ರಾತ್ರಿ ಊಟದ ಬಳಿಕ ಈ ಅಪಾಯಕಾರಿ ಆಹಾರಗಳನ್ನು ದಿನವೂ ಸೇವಿಸುತ್ತಿದ್ದಿರಾ ಎಚ್ಚರ.!!

0
5043

ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು, ಹಾಗಾದರೆ ಊಟದ ನಂತರ ಯಾವ ಆಹಾರಗಳನ್ನು ತಿಂದರೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎನ್ನುವ ಕುತೂಹಲ ಮೂಡಿದರೆ ಮುಂದೆ ಓದಿ.

ಹಾಲು : ಹೆಚ್ಚಿನವರು ಊಟವಾದ ಬಳಿಕ ಹಾಲು ಕುಡಿಯುವುದು ಸಾಮಾನ್ಯ ಆದರೆ ಹಾಲು ಕುಡಿಯುವುದು ಒಳ್ಳೆಯದಲ್ಲ ಎಂದರೆ ನೀವು ನಂಬಲೇ ಬೇಕು, ಊಟದ ಬಳಿಕ ಹಾಲು ಸೇವಿಸುವುದರಿಂದ ಅದರಲ್ಲಿರುವ ಲಾಕ್ಟೋಸ್ ಅಂಶ ನಿಮಗೆ ಜೀರ್ಣ ಸಂಬಂಧಿ ಸಮಸ್ಯೆ ತರಬಹುದು.

ಚಾಕಲೇಟ್ : ಚಾಕಲೇಟ್ ನಲ್ಲಿರುವ ಕೆಫೈನ್ ಅಂಶ ನಿಮ್ಮ ನಿದ್ರೆಗೆ ಭಂಗ ತರಬಹುದು, ಸಹಜವಾಗಿ ರಾತ್ರಿ ಸರಿಯಾಗಿ ನಿದ್ರೆಯಾಗದಿದ್ದರೆ ಹಗಲು ಕೆಲಸ ಮಾಡಲು ತೊಂದರೆಯಾಗುತ್ತದೆ.

ಜ್ಯೂಸ್ : ರಾತ್ರಿ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ಹಣ್ಣಿನ ಜ್ಯೂಸ್ ಅಸಿಡಿಕ್ ರಿಯಾಕ್ಷನ್ ಉಂಟು ಮಾಡಬಹುದು. ಇದರಿಂದ ರಾತ್ರಿ ಎದೆಯುರಿಯಂತಹ ಸಮಸ್ಯೆಯಾಗಬಹುದು.

ಸೋಡಾ : ಊಟವಾದ ಬಳಿಕ ಸೋಡಾ ಕುಡಿಯುವುದರಿಂದ ಜೀರ್ಣ ಕ್ರಿಯೆ ಹದ ತಪ್ಪಬಹುದು. ಇದರಿಂದ ಅಸಿಡಿಟಿ ಉಂಟಾಗಬಹುದು.

ಪಿಜ್ಜಾ : ಪಿಜ್ಜಾ ಎಷ್ಟೇ ಇಷ್ಟ ಎಂದಾಗಿದ್ದರೂ ಊಟದ ಬಳಿಕ ಸೇವಿಸುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಕ್ಯಾಲೋರಿಯಿದ್ದು, ಊಟದ ಬಳಿಕ ಸೇವಿಸುವುದರಿಂದ ಅನಗತ್ಯ ಕೊಬ್ಬು ಸಂಗ್ರಹವಾಗಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here