಗೆ ಮನೆಯಲ್ಲಿಯೇ ಇದೆ ಸರಳ ಮದ್ದು.!

0
7701

ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿರುತ್ತದೆ. ಮಂಡಿ ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರು ಈ ಮಂಡಿ ನೋವಿಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಆದರೆ ಇದು ಈಗ ಬದಲಾಗಿದೆ. ವಯಸ್ಸಾಗಿರುವವರು ಮಾತ್ರವಲ್ಲ ವಯಸ್ಸಿರುವವರು ಈ ಮಂಡಿನೋವ್ವಿನಿಂದ ಬಳಲುತ್ತಿದ್ದರೆ. ಇದಕ್ಕಾಗಿ ಇಂದು ಹಲವಾರು ಔಷಧಿಗಳು ದೊರೆಯುತ್ತಿದ್ದರೂ, ಮನೆ ಮದ್ದುಗಳನ್ನು ಬಳಸಿ ಇವುಗಳನ್ನು ಸುಲಭವಾಗಿ ಗುಣ ಮುಖ ಮಾಡಿಕೊಳ್ಳಬಹುದು. ಈ ಮನೆಮದ್ದುಗಳು ತುಂಬಾ ಸುರಕ್ಷಿತ, ಬಹುತೇಕ ಮಂದಿ ಇದರಿಂದ ಪ್ರಯೋಜನಗಳನ್ನು ಈಗಾಗಲೇ ಪಡೆದಿದ್ದಾರೆ. ನೀವು ಸಹ ಮಂಡಿ ನೋವ್ವಿನಿಂದ ಬಳಲುತ್ತಿದ್ದರೆ ಈ ಮನೆ ಮದ್ದುಗಳನ್ನ ಬಳಸಿಕೊಂಡು ಪರಿಹಾರ ಕಂಡುಕೊಳ್ಳಿ.

ಅರಿಶಿನ ನಿಸರ್ಗ ಒದಗಿಸಿದ ಅತ್ಯುತ್ತಮ ನಂಜುನಿರೋಧಕವಾಗಿದ್ದು ದೇಹದ ಹತ್ತು ಹಲವು ನೋವುಗಳಿಗೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಮಂಡಿನೋವು, ಸಂಧಿವಾತಕ್ಕೂ ಅರಿಶಿನ ಉತ್ತಮವಾಗಿದೆ. ಕೊಂಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆರಡು ಬಾರಿ ಕೊಂಚವೇ ಮಸಾಜ್ ನೊಂದಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ.

ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.

ಅಡುಗೆಮನೆಯಲ್ಲಿ ಸದಾ ಇರುವ ಓಂ ಕಾಳು, ಪುಟ್ಟ ಜೀರಿಗೆಯಂತೆ ಕಾಣುವ ಓಂ ಕಾಳುಗಳಲ್ಲಿರುವ ಅರಿವಳಿಕಾ ಮತ್ತು ಉರಿಯೂತ ನಿವಾರಕ ಗುಣಗಳು ಮಂಡಿನೋವಿನ ಶಮನಕ್ಕೂ ಉತ್ತಮ ಪರಿಹಾರ ನೀಡುತ್ತವೆ. ಉರಿಯೂತ ಅಥವಾ ಸಂಧಿವಾತದಿಂದಾಗಿ ಎದುರಾಗಿದ್ದ ಊತ, ಚರ್ಮ ಕೆಂಪಗಾಗಿರುವುದು ಮೊದಲಾದ ತೊಂದರೆಗಳೂ ಸುಲಭವಾಗಿ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತದೆ. ಇದಕ್ಕಾಗಿ ಕೊಂಚ ಓಂ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಪುದೀನಾ ಎಣ್ಣೆಯನ್ನು ನಿಮಗೆ ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಿ. ಇದರಲ್ಲಿರುವ ತಂಪುಕಾರಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದೀನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ.

ಶುಂಠಿ ಇದರಲ್ಲಿ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣಗಳು ಇರುವುದರಿಂದ ಇವು ಮಂಡಿನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಶುಂಠಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನೋವು ಇರುವ ಭಾಗದಲ್ಲಿ ಲೇಪಿಸಿ, ಮಸಾಜ್ ಮಾಡಿ. ನಿಮಗೆ ಬೇಕಾದಲ್ಲಿ ಶುಂಠಿ ಪೇಸ್ಟ್ ಸಹ ಲೇಪಿಸಬಹುದು.

ಕರ್ಪೂರದ ಎಣ್ಣೆ ಬಹಳ ಒಳ್ಳೆಯದು ನೋವಿರುವ ಭಾಗಕ್ಕೆ ಕರ್ಪೂರದ ಎಣ್ಣೆ ಹಚ್ಚುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಸೆಳೆತ ಮತ್ತು ಒತ್ತಡವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ, ಅಂದರೆ ಬರೆ ಕರಗಿದರೆ ಸಾಕು, ಕುದಿ ಬರಬಾರದು, ಇದಕ್ಕೆ ಒಂದು ಚಿಕ್ಕಚಮಚ ಪುಡಿಮಾಡಿದ ಕರ್ಪೂರದ ಬಿಲ್ಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣಿಯಲು ಬಿಟ್ಟು ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ. ಮಂಡಿನೋವಿದ್ದರೆ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನು ನೋವಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಮಂಜುಗಡ್ಡೆಯನ್ನು ಇರಿಸಿ ಮಂಜುಗಡ್ಡೆಯು ಊದಿಕೊಂಡ ಮಂಡಿಗಳಿಗೆ ಒಳ್ಳೆಯ ಮನೆ ಮದ್ದಾಗಿರುತ್ತದೆ. ಮಂಡಿಗಳು ಊದಿಕೊಂಡಾಗ ಅದರ ಮೇಲೆ ಮಂಜುಗಡ್ಡೆಯನ್ನು ಇರಿಸಿ. ಇದಕ್ಕಾಗಿ ಮಂಜುಗಡ್ಡೆಗಳನ್ನು ದಪ್ಪನಾದ ಬಟ್ಟೆಯಲ್ಲಿ ಸುತ್ತಿ,ಅದು ಕರವಸ್ತ್ರವಾದರು ಸರಿ, ಅದರಲ್ಲಿ ಸುತ್ತಿ ನೋವಿರುವ ಭಾಗದಲ್ಲಿ ಎಲ್ಲಿ ಬೇಕೋ, ಅಲ್ಲಿ ಈ ಪ್ಯಾಕ್ ಇಟ್ಟುಕೊಳ್ಳಿ. 20-30 ನಿಮಿಷದ ಅವಧಿಯಲ್ಲಿ 3-4 ಬಾರಿ ಇದನ್ನು ಇಡಿ. ಆಗ ನೋವು ಕಡಿಮೆಯಾಗುತ್ತದೆ.

ವ್ಯಾಯಾಮ ಮಾಡಿ ಮಂಡಿಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ದಿನವೂ ವ್ಯಾಯಾಮ ಮಾಡಿ. ನಿಯಮಿತವಾಗಿ ಓಡಾಡುವುದರಿಂದಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆಂದು ಜಿಮ್ಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಬೆಳಗ್ಗೆ ಎದ್ದು ಓಡಾಡಿ ಸಾಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here