ದೇವರಿಗೆ ತೆಂಗಿನಕಾಯಿ ಒಡೆಯುವ ಸಂಪ್ರದಾಯ ಪ್ರತಿಯೊಬ್ಬರೂ ಓದಲೇಬೇಕು !

0
5701

ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ಆಚಾರ ವಿಚಾರಗಳು, ಸಂಪ್ರದಾಯ ,ದೇವರು ಇದರ ಬಗ್ಗೆ ನಮ್ಮ ಹಿರಿಯರು ಪದ್ದತಿಯನ್ನು ಆಚರಿಸುತ್ತಾ ಬಂದಿದ್ದಾರೆ. ದೇವರು ಇರುವ ಪವಿತ್ರ ಸ್ಥಳವಾದ ದೇವಸ್ಥಾನಗಳಿಗೆ ಜನರು ಹೋಗುವುದು ವಾಡಿಕೆ. ಒಂದೊಂದು ದಿನಕ್ಕೆ ಒಂದೊಂದು ದೇವರ ದೇವಸ್ಥಾನಕ್ಕೆ ಹೋಗುತ್ತಾರೆ. ಸೋಮವಾರ ಈಶ್ವರನ ದೇವಸ್ಥಾನಕ್ಕೆ ಹೋದರೆ ,ಮಂಗಳವಾರ ಅಮ್ಮನವರ ದೇವಸ್ಥಾನ, ಗುರುವಾರ ಮಠಕ್ಕೆ ಹೋದರೆ ಶುಕ್ರವಾರ ಚಾಮುಂಡೇಶ್ವರಿ, ಮೂಕಾಂಬಿಕಾ, ಹೀಗೆ ಹೆಣ್ಣು ದೇವರ ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ. ಇದರಿಂದ ನೆಮ್ಮದಿ ಸಿಗುವುದರ ಜೊತೆಗೆ ಫಲ ಕೂಡ ದೊರೆಯುತ್ತದೆ.

ದೇವಸ್ಥಾನಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಹೊಂದಿರುತ್ತವೆ. ಏಕೆಂದರೆ ಅಲ್ಲಿ ಹೋದವರು ಹೆಚ್ಚು ಒಳ್ಳೆಯ ಮನಸ್ಥಿತಿಯಲ್ಲೇ ಇರುವುದರಿಂದ ಪಾಸಿಟಿವ್ ಎನರ್ಜಿ ಬಿಡುಗಡೆ ಆಗುವುದು. ಇದರಿಂದ ನಿಮಗೆ ಯಾವುದಾಎ ತಲೆ ಬಿಸಿ ಇದ್ದರೆ, ಟೆನ್ಷನ್, ಅಶಾಂತಿ, ಮನಸ್ಸಿನಲ್ಲಿ ಕಿರಿಕಿರಿ ಇದ್ದರೆ ದೇವಸ್ಥಾನಕ್ಕೆ ಭೇಟಿ ಇತ್ತರೆ ಒಂದು ರೀತಿಯ ನೆಮ್ಮದಿ ದೊರೆಯುತ್ತದೆ. ಇದು ಎಲ್ಲರ ಅನುಭವಕ್ಕೂ ಬಂದಿರುವಂತಹದ್ದು.

ದೇವಸ್ಥಾನಗಳಿಗೆ ಪೂಜೆ ಮಾಡಿಸುವುದು ಸಹಜ. ದೇವರ ಅನುಗ್ರಹ ಪಡೆಯಲು ಊದಿನ ಕಡ್ಡಿ,ಕರ್ಪೂರ ಹಚ್ಚುವುದು ಇದರಿಂದ ದೇವರಿಗೆ ಭಕ್ತಿ ಸಲ್ಲಿಸುವುದು ವಾಡಿಕೆ. ಇದರ ಜೊತೆ ತೆಂಗಿನ ಕಾಯಿ ಕೂಡ ಒಡೆಯುತ್ತಾರೆ. ದೇವರಿಗೆ ತೆಂಗಿನಕಾಯಿ ಒಡೆಯುವಾಗ ಅದು ಕೆಟ್ಟು ಹೋಗಿದ್ದರೆ ಏನು ಮಾಡಬೇಕು ಎಂಬ ಸಂದೇಹ ಎಲ್ಲರದ್ದು. ಕೆಲವರಿಗಂತೂ ಭಯವಾಗುತ್ತದೆ. ಏನಾದರೂ ಕೆಡುಕು ಉಂಟಾಗುತ್ತದೆಂದು ,ಅಪಶಕುನದ ಸಂಕೇತವಾ ನೋಡೋಣ ಬನ್ನಿ.

ಮನೆಯಲ್ಲಿ ಕಾಯಿ ಒಡೆಯುವಾಗ ಅದು ಕೆಟ್ಟಿದ್ದರೆ ಏನು ಮಾಡಬೇಕೆಂದರೆ ಕೂಡಲೇ ಕೈಕಾಲು ಅಥವಾ ಮೊಣಕಾಲು ತೊಳೆದು ದೀಪ ಹಚ್ಚಿ ಇನ್ನೊಂದು ಕಾಯಿಯನ್ನು ಒಡೆಯಬೇಕು. ತೆಂಗಿನಕಾಯಿ ಕೆಟ್ಟಿದ್ದರೆ ಹೆದರಬೇಡಿ. ಹಾಗೇ ಕೆಟ್ಟರೆ ನಮ್ಮ ದೃಷ್ಟಿ ದೋಷಗಳು ಹೋಗುತ್ತವೆ ಎಂದರ್ಥ.

ಪ್ರತಿಯೊಬ್ಬ ಸಮಸ್ಯೆಗೂ ಪರಿಷ್ಕಾರ ಇರುತ್ತೆ. ಸಮಸ್ಯೆ ಇದೆ ಎಂದು ತಲೆಕಡಿಸಿಕೊಳ್ಳಬಾರದು. ತೆಂಗಿನಕಾಯಿ ಕೆಟ್ಟರೆ ಒಳ್ಳೆಯದೇ. ಅದು ನಮಗೆ ದೃಷ್ಟಿ ತಗುಲಿದ್ದರೆ ನಿವಾರಣೆ ಆಗುತ್ತೆ ಅಂತ ಅರ್ಥ.

ಮನೆಯಲ್ಲಿ ಪ್ರತಿ ದಿನ ಪೂಜೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಮಗೆ ಸಕಾರಾತ್ಮಕ ಶಕ್ತಿಯು ಬೆಳೆಯುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ದಿಯಾಗುತ್ತೆ. ಮನಸ್ಸಿನಲ್ಲಿ ಶಾಂತಿ ದೊರೆಯುತ್ತದೆ.

LEAVE A REPLY

Please enter your comment!
Please enter your name here