ಲಕ್ಷ್ಮಿಯನ್ನು ಸಂತೃಪ್ತಿ ಪಡಿಸುವುದು ಅಷ್ಟು ಸುಲಭದ ವಿಚಾರವಲ್ಲ, ಹಾಗೆ ಲಕ್ಷ್ಮಿ ಕೃಪೆ ಇಲ್ಲದ ಕಲಿಯುಗದಲ್ಲಿ ಯಾವ ಕೆಲಸವೂ ಸರಿಯಾಗಿ ನಡೆಯುವುದೇ ಇಲ್ಲ ಅಲ್ಲವೇ, ಸುಭದ್ರ ಜೀವನಕ್ಕಾಗಿ ಒಂದು ಒತ್ತು ಊಟಕ್ಕಾಗಿ, ಮಾನ ಮುಚ್ಚುವ ಬಟ್ಟೆಗಾಗಿ ಅಥವಾ ಬೆಚ್ಚಗೆ ಮಲಗುವ ಸೂರಿಗಾಗಿ ಕಷ್ಟ ಪಟ್ಟು ಕೆಲಸ ಮಾಡುವುದರ ಜೊತೆಗೆ ಇಂದು ನಾವು ನಿಮಗೆ ತಿಳಿಸುವ ಕೆಲಸಗಳನ್ನು ರಾತ್ರಿ ಮಲಗುವ ಮುಂಚೆ ಮಾಡಿದರೆ ಅದೃಷ್ಟವು ನಿಮ್ಮ ಬಳಿಗೆ ಬರುತ್ತದೆ.
ಕೆಲವು ಮನೆಯಲ್ಲಿ ಹೆಂಗಸರು ಬೆಳಗ್ಗೆ ಇಂದ ದುಡಿದು ಸುಸ್ತಾಗಿ ಊಟ ಮಾಡಿದ ನಂತರ ಎಂಜಲು ಪಾತ್ರೆಗಳನ್ನು ತೊಳೆಯದೆ ಹಾಗೆ ಬಿಟ್ಟು ಮಲುಗುವುದುಂಟು ಹೀಗೆ ನಿಮ್ಮ ಮನೆಯಲಿ ಮಾಡುತ್ತಿದ್ದರೆ ಮೊದಲು ಈ ಅಭ್ಯಾಸವನ್ನು ಬಿಟ್ಟುಬಿಡಬೇಕು ಕಾರಣ ಶುಚಿ ಇದ್ದಲ್ಲಿ ಮಾತ್ರ ಲಕ್ಷ್ಮಿ ಇರುವುದು ಹಾಗು ಅನ್ನ ಅನ್ನಪೂರ್ಣೇಶ್ವರಿಗೆ ಸಮಾನ, ಹೀಗೆ ಮಾಡುವುದು ತಾಯಿಗೆ ಅವಮಾನಿಸಿದಂತೆ.
ಇನ್ನು ಕೆಲವು ಹೆಂಗಸರು ರಾತ್ರಿ ಕೂದಲು ಬಿಚ್ಚಿಕೊಂಡು ಮಲಗುತ್ತಾರೆ, ಯಾವುದೇ ಕಾರಣಕ್ಕೂ ಹೀಗೆ ಮಾಡಲೇ ಬೇಡಿ, ಕೂದಲು ಕೆದರಿಕೊಳ್ಳುವುದು ರಾಕ್ಷಸಿಯರ ಗುಣ ಲಕ್ಷ್ಮಿ ಇದನ್ನು ಸಹಿಸುವುದಿಲ್ಲ ದರಿದ್ರ ದೇವತೆ ಪ್ರಬಲವಾಗುತ್ತಾಳೆ.
ರಾತ್ರಿ ಕತ್ತಲಾದ ಮೇಲೆ ಯಾವುದೇ ಕಾರಣಕ್ಕೂ ಮೊಸರು ಅಥವಾ ಹಾಲನ್ನು ಯಾರಿಗೂ ದಾನವಾಗಿ ನೀಡಬೇಡಿ ಕಾರಣ ಹಾಲು ಮತ್ತು ಮೊಸರು ಜೊತೆಯಲ್ಲಿ ಅವರ ಮನೆಗೆ ಲಕ್ಷ್ಮಿಯು ಹೊರಟುಹೋಗುತ್ತಾಳೆ.
ರಾತ್ರ ಮಲಗುವಾಗ ತಲೆಯ ಬಳಿ ನೀರಿನ ಬಟ್ಟಲು ಇಟ್ಟು ಮಲಗುವ ಅಭ್ಯಾಸ ಬಹಳಷ್ಟು ಜನರಿಗೆ ಇದೆ, ಈ ಅಭ್ಯಾಸ ಬಿಟ್ಟು ಸ್ವಲ್ಪ ದೂರದಲ್ಲಿ ನೀರನ್ನು ಇಟ್ಟು ಮಲಗಿ ಇಲ್ಲವಾದರೆ ದರಿದ್ರ ನಿಮ್ಮನ್ನು ಕಾಡಲು ಶುರು ಮಾಡುತ್ತದೆ.
ಮನೆಯಲ್ಲಿ ಹಿರಿಯ ಮಹಿಳೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಒಂದು ಇಡೀ ಉಪ್ಪನ್ನು ಸಣ್ಣ ಬಟ್ಟೆಯಲ್ಲಿ ಕಟ್ಟಿ ಮನೆಯ ಮೂಲೆಗಳಲ್ಲಿ ಇಟ್ಟು ಬೆಳಗ್ಗೆ ಎಲ್ಲರು ಎದ್ದೇಳುವ ಮುನ್ನ ಅದನ್ನ ಯಾರು ತಿರುಗಾಡದ ಸ್ಥಳದಲ್ಲಿ ಬಿಸಾಕ ಬೇಕು.