ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

0
4522

ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ ಅರ್ಜಿ‌ಸಲ್ಲಿಸಬಹುದು. ಆದರೆ ಅವರು MSA ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು. MSA ಅವರವರು ಕಲಿತ ಪ್ರೌಢಶಾಲೆಯಲ್ಲಿರುತ್ತದೆ. ಅಲ್ಲಿ ಇಲ್ಲದ ಪಕ್ಷದಲ್ಲಿ ವಿಭಾಗೀಯ ಕಛೇರಿಯಿಂದ ತರಿಸಿ ಅರ್ಜಿ ಸಲ್ಲಿಸಬಹುದು. ಅಂತವರು ತಮ್ಮ ಪ್ರೌಢಶಾಲೆಯನ್ನು ಸಂಪರ್ಕಿಸಬೇಕು.

2003 ರಿಂದ 2010 ರ ವರೆಗಿನ ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್ ಅಭ್ಯರ್ಥಿಗಳು ಕೂಡಾ ಈ ಬಾರಿಯ ಪೂರಕ ಪರೀಕ್ಷೆಗೆ ತಮ್ಮ ತಮ್ಮ ಪ್ರೌಢಶಾಲೆಯ ಮೂಲಕ ಹೆಸರು‌ ನೋಂದಾಯಿಸಬಹುದು.

2011 ರಿಂದ 2018 ರವರೆಗಿನ ಅಭ್ಯರ್ಥಿಗಳು ಈ ಬಾರಿಯ ಪೂರಕ ಪರೀಕ್ಷೆಗೆ ನೋಂದಾಯಿಸಲು ಅವಕಾಶ ಇರುವುದಿಲ್ಲ ಏಕೆಂದರೆ ಅವರಿಗೆ ಈಗಾಗಲೇ ಆರು ಪ್ರಯತ್ನಗಳ ಅವಕಾಶವನ್ನು ಇಲಾಖೆ ಈ ಹಿಂದೆಯೇ ನೀಡಿತ್ತು. ಆ‌ ಬಗ್ಗೆ ಸುತ್ತೋಲೆಯನ್ನು ಕೂಡಾ ಹೊರಡಿಸಿತ್ತು.

2019 ರ ಏಪ್ರಿಲ್ ತಿಂಗಳ ಮುಖ್ಯ ಪರೀಕ್ಷೆಗೆ ಮೊದಲ‌ ಬಾರಿಗೆ ( first attempt )ನೋಂದಾಯಿಸಿಕೊಂಡು ಫೇಲ್ ಆದ ರೆಗ್ಯುಲರ್ ಮತ್ತು ಪ್ರೈವೇಟ್ ರಿಪೀಟರ್ ಅಭ್ಯರ್ಥಿಗಳು ಕೂಡ ಈ ಬಾರಿಯ ಪರೀಕ್ಷೆಗೆ ಹೆಸರು ನೋಂದಾಯಿಸುವ ಮೂಲಕ ಸಲ್ಲಿಸಬಹುದು.

2020 ರ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ರೆಗ್ಯುಲರ್ ಮತ್ತು ಪ್ರೈವೇಟ್ ಅಭ್ಯರ್ಥಿಗಳು ಕೂಡಾ ಈ ಬಾರಿ ಅರ್ಜಿ ಸಲ್ಲಿಸಬಹುದು. 2021 ರ ಜುಲೈ ತಿಂಗಳಲ್ಲಿf ‌ನಡೆದ ಮುಖ್ಯ ಪರೀಕ್ಷೆಗೆ ಹೆಸರು ನೋಂದಾಯಿಸಿ ಕೋವಿಡ್ ಕಾರಣದಿಂದ ಅಥವಾ ಇತರ ಅನಾರೋಗ್ಯದ ಕಾರಣದಿಂದ ಗೈರು ಹಾಜರಾದವರು ಮತ್ತು ಪರೀಕ್ಷೆಗೆ ಶುಲ್ಕವನ್ನೇ ಕಟ್ಟದೆ ಹೆಸರು ನೋಂದಾಯಿಸದ ರೆಗ್ಯುಲರ್ ಅಭ್ಯರ್ಥಿಗಳು ಕೂಡಾ ಈ ಬಾರಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.

2021 ನೇ ಜುಲೈ ತಿಂಗಳ ಮುಖ್ಯ ಪರೀಕ್ಷೆಗೆ ಹೆಸರು ನೋಂದಾಯಿಸಿ ಕೋವಿಡ್ ಅಥವಾ ಮತ್ತಿತರ ಅನಾರೋಗ್ಯ ಕಾರಣದಿಂದ ಗೈರುಹಾಜರಾದ ಖಾಸಗಿ ( private ) ಅಭ್ಯರ್ಥಿಗಳು ಕೂಡಾ ಈ ಬಾರಿಯ ಪರೀಕ್ಷೆಗೆ ಹೆಸರು‌ ನೋಂದಾಯಿಸಬಹುದು.

