ವಿಶ್ವದ ದೊಡ್ಡಣ್ಣ ಅಮೆರಿಕ ಕರೋನಾವೈರಸ್ ನಿಂದ ತತ್ತರಿಸಿಹೋಗಿದೆ ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಟೀಕೆಗಳು ಅಮೆರಿಕಾದಲ್ಲಿ ಸಾಮಾನ್ಯವಾಗಿದೆ ಇಂತಹ ಸಮಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಶುರುವಾಗಲಿದ್ದು ಇದಕ್ಕೆ ಹೊಸ ಹೆಸರು ಕೇಳಿ ಬಂದಿದೆ ಅಮೆರಿಕದಲ್ಲಿ ಕೋಟ್ಯಾಧಿಪತಿ hip-hop ಸ್ಟಾರ್ ಎಂದು ಗುರುತಿಸಿಕೊಂಡಿರುವ ಕ್ಯಾನ್ ವೇಸ್ಟ್ ಅವರು ಈ ಬಾರಿ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಯಾರು ಕ್ಯಾನ್ ವೆಸ್ಟ್ : ಅಮೆರಿಕದಲ್ಲಿನ ಪ್ರಖ್ಯಾತ ಹಾಡುಗಾರ ಇವರು, ಅಷ್ಟೇ ಅಲ್ಲದೆ ಗೀತರಚನೆ ಸಂಗೀತ ಸಂಯೋಜನೆ, ನಿರ್ಮಾಣ, ಹಾಗೂ ಇತರ ಉದ್ಯಮಿಗಳು ಜೊತೆಯಲ್ಲಿ ಫ್ಯಾಶನ್ ಡಿಸೈನರ್ ಕೂಡ ಹಾಗೆ ಕೆಲಸಮಾಡುವ ಕ್ಯಾನ್ ವೇಸ್ಟ್ ರಾಜಕಾರಣಿಯಾಗಿ ಗುರುತಿಸಿಕೊಂಡಿರುವುದು ವಿಶೇಷ.
ಕ್ಯಾನ್ ವಿಸ್ಟ್ ಅವರ ವಾರ್ಷಿಕ ಆದಾಯ : ಅಮೆರಿಕಾದ ಸುದ್ದಿಸಂಸ್ಥೆ ಯಾದ ಫೋರ್ಬ್ ವರದಿ ಪ್ರಕಾರವಾಗಿ ಒಂದು ವರ್ಷಕ್ಕೆ ಇವರ ಆದಾಯ ಬರೋಬ್ಬರಿ 1.3 ಬಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ 97,08,32,85,000 ರೂಪಾಯಿ, ಇಷ್ಟೊಂದು ವಾರ್ಷಿಕ ಆದಾಯವನ್ನು ಹೊಂದಿರುವ ಇವರು ಇವರ ಪ್ರಸ್ತುತ ಆಸ್ತಿ 3.3 ಬಿಲಿಯನ್ ಡಾಲರ್ ಭಾರತೀಯ ರೂಪಾಯಿಯಲ್ಲಿ 2,46,44,21,85,000 ರುಪಾಯಿ, ಅಷ್ಟೇ ಅಲ್ಲ ಇವರ ಹೆಂಡತಿ ಕಿಮ್ ಕದರ್ಶಿಯನ್ ಅವರ ಆಸ್ತಿ ಮೌಲ್ಯವನ್ನು ಸೇರ್ಪಡೆ ಮಾಡಿದರೆ ದಂಪತಿಗಳ ಒಟ್ಟು ಆಸ್ತಿ ಮೌಲ್ಯ 4.1 ಬಿಲಿಯನ್ ಡಾಲರ್ ಆಗುತ್ತದೆ ಭಾರತೀಯ ಕರೆನ್ಸಿಯಲ್ಲಿ 3,06,18,57,45,000 ರೂಪಾಯಿಗಳು.
ಹಾಗಾದರೆ ಅಮೆರಿಕದಲ್ಲಿ ಅಧ್ಯಕ್ಷ ಚುನಾವಣೆ ನಡೆಯುವುದು ಯಾವಾಗ ? ಅಮೆರಿಕದ ಅಧ್ಯಕ್ಷ ಚುನಾವಣೆಯು ಇದೇ ನವೆಂಬರ್ 3 ನೇ ತಾರೀಕು ನಡೆಯಲಿದೆ ಈ ದಿನಾಂಕದೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆ ಆಗುವುದಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಯುಎಸ್ ಉಪಾಧ್ಯಕ್ಷ ಹಾಗೂ ಡಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬಿಡೆನ್ ಕಣದಲ್ಲಿದ್ದಾರೆ.