ಶ್ರೀನಗರ ಕಿಟ್ಟಿ ಅವರ ಸಹೋದರ ಕರೋನ ದಿಂದ ಸಾವು!

0
7463

ಕರುನಾಡಲ್ಲಿ ಕೊರೋನ ಮರಣ ಮೃದಂಗ ಬಾರಿಸುತ್ತಿದೆ ಅದರಲ್ಲೂ ಬೆಂಗಳೂರಿನಲ್ಲಿ ಇದರ ಪ್ರಮಾಣ ಅತಿ ಹೆಚ್ಚಾಗಿದೆ ಆದಕಾರಣ ಕನ್ನಡಿಗರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು ಕೆಲವು ಮಾಧ್ಯಮಗಳ ಸುದ್ದಿಯ ಪ್ರಕಾರ ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟ ಶ್ರೀನಗರ ಕಿಟ್ಟಿ ಅವರ ಸಹೋದರನಿಗು ಕರೋನವೈರಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೌದು ನಾಯಕ ನಟ ಶ್ರೀನಗರ ಕಿಟ್ಟಿ ಅವರ ಸಹೋದರರಾದ ಶಂಕರಣ್ಣ ಅವರು ಇದೇ ಜೂನ್ ತಿಂಗಳ 29 ನೇ ತಾರೀಕು ಹೃದಯಘಾತದಿಂದ ಮರಣ ಹೊಂದಿದ್ದರು, ಮರಣ ಹೊಂದಿದ ಬಳಿಕ ಸರ್ಕಾರಿ ನಿಯಮಾವಳಿಯಂತೆ ಅವರಿಗೂ ಸಹ ಕರೋನ ಪರೀಕ್ಷೆ ಮಾಡಲಾಗಿತ್ತು, ನಂತರ ಸರ್ಕಾರದ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಗಿದೆ.

ಕರೋನ ಪರೀಕ್ಷೆಯ ವರದಿ ಬಂದಿದ್ದು ಶಂಕರಣ್ಣ ಅವರಿಗೆ ಕರೋನವೈರಸ್ ತಗುಲಿದ್ದು ದೃಢವಾಗಿದೆ, ಆದಕಾರಣ ಶ್ರೀನಗರ ಕಿಟ್ಟಿ ಅವರ ಕುಟುಂಬದ ಪ್ರತಿಯೊಬ್ಬನಿಗೂ ಪರೀಕ್ಷೆ ನಡೆಸಲಾಗಿದ್ದು ಕುಟುಂಬದವರೆಲ್ಲರಿಗೂ ಕರೋನ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here