ಬಿಜೆಪಿ ಮುಖಂಡ ಮುನಿರತ್ನ ಅವರಿಂದ ಪ್ರತಿನಿತ್ಯ 60000 ಬಡಜನರಿಗೆ ಊಟ ವ್ಯವಸ್ಥೆ..

0
6148

ಇಡೀ ದೇಶ ಸಂಪೂರ್ಣ ಲಾಕ್ಡೌನ್, ಮತ್ತೊಂದೆಡೆ ಮಹಾಮಾರಿ ವೈರಸ್ ಆರ್ಭಟ, ಇದರ ನಡುವೆ ಬಡವರ ಬದುಕು ನಿಜವಾಗಿಯೂ ತತ್ತರಿಸಿಹೋಗಿದೆ, ಇಂತಹ ಪರಿಸ್ಥಿತಿಯಲ್ಲಿ ಮನುಷ್ಯ ಒಬ್ಬರಿಗೊಬ್ಬರು ಆಗಬೇಕು ಅಲ್ಲವೇ, ಇನ್ನು ನೆನ್ನೆ ಶೈನ್ ಶೆಟ್ಟಿ ಅವರು ಬೀದಿ ವ್ಯಾಪಾರಿಗಳ ಮನೆ ಬಾಡಿಗೆ ಹಾಗೂ ಒಂದು ತಿಂಗಳ ದಿನಸಿ ಕೊಡಿಸುವ ಬಗ್ಗೆ ಮಾಹಿತಿ ನೀಡಿದ್ದೆವು ಇಂದು ಬಿಜೆಪಿ ಮುಖಂಡರಾದ ಮುನಿರತ್ನ ಅವರು ಮತ್ತೊಂದು ಅದ್ಭುತ ಕಾರ್ಯಕ್ಕೆ ಮುಂದಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ದೇಶದಲ್ಲಿನ ಸಂಪೂರ್ಣ ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರಿಗೆ ಮತ್ತು ಬಡವರ್ಗದವರಿಗೆ ಕೆಲಸ ಇಲ್ಲದಂತಾಗಿದೆ, ಪ್ರತಿನಿತ್ಯದ ಸಂಬಳವನ್ನು ನಂಬಿಕೊಂಡಿದ್ದ ಇಂಥವರು ಈಗ ತಮ್ಮ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಅರ್ಥವಾಗದೆ ಶೋಚನೀಯ ಸ್ಥಿತಿಗೆ ಬಂದು ನಿಂತಿದ್ದಾರೆ, ತರಕಾರಿಗಳ ಬೆಲೆ ಗಗನಕ್ಕೇರಿದೆ, ದಿನಸಿ ಸಾಮಾನುಗಳ ಬೆಲೆ ಹೆಚ್ಚಿಸಿ ಮಾರಾಟಗಾರರು ಮಾರುತ್ತಿದ್ದಾರೆ ಎಂಬ ಹಲವು ವರದಿಗಳಾಗಿವೆ, ಹೀಗಿದ್ದ ಮೇಲೆ ಬಡವರು ಹೇಗೆ ಬದುಕಬೇಕು, ಈ ಸ್ಥಿತಿಯನ್ನು ಮನಗಂಡ ಮುನಿರತ್ನ ಅವರು ಬಡವರ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಸುಮಾರು 50ರಿಂದ 60 ಸಾವಿರ ಜನರಿಗೆ ಪ್ರತಿನಿತ್ಯ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದಾರೆ, ಇದಕ್ಕಾಗಿ ಮತ್ತಿಕೆರೆಯ ಕಲ್ಯಾಣ ಮಂಟಪವೊಂದರಲ್ಲಿ ಅರವತ್ತು ಅಡುಗೆ ಭಟ್ಟರನ್ನು ನೇಮಕ ಮಾಡಿಕೊಂಡಿದ್ದಾರೆ, ಪ್ರತಿನಿತ್ಯ 5000 ಕೆಜಿ ಅಕ್ಕಿ ಬಳಸುತ್ತಿದ್ದಾರೆ, ಈ ಮೂಲಕ ತಮ್ಮ ಕ್ಷೇತ್ರದಲ್ಲಿ ಬಡವರು ಹಸಿವಿನಿಂದ ಒದ್ದಾಡದಂತೆ ನೋಡಿಕೊಳ್ಳುತ್ತಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ ಹಾಗೂ ಈ ಮಾಹಿತಿಯನ್ನು ಆದಷ್ಟು ಹಂಚಿಕೊಳ್ಳಿ ರಾಜ್ಯದ ಎಲ್ಲಾ ರಾಜಕೀಯ ಮುಖಂಡರು ಈ ರೀತಿ ಪ್ರೇರಣೆ ಪಡೆದರೆ ಬಡವರು ನೆಮ್ಮದಿಯಾಗಿ ಇರಬಹುದು ಅಲ್ಲವೇ.

LEAVE A REPLY

Please enter your comment!
Please enter your name here