ಕನ್ನಡದ ಬಿಗ್ಬಾಸ್ ಕಳೆದ ಎರಡು ಸೀಜನ್’ಗಳಿಂದ ಅಷ್ಟಾಗಿ ವೀಕ್ಷಕರಿಗೆ ಹಿಡಿಸುತ್ತಿಲ್ಲ. ಒಳ್ಳೆ ಹುಡುಗ ಪ್ರಥಮ್ ಕಾಲದಲ್ಲೇ ಮನರಂಜನೆ ಅನ್ನುವುದು ಮುಗಿದು ಹೋದಂತಿದೆ. ಈ ಸಲ ಕುರಿ ಪ್ರತಾಪ್ ಇದ್ದರೂ ಪ್ರೇಕ್ಷಕರಿಗೆ ನಗು ಬರುತ್ತಿಲ್ಲ. ಈ ಸಲ ಅತಿ ಹೆಚ್ಚು ಸುದ್ದಿಯಾಗಿರುವರೆಂದರೆ ಅದು ಕಿಶನ್ ಇರಬೇಕು. ಪ್ರಾರಂಭದಲ್ಲಿ ಈತನು ಹತ್ತರೊಳಗೊಬ್ಬ ಸಾಮಾನ್ಯ ಸ್ಪರ್ಧಿ ಎಂದೇ ತಿಳಿದಿದ್ದರು. ಆದರೆ ಆತ ಇತರ ಪ್ರಮುಖ ಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಿದ್ದಾನೆ.
ಕಿಶನ್ ಬಿಗ್ ಬಾಸ್ ನಲ್ಲಿ ಪ್ಲೇ ಬಾಯ್ ಆಟ ಶುರು ಮಾಡಿದ್ದಾರೆ. ಚಂದನಾರನ್ನು ಕಿಶನ್ ನೀವು ನನ್ನ ಲೈಫ್ ಲಾಂಗ್ ತಂಗಿ ಕಣ್ರೀ ಅಂದಿದ್ದ ಕಿಶನ್ ಈಗ ಉಲ್ಟಾ ಹೊಡೆದಿದ್ದಾರೆ. ಚಂದನಾಳಿಗೆ ನೀವಂದ್ರೆ ನಂಗಿಷ್ಟ ಎಂದಿದ್ದಾರೆ. ನಿಮ್ಮನ್ನು ಬಿಟ್ಟರೆ ನನಗೆ ಬೇರಾರು ಇಷ್ಟ ಇಲ್ಲ ಎಂದು ಹೇಳಿದ್ದಾರೆ.ಇದನ್ನು ಕೇಳಿದ ಕನ್ನಡದ ಪ್ರತಿಭಾವಂತ ಗಾಯಕ ವಾಸುಕಿ ವೈಭವ್ ತಲೆ ಚಚ್ಚಿಕೊಂಡಿದ್ದಾರೆ. ದೇವರೇ ನನಗೆ ಕರೆದುಕೊಂಡು ಬಿಡಪ್ಪಾ ಎಂದು ವ್ಯಂಗ್ಯವಾಡಿದ್ದಾರೆ.
ಆದದ್ದು ಇಷ್ಟು. ಚಂದನಾ ಮತ್ತು ವಾಸುಕಿ ವೈಭವ್ ಮುಂದಿನ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡಿದ್ದರು.ಆಗ ಕಿಶನ್ ಅವರ ಬಳಿ ಬಂದು ಚಂದನಾರಿಗೆ ಸಾರಿ ಕೇಳುತ್ತಾರೆ.”ನಾನು ರೇಗಿಸಿದ್ದಕ್ಕೇ ಶನಿವಾರ ನೀವು ತುಂಬಾ ಬೇಜಾರು ಮಾಡಿಕೊಂಡ್ರಿ. ಇದನ್ನು ಕಂಡು ನನಗೇ ಒಂಥರಾ ಅನಿಸಿತು. ದೀಪಿಕಾ ಬಳಿ ನಾನು ಚಂದನಾಳಿಗೆ ಬೇಜಾರು ಮಾಡಬಾರದಿತ್ತು ಎಂದು ಹೇಳಿದ್ದೆ. ಇಷ್ಟ ಇಲ್ಲ ಅಂದ ಮೇಲೆ ಬಿಟ್ಟುಬಿಡೋಣ ಅಂತ ಹೇಳಿದ್ದೆ. ಅದಾದ ಮೇಲೆ ನಾನು ನಿಮ್ಮ ತಂಟೆಗೆ ಬಂದಿಲ್ಲ.ನನ್ನ ಪಾಡಿಗೆ ಇದ್ದೇನೆ. ನೀವೇ ನನಗೆ ಇಷ್ಟ. ನೀವಲ್ಲದೇ ಬೇರೆ ಯಾರೂ ನನಗೆ ಇಷ್ಟ ಇಲ್ಲ ” ಎಂದು ಪುಂಕಾನುಪುಂಕವಾಗಿ ಡೈಲಾಗ್ ಹೊಡೆಯುತ್ತಾರೆ. ಇದನ್ನು ಕೇಳಿಸಿಕೊಂಡ ವಾಸುಕಿ ವೈಭವ್ ಅಚ್ಚರಿಯಿಂದ ಇನ್ನು ಏನೆಲ್ಲಾ ನೋಡಬೇಕು ಅಂತ ಹೇಳ್ತಾರೆ.
ಅದಕ್ಕೆ ಚಂದನಾ ಇದನ್ನು ಕೂಲಾಗಿಯೇ ತೆಗೆದುಕೊಂಡರು. ನಿಮ್ಮ ಮೇಲೆ ನನಗೆ ಯಾವುದೇ ಕೋಪ ಅಥವಾ ಬೇಜಾರು ಇಲ್ಲ. ನಾವಿಬ್ಬರೂ ಫ್ರೆಂಡ್ ಆಗಿಯೇ ಇರೋಣ ಎಂದು ಜಗಳಕ್ಕೆ ವಿರಾಮ ಹಾಕಿದರು.
ಬಿಗ್ಬಾಸ್ ಅನ್ನುವುದು ಮೇಲು ನೋಟಕ್ಕೆ ನಮಗೆ ನಿಜವಾದ ಸ್ಪರ್ಧೆ ಅನ್ನಿಸುತ್ತೆ. ಆದರೆ ಇವರ ಆಟವನ್ನೆಲ್ಲಾ ನೋಡುತ್ತಿದ್ದರೆ ಇದು ಕೇವಲ ಪೂರ್ವ ನಿರ್ಧರಿತ ಶೊ ಎಂದು ಗೊತ್ತಾಗುತ್ತದೆ. ಒಟ್ಟಿನಲ್ಲಿ ಮನರಂಜನೆ ನೀಡುವ ಭರದಲ್ಲಿ ವೀಕ್ಷಕರಿಗೆ ಏನನ್ನು ಹೇಳಲು ಹೊರಟಿದ್ದಾರೆ ಇವರು ಎಂಬುದು ಅರ್ಥವಾಗುತ್ತಿಲ್ಲ.