ಮಧ್ಯಮವರ್ಗದವರು ಒಂದು ಕಾರನ್ನು ಖರೀದಿಸಬೇಕಾದರೆ ಇಷ್ಟೆಲ್ಲಾ ಕಷ್ಟಗಳನ್ನು ಪಡಬೇಕು ಮತ್ತು ಅದಕ್ಕಾಗಿ ಎಷ್ಟು ಸಮಯಗಳನ್ನು ನಿಗದಿಪಡಿಸಬೇಕು, ಅಷ್ಟೆಲ್ಲ ಮಾಡಿದರು ಐದರಿಂದ ಹತ್ತು ಲಕ್ಷ ರೂಪಾಯಿ ಒಳಗಿನ ಕಾರು ಖರೀದಿ ಮಾಡಿ ಬಿಟ್ಟರೆ ಇದೊಂದು ಸಂತಸದ ವಿಷಯವೇ ಸರಿ, ಆದರೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಇದು ಯಾವುದೂ ಒಂದು ಲೆಕ್ಕವೇ ಅಲ್ಲ, ತಿರುವನಂತಪುರಂ ಮೂಲದ ಉದ್ಯಮಿ ಒಬ್ಬ ತನ್ನ ನೂತನ ಪೋರ್ಷೆ ಕಾರಿನ ನಂಬರ್ ಗಾಗಿ ಬರೋಬ್ಬರಿ 31 ಲಕ್ಷ ರೂಪಾಯಿಗಳನ್ನು ನೀಡಿದ್ದಾನೆ.
ತಿರುವನಂತಪುರ ಮೂಲದ ಈ ಉದ್ಯಮಿ ಹೆಸರು ಕೆಎಸ್ ಬಾಲಗೋಪಾಲನ ಇವರು 86 ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನು ಖರೀದಿಸಿದ್ದು ಆ ಕಾರಿಗೆ ನಂಬರ್ ಗಾಗಿ 31 ಲಕ್ಷ ರೂಪಾಯಿ ನೀಡಿದ್ದಾರೆ.
KA-01-CK-01 ಎನ್ನುವ ಈ ನಂಬರ್ ಅನ್ನು ಹರಾಜಿಗೆ ಇಡಲಾಗಿತ್ತು, ಹಾಗೂ ಹರಾಜಿನಲ್ಲಿ ಈ ನಂಬರಿನ ಬೆಲೆ 25 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು, ಈ ನಂಬರನ್ನು ಪಡೆಯಲು ರಾಜಕಾರಣಿಗಳು ಉದ್ಯಮಿಗಳು ಬಹುತೇಕ ಮಂದಿ ಅಲ್ಲಿ ಜಮಾಯಿಸಿದ್ದರು, ಹರಾಜು ಪ್ರಾರಂಭವಾದ ಮರುಕ್ಷಣವೇ ಬಾಲಗೋಪಾಲ ಒಂದೇ ಸರಿ 30 ಲಕ್ಷಕ್ಕೆ ಏರಿಸಿ ಬಿಟ್ಟರು, ಇತ್ತ ನಂಬರ್ ಖರೀದಿ ಮಾಡಲು ಬಂದಿದ್ದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಉಸಿರು ಬಿಡದೆ ಸುಮ್ಮನೆ ಕೂತು ಬಿಟ್ಟರು, ನಂಬರ್ ಬಾಲಗೋಪಾಲನ ಪಾಲಾಯಿತು.
ಈ ನಂಬರನ್ನು ಪಡೆಯಲು ಮೊದಲು ಒಂದು ಲಕ್ಷ ರಿಸೀವ್ ಮಾಡಿ ಬರಬೇಕಿತ್ತು ನಂತರ 30 ಲಕ್ಷ ಒಟ್ಟಿನಲ್ಲಿ 31 ಲಕ್ಷ ರೂಪಾಯಿಗಳನ್ನು ಕೊಟ್ಟು ಬಾಲಗೋಪಾಲನ ಅವರು ಖರೀದಿಸಿದರು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.