ಹಣವು ಒಂದು ಕ್ಷಣ ಪ್ರತಿಯೊಬ್ಬರಿಗೂ ಆಸೆ ಹುಟ್ಟಿಸುವುದು ಖಂಡಿತ, ದಿನ ಬೆಳಗ್ಗೆಯಿಂದ ಸಂಜೆವರೆಗೂ ಕಷ್ಟಪಟ್ಟು ದುಡಿದರೂ ಕೇವಲ ಬಿಡುಗಾಸು ಸಿಗುತ್ತದೆ ಅಂತಹದರಲ್ಲಿ ಒಂದೇ ಕ್ಷಣದಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕರೆ ಯಾರು ಬಿಡುವುದಿಲ್ಲ ಎಂಬುದು ನಿಮ್ಮ ಅನಿಸಿಕೆ ಯಾದರೆ ಒಮ್ಮೆ ಆಟೋ ಡ್ರೈವರ್ ಮಾಡಿದ ಈ ಕೆಲಸವನ್ನು ನೀವು ಓದಲೇಬೇಕು, ಹೌದು ಬೆಂಗಳೂರಿನಲ್ಲಿ ಆಟೋ ಚಾಲಕರು ಒಬ್ಬರು ತಮ್ಮ ಆಟೋದಲ್ಲಿ ಸಿಕ್ಕ 10 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಘಟನೆಯ ಸಂಪೂರ್ಣ ವಿವರ : ಭಾಸ್ಕರ್ ಎನ್ನುವ ವ್ಯಕ್ತಿ ಹೃದಯ ಚಿಕಿತ್ಸೆ ಮಾಡಿಸಿಕೊಳ್ಳಲು ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಬಂದಿದ್ದರು, ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದು ಡಾಕ್ಟರ್ ಎಮ್ ಆರ್ ಭಾಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಹೀಗೆ ನಾವು ಉಳಿದುಕೊಂಡ ಕೋಣೆಯಿಂದ ಆಸ್ಪತ್ರೆಗೆ ಆಟೋ ಮುಖಾಂತರ ತೆರಳಿದ್ದಾರೆ ಹಾಗೂ ಇದೇ ಸಮಯದಲ್ಲಿ ತಮ್ಮ ಬಳಿಯಿದ್ದ 1.5 ಲಕ್ಷ ಭಾರತೀಯ ಹಣ ಮತ್ತು 12 ಸಾವಿರ ಅಮೆರಿಕ ಡಾಲರ್ ಅನ್ನು ಆಟೋದಲ್ಲಿ ಮರೆತು ಬಿಟ್ಟಿದ್ದಾರೆ.
ಇದನ್ನು ಗಮನಿಸಿದ ಪ್ರಾಮಾಣಿಕ ಆಟೋ ಚಾಲಕ ರಮೇಶ್ ಬಾಬು ತಕ್ಷಣವೇ ಆ ಹಣವನ್ನು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತಂದು ನೀಡಿದ್ದಾರೆ, ಆಟೋ ಚಾಲಕ ರಮೇಶ್ ಬಾಬು ಅವರ ಈ ಕಾರ್ಯವನ್ನು ಮೆಚ್ಚಿ ಪೊಲೀಸರು ಅವರಿಗೆ 2000 ನಗದು ನೀಡಿ ಗೌರವಿಸಿದ್ದಾರೆ, ನಂತರ ಪೊಲೀಸರು ಭಾಸ್ಕರ್ ಅವರನ್ನು ಹುಡುಕಿ ಹಣವನ್ನು ಹಿಂತಿರುಗಿಸಿದ್ದಾರೆ, ನಂತರ ಭಾಸ್ಕರ್ ಅವರು ಆಟೋ ಚಾಲಕ ರಮೇಶ್ ಬಾಬು ಅವರಿಗೆ ಐದು ಸಾವಿರ ನಗದು ನೀಡಿ ಗೌರವ ಸೂಚಿಸಿದ್ದಾರೆ, ಅಷ್ಟೇ ಅಲ್ಲದೆ ನಗರ ಪೊಲೀಸ್ ಆಯುಕ್ತರು ಕೂಡ ಆಟೋ ಚಾಲಕರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೂ ತಪ್ಪದೆ ಹಂಚಿಕೊಳ್ಳಿ.