ನಿಮಗೆ ಆಶ್ಚರ್ಯವೆನಿಸಿದರೂ ಈ ಮಾಹಿತಿ ನೂರಕ್ಕೆ ನೂರು ಸತ್ಯ, ಭಾರತ ದೇಶದಲ್ಲಿ ಹಲವು ರೀತಿಯ ಅಚ್ಚರಿಗಳನ್ನು ಮೂಡಿಸುವ ದೇವಸ್ಥಾನಗಳು ಇದೆ, ಅಂತಹ ಅಚ್ಚರಿಗಳಲ್ಲಿ ಈ ದೇವಸ್ಥಾನವು ಸಹ ಒಂದು ಎಂದರೆ ತಪ್ಪಾಗಲಾರದು, ಸಾಮಾನ್ಯವಾಗಿ ಇತರ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದವಾಗಿ ತಿನ್ನುವ ಪದಾರ್ಥಗಳಾದ ಪುಳಿಯೋಗರೆ ಮೊಸರನ್ನ ಕೇಸರಿಬಾತ್ ಕೊಡಬಹುದು ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಅನ್ನಪೂರ್ಣೇಶ್ವರಿ ಅಂತಹ ಕ್ಷೇತ್ರಗಳಲ್ಲಿ ಊಟದ ವ್ಯವಸ್ಥೆಯೂ ಇರುವುದುಂಟು, ಆದರೆ ಇಂದು ನಾವು ನಿಮಗೆ ತಿಳಿಸುವ ದೇವಾಲಯದಲ್ಲಿ ಪ್ರಸಾದವಾಗಿ ಚಿನ್ನ ಮತ್ತು ಬೆಳ್ಳಿಯನ್ನು ಕೊಡುತ್ತಾರೆ.
ಭಾರತದಲ್ಲಿ ಮಧ್ಯಪ್ರದೇಶದ ರತ್ಲಂ ಎಂಬ ಜಿಲ್ಲೆ ಇದ್ದು ಇಲ್ಲಿ ನಾವು ತಿಳಿಸುವ ಮಹಾಲಕ್ಷ್ಮಿ ದೇವಾಲಯವಿದೆ, ಈ ರತ್ಲಂ ಜಿಲ್ಲೆಯು ಬಂಗಾರ ಮತ್ತು ಸೀರೆಗಳಿಗೆ ಬಹಳಷ್ಟು ಹೆಸರುವಾಸಿ, ಇದೇ ಕಾರಣಕ್ಕಾಗಿ ರತ್ನಮ್ಮ ಮಹಾಲಕ್ಷ್ಮಿ ಆಲಯ ಅತ್ಯಂತ ಸುಪ್ರಸಿದ್ಧ ವಾಗಿದ್ದು ಇಲ್ಲಿ ಪ್ರತಿವರ್ಷ ರೂಪದಲ್ಲಿ ಕೋಟ್ಯಾಂತರ ಹಣ ಸಂಗ್ರಹವಾಗುತ್ತದೆ, ಇಲ್ಲಿನ ಗರ್ಭಗುಡಿಯ ದೇವರು ಸರಿ ಸುಮಾರು 100 ಕೋಟಿ ಬೆಲೆ ಬಾಳುವಷ್ಟು ಆಭರಣಗಳಿಂದ ಅಲಂಕರಿಸಲಾಗಿರುತ್ತದೆ, ಹಾಗೂ ಭಕ್ತರಿಂದ ಬರುವ ಬಂಗಾರ ಮತ್ತು ಬೆಳ್ಳಿ ರೂಪದ ದೇಣಿಗೆಯನ್ನು ಮತ್ತೆ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ದೇಶದ ಮೂಲೆ ಮೂಲೆಯಿಂದಲೂ ಈ ದೇವಿಯ ದರ್ಶನ ಹಾಗೂ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಬರುತ್ತಾರೆ, ಅತಿ ಮುಖ್ಯವಾಗಿ ಪ್ರತಿ ವರ್ಷ ದೀಪಾವಳಿಗೆ ಸಂದರ್ಭದಲ್ಲಿ ಮೂರು ದಿನಗಳ ಕಾಲ ಇಲ್ಲಿ ಉತ್ಸವಗಳು ನಡೆಯುತ್ತವೆ, ಹಾಗೂ ಭಕ್ತರು ಲಕ್ಷಗಳ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ, ಈ ಸಂದರ್ಭದಲ್ಲಿ ಭೇಟಿ ನೀಡಿದ ಭಕ್ತರಿಗೆ ಇಲ್ಲ ಎನ್ನದೆ ಸ್ವಲ್ಪ ಬಂಗಾರ ಹಾಗೂ ಬೆಳ್ಳಿ ಪ್ರಸಾದ ನೀಡುತ್ತಾರೆ, ಈ ರೀತಿಯಲ್ಲಿ ಪಡೆದ ಬಂಗಾರ ಅಥವಾ ಬೆಳ್ಳಿ ಪ್ರಸಾದವನ್ನು ಭಕ್ತರು ತಮ್ಮ ಮನೆಯಲ್ಲಿಟ್ಟುಕೊಂಡು ಪೂಜಿಸುತ್ತಾರೆ ಈ ರೀತಿ ಪೂಜೆ ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆಯಂತೆ.
ಈ ದೇವಾಲಯ ದೇಶದಲ್ಲಿ ಬಂಗಾರ ಬೆಳ್ಳಿಯನ್ನು ಪ್ರಸಾದವಾಗಿ ನೀಡುವ ಏಕೈಕ ದೇವಾಲಯವಾಗಿದೆ, ಅಷ್ಟೇ ಅಲ್ಲದೆ ದೀಪಾವಳಿಯ ಉತ್ಸವದ ಸಂದರ್ಭದಲ್ಲಿ ಭಕ್ತರು ತಮ್ಮ ಬಳಿ ಇರುವ ಬೆಲೆ ಬಾಳುವ ವಜ್ರ ವೈಢೂರ್ಯಗಳನ್ನು ಪೂಜಾರಿಗಳ ಕೈಗೆ ಕೊಟ್ಟು ಗರ್ಭಗುಡಿಯಲ್ಲಿ ಮೂರು ದಿನಗಳ ಕಾಲ ಇರುತ್ತಾರೆ ಈ ರೀತಿ ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆ.