ಯಾರಿಗೆ ಶ್ರೀಮಮತನಾಗುವ ಆಸೆ ಇಲ್ಲ ? ಎಲ್ಲರಿಗೂ ಇದೆ. ದೇವರಲ್ಲಿ ನಾವು ಶ್ರೀಮಂತರಾಗಬೇಕೆಂದೇ ಬೇಡಿಕೊಳ್ಳುತ್ತೇವೆ. ದುರದೃಷ್ಟವಶಾತ್ ಆ ಜನ್ಮ ಪಾಪದಿಂದಲೋ , ಹಣಕಾಸಿನ ಸರಿಯಾದ ನಿರ್ವಹಣೆ ಮಾಡದೆ ಖರ್ಚು ಹೆಚ್ಚು ಮಾಡುವುದರ ಕಾರಣವೋ ,ಉಳಿತಾಯ ಮಾಡದಿರುವುದರಿಂದಲೋ ಏನೋ ನಾವು ದರಿದ್ರರಾಗೇ ಇದ್ದೇವೆ.
.ಯಾವ ಮನುಷ್ಯನಿಗೆ ಹಣದ ಬಗ್ಗೆ ವ್ಯಾಮೋಹಕ್ಕಿಂತ ಹಣವನ್ನು ಯಾವ ರೀತಿಯಲ್ಲಿ ಉಳಿಕೆ ಮಾಡುವ ಬುದ್ದಿ ಬರುತ್ತದೋ ಅವನು ಖಂಡಿತಾ ಶ್ರೀಮಂತನಾಗುತ್ತಾನೆ. ಹಣ ಹಣ ಸೇರಿಸಿದಂತೆ ಹಣದ ರಾಶಿ ಆಗುವುದು. ಮನುಷ್ಯ ಹುಟ್ಟಿನಿಂದಲೇ ಯಾರೂ ಶ್ರೀಮಂತರಾಗಿ ಹುಟ್ಟುವುದಿಲ್ಲ. ಆದರೆ ಶ್ರೀಮಂತರಾಗಿ ಸಾಯುವುದಕ್ಕೆ ಖಂಡಿತಾ ಸಾಧ್ಯವಿದೆ. ಅದಕ್ಕೆ ನಮ್ಮ ಪರಿಶ್ರಮ ಮತ್ತು ಬುದ್ಧಿವಂತಿಕೆ ಬೇಕಾಗಿದೆ.
ನಮ್ಮ ಪುರಾತನ ಕಾಲದಿಂದಲೂ ನಾವು ಆಚಾರ ವಿಚಾರಗಳು ಸಂಪ್ರದಾಯ ಹಾಗೂ ದೇವರನ್ನು ನಂಬಿಕೊಂಡು ಬಂದಿದ್ದೇವೆ. ವಾಸ್ತುವಿನ ಮೇಲೆ ನಾವು ನಂಬಿಕೆ ಇರಿಸಿದ್ದೇವೆ. ಶಾಸ್ತ್ರದ ಪ್ರಕಾರ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ನಾವು ದರಿದ್ರದಿಂದ ಶ್ರೀಮಂತರಾಗಬಹುದು. ಆದರೆ ಇದು ಅವರವರ ನಂಬಿಕೆಗೆ ಬಿಟ್ಟಿದ್ದು. ಅದನ್ನು ಯಾವ ರೀತಿಯಲ್ಲಿ ಮಾಡಬೇಕು ಎಂದು ನಾವು ಹೇಳುತ್ತೇವೆ. ಅದನ್ನು ಪಾಲಿಸಿದರೆ ಖಂಡಿತಾ ನಾವು ಶ್ರೀಮಂತರಾಗಬಹುದು. ಕೇವಲ ಅದೊಂದೇ ಪಾಲಿಸಿ ನಾವು ಉಳಿತಾಯ ಮಾಡದೇ ಅಥವಾ ಕೆಲಸ ಮಾಡದಿದ್ದರೆ ಶ್ರೀಮಂತರಾಗುವುದಿಲ್ಲ . ನಾವು ಎಷ್ಟು ಶ್ರಮಪಡುತ್ತೀವೋ ಅದಕ್ಕೆ ಖಂಡಿತಾ ಫಲ ಸಿಕ್ಕೇ ಸಿಗುತ್ತದೆ.
ಇನ್ನು ಶಾಸ್ತ್ರದ ಪ್ರಕಾರ ಈ ರೀತಿಯಲ್ಲಿ ಮಾಡಬೇಕು. ಅದಕ್ಕೆ ಸ್ವಲ್ಪ ಲವಂಗ ಇದ್ದರೆ ಸಾಕು. ಬೆಳಗಿನ ಸೂರ್ಯೋದಯಕ್ಕೂ ಮುಂಚೆ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಈ ಗಳಿಗೆ ಬಹಳ ಪವಿತ್ರವಾದುದು. ಈ ಸಮಯದಲ್ಲಿ ಏಕಾಗ್ರತೆ ಮಟ್ಟ ಹೆಚ್ಚಿರುತ್ತದೆ. ಮಕ್ಕಳು ಈ ಸಮಯದಲ್ಲಿ ಎದ್ದು ಓದಿದರೆ ಓದಿದ್ದು ಮನಸಿಗೆ ನಾಟುತ್ತದೆ.
ಇನ್ನ ಬೆಳಗಿನ ಜಾವ ಬೇಗ ಎದ್ದು ಸ್ನಾನ ಮಾಡಬೇಕು. ಒಂದು ಶುಭ್ರವಾದ ಕೆಂಪು ಬಟ್ಟೆಯಲ್ಲಿ ಲವಂಗವನ್ನು ಕಟ್ಟಬೇಕು. ಅದನ್ನು ಲಕ್ಷ್ಮಿ ಫೋಟೋದ ಮುಂದೆ ಇಟ್ಟು ದೀಪ ಹಚ್ಚಿ ಭಕ್ತಿಯಿಂದ ಪೂಜಿಸಬೇಕು. ನಂತರ ಲವಂಗ ಕಟ್ಟಿದ ಕೆಂಪು ಬಟ್ಟೆಯನ್ನು ನೀವು ದುಡ್ಡು ಇಡುವ ಜಾಗದಲ್ಲಿ ಇಡಬೇಕು. ನೆನಪಿರಲಿ. ಈ ವಿಷಯ ನಿಮ್ಮ ಮನೆಯವರ ಬಿಟ್ಟು ಬೇರೆ ಯಾರಿಗೂ ತಿಳಿಯಬಾರದು.
ಈ ರೀತಿಯಲ್ಲಿ ಮಾಡಿದರೆ ಲಕ್ಷ್ಮಿ ಒಲಿದು ಬರುವಳು ಎಂದು ಹೇಳಲಾಗುತ್ತದೆ. ನಂಬಿಕೆ ಇಡುವುದು ನಿಮಗೆ ಬಿಟ್ಟಿದ್ದು.