ಯಶ್ ಬಳಿ ಕ್ಷಮೆ ಕೇಳಿದ ರಾಧಿಕಾ ! ಶಾಕ್ ಆದ ಯಶ್

0
2783

ಯಶ್ ಬಳಿ ಕ್ಷಮೆ ಕೇಳಿದ ರಾಧಿಕಾ ! ರಾಧಿಕಾ ಮತ್ತು ಯಶ್ ಮದುವೆಯಾಗಿ ಮೊನ್ನೆಗೆ ಅಂದರೆ‌ ಡಿಸೆಂಬರ್ 9 ಕ್ಕೆ ಮೂರು ವರ್ಷಗಳು ತುಂಬಿದೆ. ಅದಕ್ಕೆ ರಾಧಿಕಾ ಪಂಡಿತ್ ಯಶ್’ಗೆ ಶುಭಾಶಯ ಮತ್ತು ಸಾರಿ ಕೇಳಿದ್ದಾರೆ‌. ಸಾರಿ ಯಾಕೆ ಕೇಳಿದ್ರು ಅಂತ ಮುಂದೆ ಹೇಳ್ತೀವಿ ಓದಿ.

ಯಶ್ ಮತ್ತು ರಾಧಿಕಾ ಪಂಡಿತ್ ರವರ ಪ್ರೀತಿ ನಿನ್ನೆ ಮೊನ್ನೆಯದಲ್ಲ. ಇವರ ಸ್ನೇಹ ಸುಮಾರು ವರ್ಷಗಳ ಹಿಂದಿನದು. ಇವರು ಒಟ್ಟಿಗೆ ಕಿರುತೆರೆಗೆ ಬಂದವರು. ಅಶೋಕ್ ಕಶ್ಯಪ್ ಈ ಟಿವಿಗಾಗಿ ನಿರ್ದೇಶನ ಮಾಡಿದ ಧಾರಾವಾಹಿಯಲ್ಲಿ ಇಬ್ಬರೂ ನಟಿಸಿದರು. ಆಗ ಇವರ ನಡುವೆ ಸ್ನೇಹ ಶುರುವಾಗುತ್ತದೆ. ನಂತರ ನಾನು ಈಗ ಪ್ರೀತಿಯಲ್ಲಿ ಬೀಳಬೇಕು ಎಂದು ಮೊಗ್ಗಿನ ಮನಸ್ಸು ಚಿತ್ರದಲ್ಲಿ ಯಶ್ ಪ್ರೀತಿಯ ಬಲೆಗೆ ಬೀಳುತ್ತಾರೆ.

ಹೀಗೆ ಇಬ್ಬರೂ ಸಿನಿರಂಗದಲ್ಲಿ ನಂಬರ್ ಒನ್ ನಟ ನಟಿಯರಾಗಿ ಬೆಳೆದು ಇಬ್ಬರೂ ಮದುವೆಯಾಗುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಗುಟ್ಟಾಗಿ ಸಾಗುತ್ತಿದ್ದ ಇವರ ಪ್ರೀತಿ ಕೊನೆಗೆ ರಟ್ಟಾಗಿ ಅದ್ದೂರಿಯಾಗಿ ಮದುವೆ ಆಗುತ್ತಾರೆ . ಡಿಸೆಂಬರ್ 9 ,2016 ರಂದು ಅದ್ದೂರಿಯಾಗಿ ಮದುವೆ ಆದ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಇತ್ತೀಚೆಗೆ ಮೊದಲ ಮಗಳು ಐರಾಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಫನ್ ವರ್ಲ್ಡ್ ನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದರು. ಇದು ಸಕ್ಕತ್ ಸುದ್ದಿಯಾಗಿತ್ತು.

ಮೊನ್ನೆ ಡಿಸೆಂಬರ್ 9 ಅವರ ಮದುವೆ ಆಗಿ ಮೂರು ವರ್ಷ ತುಂಬಿದ್ದು ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಅವರಿಬ್ಬರ ಹಳೆಯ ಫೋಟೋ ಹಾಕಿ ನಮ್ಮಿಬ್ಬರ ಪ್ರೀತಿ ಕೇವಲ ಮೂರು ವರ್ಷವಲ್ಲ, ಬಹಳ ವರ್ಷದ ಅನುಬಂಧ ಇದು . ಇದು ಹಳೆಯ ಫೋಟೋ. ಕ್ಲಾರಿಟಿ ಇಲ್ಲ ಅದಕ್ಕಾಗಿಯೇ ಸಾರಿ ಕೇಳುತ್ತೇನೆ. ಮದುವೆ ವಾರ್ಷಿಕೋತ್ಸವದ ಶುಭಾಶಯ ಎಂದು ಬರೆದುಕೊಂಡಿದ್ದಾರೆ.

ಯಶ್ ಈಗ ಕೆಜಿಎಫ್ ನಂತರ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಕನ್ನಡದ ದಾಖಲೆಯ ಚಿತ್ರ . ಈ ಚಿತ್ರ ಇಡೀ ದಕ್ಷಿಣ ಭಾರತವೇ ನಮ್ಮ ಕಡೆ ಅಚ್ಚರಿಯಿಂದ ತಿರುಗಿ ನೋಡುವಂತೆ ಮಾಡಿತ್ತು. ಈಗ ಅದರ ಮುಂದಿನ ಭಾಗ ಕೆಜಿಎಫ್ 2 ಚಿತ್ರೀಕರಣ ನಡೆಯುತ್ತಿದೆ.

LEAVE A REPLY

Please enter your comment!
Please enter your name here