ಒಂದು ವೇಳೆ 2021 ರ ಜುಲೈ ತಿಂಗಳಲ್ಲಿ ನಡೆದ ಮುಖ್ಯ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು ಅವರಿಗೆ ಅದು ಆರನೇ ( last attempt ) ಪ್ರಯತ್ನ ವಾಗಿದ್ದು ಅಂತವರಿಗೆ ಆ ಪರೀಕ್ಷೆಗೆ ಹಾಜರಾಗಲು ಕೋವಿಡ್ ಅಥವಾ ಇತರ ಅನಾರೋಗ್ಯ ಕಾರಣದಿಂದ ಸಾಧ್ಯವಾಗದೆ ಇದ್ದಲ್ಲಿ ಅವರು ಜುಲೈ ತಿಂಗಳನ್ನು ಆರನೇ ಪ್ರಯತ್ನ ಎಂದು ಭಾವಿಸದೆ ಈ ಬಾರಿಯ ಅವಕಾಶವನ್ನು ಬಳಸಿ ಕೊಳ್ಳಬಹುದು.

ಏಪ್ರಿಲ್ 2019ರ ಮುಖ್ಯ ಪರೀಕ್ಷೆಗೆ ಮೊದಲ ‌ಬಾರಿಗೆ ಹೆಸರು ನೋಂದಾಯಿಸಿದವರಿಗೆ ಈ ಬಾರಿಯ ಅವಕಾಶ ಕಡೆಯ ಅವಕಾಶವಾಗಿರುತ್ತದೆ. ಏಕೆಂದರೆ ಏಪ್ರಿಲ್ 2019, ಜೂನ್ 2019, ಜುಲೈ 2020, ಅಕ್ಟೋಬರ್ 2020, ಜುಲೈ 2021 ಈ‌ ಬಾರಿಯ ಸೆಪ್ಟೆಂಬರ್ 2021 ಸೇರಿದಾಗ ಆರನೇ ಪ್ರಯತ್ನ ವಾಗಲಿದೆ.

ಈ‌ಬಾರಿಯ ಅವಕಾಶವನ್ನು ಬಳಸದೆ ಇದ್ದರೆ ಅವರು ಮುಂದಿನ ದಿನಗಳಲ್ಲಿ ಹೊಸದಾಗಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು ಎಲ್ಲಾ ವಿಷಯಗಳಿಗೆ ಪರೀಕ್ಷೆ ಬರೆಯಬೇಕಾಗುತ್ತದೆ.

ಪ್ರಯೋಜನವೇನು? ಈ ಬಾರಿಯ ಪೂರಕ ಪರೀಕ್ಷೆ ಕೂಡಾ ಮೊನ್ನೆಯ ಮುಖ್ಯ ಪರೀಕ್ಷೆಯ ಹಾಗೆ ಆರೂ ವಿಷಯಗಳನ್ನು ಎರಡು ದಿನಗಳ ಪರೀಕ್ಷೆಗಳಾಗಿ ವಿಂಗಡಿಸಿ ನಡೆಸಲಾಗುತ್ತದೆ. ಅಂದರೆ 3 ಭಾಷಾ ವಿಷಯಗಳಿಗೆ ಒಂದು ದಿನ ಮತ್ತು 3 ಕೋರ್ ವಿಷಯಗಳಿಗೆ ಒಂದು ದಿನ ಈ ರೀತಿ ಎರಡು ದಿನ ನಡೆಯಲಿದೆ. ಪ್ರತಿ ವಿಷಯಕ್ಕೆ ತಲಾ 40 ಅಂಕ ನಿಗದಿಯಾಗಿರುತ್ತದೆ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಇರುತ್ತದೆ.

ಅರ್ಹರು ತಮ್ಮ ತಮ್ಮ ಪ್ರೌಢಶಾಲೆಯನ್ನು ಖುದ್ದಾಗಿ‌ ಸಂಪರ್ಕಿಸಿ ನಿಗದಿತ ಶುಲ್ಕ ಸಕಾಲದಲ್ಲಿ ಪಾವತಿಸಿ ಬೇಕಾದ ದಾಖಲೆ ನೀಡಿ ಹೆಸರು ನೋಂದಾಯಿಸಬೇಕಾಗುತ್ತದೆ. ಆಸಕ್ತರ ಮಾಹಿತಿಗಾಗಿ ಇದನ್ನು ಪ್ರಕಟಿಸಲಾಗಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here