ನಟಿ ಜಯಶ್ರೀ ಮೃ’ತ್ಯುವಿಗೆ ಶರಣು. ಜನ ಏನು ಮಾತನಾಡಿಕೊಳ್ಳುತ್ತಿದ್ದಾರೆ ಗೊತ್ತಾ.

0
6635

ಕನ್ನಡದ ಖ್ಯಾತ ನಟಿ ಜಯಶ್ರೀ ರಾಮಯ್ಯ ಅವರು ಇಂದು ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದ ಕೊಠಡಿಯಲ್ಲಿ ಆತ್ಮಹ’ತ್ಯೆಗೆ ಶರಣಾಗಿದ್ದಾರೆ ಎಂಬ ವಿಷಯ ಈಗ ಹೊರಬಂದಿದೆ. ಪ್ರಖ್ಯಾತ ಸಿನಿಮಾಗಳಾದ ಉಪ್ಪು ಹುಳಿ ಕಾರ, ಕನ್ನಡ ಗೊತ್ತಿಲ್ಲ ಹಾಗೂ ಇನ್ನೂ ಹಲವಾರು ಚಿತ್ರಗಳಲ್ಲಿ ಜಯಶ್ರೀ ಅವರು ಅಭಿನಯಿಸಿದ್ದರು. ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಮೂರರ ಆವೃತ್ತಿಯಲ್ಲಿ ಜಯಶ್ರೀ ರಾಮಯ್ಯ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಹಲವು ತಿಂಗಳುಗಳಿಂದ ಮಾನಸಿಕ ಖಿನ್ನತೆಯಿಂದ ತೊಳಲಾಡುತ್ತಿದ್ದ ಖ್ಯಾತ ನಟಿ ಜಯಶ್ರೀ ರಾಮಯ್ಯ ಈ ಹಿಂದೆ ಕೂಡ ಒಮ್ಮೆ ಆತ್ಮಹ’ತ್ಯೆಗೆ ಯತ್ನ ಮಾಡಿದ್ದರು. ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ನಾನು ಖಿ’ನ್ನತೆಯಿಂದ ಬಳಲುತ್ತಿದ್ದು ಈ ಪ್ರಪಂಚಕ್ಕೆ ನಾನು ಗುಡ್ ಬೈ ಹೇಳುತ್ತೇನೆ ಎಂದು ಕೂಡ ಆ ಸಮಯದಲ್ಲಿ ಪೋಸ್ಟನ್ನು ಹಾಕಿದ್ದರು. ನಂತರ ಅವರನ್ನು ರಿಹ್ಯಾಬಿಲಿಟೇಷನ್ ಕೇಂದ್ರಕ್ಕೆ ಸೇರಿಸಲಾಗಿದ್ದು ಅಲ್ಲಿಂದಲೇ ಅವರು ಇಥರ ಪೋಸ್ಟ್ ಮಾಡಿದ್ದರು.

ಆದರೆ ಅದೇ ಸಮಯದಲ್ಲಿ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮಾನಸಿಕ ಖಿ’ನ್ನತೆಯಿಂದ ಬಳಲುತ್ತಿದ್ದ ನಟಿ ಜಯಶ್ರೀ ಅವರಿಗೆ ಫೋನ್ ಕರೆ ಮಾಡಿ ಮಾನಸಿಕ ಸಾಂತ್ವನ ನೀಡಿದ್ದರು. ಅವರ ಮಾನಸಿಕ ಖಿ’ನ್ನತೆಯಿಂದ ಅವರು ಇಂದು ಆತ್ಮಹ’ತ್ಯೆ ಮಾಡಿಕೊಂಡರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಅವರ ಅಭಿಮಾನಿಗಳು ಯಾಕೆ ಹೀಗೆ ಮಾಡಿದಿರಿ ಜಯಶ್ರೀ ಅವರೇ ಎಂದು ಅವರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಅತ್ಯಂತ ಸ್ಫುರದ್ರೂಪಿ ಯಾಗಿ ಲವಲವಿಕೆಯಿಂದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಹೆಸರು ಮಾಡುತ್ತಿದ್ದ ಖ್ಯಾತ ನಟಿ ಜಯಶ್ರೀ ಮಾನಸಿಕ ಖಿ’ನ್ನತೆಯಿಂದ ಆತ್ಮಹ’ತ್ಯೆ ಮಾಡಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಮನುಷ್ಯನಿಗೆ ಮಾನಸಿಕ ಸ್ಥಿಮಿತತೆ ಸಮತೋಲನದಲ್ಲಿ ಇರಬೇಕು ಹಾಗೂ ಮನುಷ್ಯನ ಬಳಿ ಎಷ್ಟೇ ಹಣ, ಆಸ್ತಿ, ಅಂತಸ್ತು ಇದ್ದರೂ ಆತನ ಮನಸ್ಥಿತಿ ಸರಿಯಾಗಿರಬೇಕು ಎಂಬುದು ಈ ಘಟನೆಯಿಂದ ನಮಗೆ ತಿಳಿದು ಬರುತ್ತದೆ. ಅದೇನೇ ಇರಲಿ ಅಸುನೀಗಿದ ಜೀವಕ್ಕೆ ಹಾಗೂ ಅವರ ಆತ್ಮಕ್ಕೆ ಶಾಂತಿಯನ್ನು ಕೋರೋಣ. ಈ ಸಮಯದಲ್ಲಿ ಅನಗತ್ಯ ಚರ್ಚೆಗಿಂತ ಯಾವುದೇ ರೀತಿಯ ಗೊಂದಲ ವಾತಾವರಣ ಸೃಷ್ಟಿ ಮಾಡದೆ ಇರುವುದು ಉತ್ತಮ.

LEAVE A REPLY

Please enter your comment!
Please enter your name here