ನೋ ಪಾರ್ಕಿಂಗ್ ನಲ್ಲಿರುವ ಗಾಡಿಯನ್ನು ಪೊಲೀಸರು ತೆಗೆದುಕೊಂಡು ಹೋಗುವ ಮೊದಲು ಈ ಕ್ರಮಗಳನ್ನು ಪಾಲಿಸಲೇ ಬೇಕು..!!

0
7674

ನಗರದಲ್ಲಿ ಜನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ, ಇನೊಂದೆಡೆ ದ್ವಿಚಕ್ರ ವಾಹನಗಳು ಕೂಡ, ಹೀಗಿರುವಾಗ ನಗರದಲ್ಲಿ ಕೆಲವೊಂದೆಡೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಬೇರೆ ಇಲ್ಲ, ಎರಡು ನಿಮಿಷದಲ್ಲಿ ಕೆಲಸ ಮುಗಿಸಿ ಬಂದುಬಿಡೋಣ ಅಂತ ಗಾಡಿ ಏನಾದರು ಅಲ್ಲೇ ರಸ್ತೆ ಪಕ್ಕ ಬಿಟ್ಟು ಹೋದರೆ ಆಯ್ತು, ಪೋಲಿಸ್ ವಾಹನ ಬಂದು ನಿಮ್ಮ ವಾಹನ ತೆಗೆದುಕೊಂಡು ಹೋಗಿಬಿಡುತ್ತಾರೆ. ಇತ್ತೀಚಿಗೆ ನೋ ಪಾರ್ಕಿಂಗ್ ದಂಡ ಬೇರೆ ಭಾರಿ ಹೆಚ್ಚಾಗಿದೆ. ಆದರೆ ನೀವು ಇಲ್ಲಿ ತಿಳಿದುಕೊಳ್ಳುವ ವಿಚಾರ ಬಹಳ ಇದೆ. ಸುಮ್ಮನೆ ಇದ್ದಕ್ಕಿದ ಹಾಗೆ ಪೋಲಿಸ್ ಬಂದು ನಿಮ್ಮ ವಾಹನ ಎತ್ತಿ ಕೊಂಡು ಹೋಗುವ ಹಾಗಿಲ್ಲ, ನಿಮ್ಮ ವಾಹನವನ್ನು ಮುಟ್ಟುವ ಮೊದಲು ಅವರದ್ದೇ ಆದ ನೀತಿ ನಿಯಮಗಳಿರುತ್ತವೆ ಹಾಗೆ ಅವರು ಅದನ್ನು ಪಾಲಿಸಲೇ ಬೇಕು. ಹಾಗದರೆ ಆ ನಿಯಮಗಳಾದರು ಏನು ಮುಂದೆ ಓದಿ.

ನಿಯಮ 1 : ಒಂದು ವೇಳೆ ಯಾವುದಾದರು ಗಾಡಿ ನೋ ಪಾರ್ಕಿಂಗ್ ಜಾಗದಲ್ಲಿದ್ದರೆ, ಏಕಾ ಏಕಿ ತೆಗೆದುಕೊಂಡು ಹೋಗುವ ಹಾಗಿಲ್ಲ, ಮೊದಲು ಆ ನೋ ಪಾರ್ಕಿಂಗ್ ನಲ್ಲಿರುವ ವಾಹಾನದ ನಂಬರನ್ನು ಪೋಲಿಸ್ರು ಮೈಕಿನಲ್ಲಿ ಜೋರಾಗಿ ಹೇಳಬೇಕು.

ನಿಯಮ 2 : ಸಂಚಾರಿ ಪೊಲೀಸರು ಗಾಡಿ ತೆಗೆದುಕೊಂಡು ಹೋಗುವಾಗ, ತಮ್ಮ ಟೂಯಿಂಗ್ ವಾಹನದಲ್ಲಿ ಮೈಕ್ ಕಡ್ಡಾಯವಾಗಿ ಹೊಂದಿರಬೇಕು.

ನಿಯಮ 3 : ನೋ ಪಾರ್ಕಿಂಗ್ನಲ್ಲಿರುವ ದ್ವಿಚಕ್ರ ವಾಹನಕ್ಕೆ ೭೫೦ ರೂ ಗಳು ಹಾಗು ಕಾರ್ ಗಳಿಗೆ ೧,೧೦೦ ರೂ ಗಳು ದಂಡ ಕಟ್ಟಬೇಕಾಗುತ್ತದೆ, ನೀವು ಕಟ್ಟುವ ಈ ದಂಡದಲ್ಲಿ 100 ರೂ ಮಾತ್ರ ನೋ ಪಾರ್ಕಿಂಗ್ ದಂಡವಾಗಿರುತ್ತದೆ. ಮಿಕ್ಕ ಹಣವೆಲ್ಲ ಟೂಯಿಂಗ್ ಶುಲ್ಕವಾಗಿರುತ್ತದೆ.

ನಿಯಮ 4 : ನೋ ಪಾರ್ಕಿಂಗ್ ನಲ್ಲಿರುವ ಗಾಡಿ ಸಂಖ್ಯೆಯನ್ನು ಬರೀ ಕೂಗುವುದೇ ಅಲ್ಲದೆ, ಅದೇ ಸ್ಥಳದಲ್ಲಿ 5 ನಿಮಿಷಗಳ ಕಾಲ ಕಾಯಬೇಕು. ಒಂದು ವೇಳೆ ವಾಹನದ ಮಾಲೀಕರು ಬರದೆ ಇದ್ದಾಗ, ಆಗ ಪೋಲಿಸ್ ಆ ವಾಹನವನ್ನು ತೆಗೆದುಕೊಂಡು ಹೋಗಬಹುದು. ಇದು ಸ್ವತಃ ಸಂಚಾರಿ ಪೋಲಿಸ್ ಕಮಿಷನರ್ ನೀಡಿರುವ ಆದೇಶವಾಗಿರುತ್ತದೆ ಹಾಗು 5 ನಿಮಿಷದ ಒಳಗೆ ಆ ವಾಹನದ ಮಾಲೀಕರು ಬಂದರೆ ಅವರ ಬಳಿ ಅಲ್ಲಿಯೇ 100 ರೂ ದಂಡ ಕಟ್ಟಿಸಿಕೊಂಡು ವಾಹನವನ್ನು ನೀಡಬೇಕು ಹಾಗು ಯಾವುದೇ ಟೂಯಿಂಗ್ ಶುಲ್ಕ ಪಾವತಿಸಿ ಕೊಳ್ಳುವಂತಿಲ್ಲ ಈ ರೀತಿ ನಡೆದು ಕೊಳ್ಳದಿದ್ದಲ್ಲಿ ಅಂತಹ ಪೋಲಿಸರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಸ್ವತಃ ಪೋಲಿಸ್ ಕಮಿಷನರ್ ರೆ ಹೇಳಿದ್ದರು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here