ಕಿಡ್ನಿ ತಜ್ಞರ ಪ್ರಕಾರ ಆರೋಗ್ಯಕರ ಕಿಡ್ನಿ ಗಳಿಗಾಗಿ 8 ಅತ್ಯುತ್ತಮ ನಿಯಮಗಳನ್ನು ಪಾಲಿಸಬೇಕು ಮೂತ್ರಪಿಂಡದ ಕಾಯಿಲೆಗಳು ಗಮನಕ್ಕೆ ಬಾರದೆ ವ್ಯಕ್ತಿಯನ್ನು ಕೊಂದೆ ಬಿಡುತ್ತವೆ ಇದು ನಮ್ಮ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಮೂತ್ರಪಿಂಡದ ಕಾಯಿಲೆಗಳನ್ನು ಕಡಿಮೆ ಮಾಡಲು ಉತ್ತಮ ಮಾರ್ಗಗಳನ್ನು ತಿಳಿಸಿಕೊಡುತ್ತೇವೆ ನೋಡಿ.
ದೈಹಿಕ ಚಟುವಟಿಕೆ : ನಮಗೆ ಎಲ್ಲರಿಗೂ ತಿಳಿದಿರುವಂತೆ ದೈಹಿಕವಾಗಿ ಸಕ್ರಿಯವಾಗಿರುವುದು ಅನೇಕ ರೀತಿಯಲ್ಲಿ ದೇಹಕ್ಕೆ ಸಹಾಯವಾಗುತ್ತದೆ ಇದು ತೂಕ ಕಡಿಮೆ ಮಾಡುವಲ್ಲಿ ಮತ್ತು ಸಕರಾತ್ಮಕ ಚಿಂತನೆ ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ.
ರಕ್ತದ ಗ್ಲೂಕೋಸ್ ಮಟ್ಟದ ಮೇಲೆ ಗಮನ : ಮಧುಮೇಹ ಇರುವ ಹೆಚ್ಚಿನ ಜನರು ಕಿಡ್ನಿ ಸಂಬಂಧಿ ಕಾಯಿಲೆಗಳಿಗೆ ಬೇಗ ಹಾನಿ ಆಗುತ್ತಾರೆ ಆದ್ದರಿಂದ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು : ಹೃದಯ ಸಂಬಂಧಪಟ್ಟ ಅಥವಾ ಪಾರ್ಶ್ವವಾಯುವನ್ನೂ ಬಿಟ್ಟರೆ ಅಧಿಕ ರಕ್ತದೊತ್ತಡದಿಂದ ಕಿಡ್ನಿಗೆ ಹಾನಿಯಾಗುತ್ತದೆ ಹಾಗಾಗಿ ಆಗಾಗ ರಕ್ತದ ಒತ್ತಡವನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಅಭ್ಯಾಸ ಹೆಚ್ಚಿನ ರಕ್ತದೊತ್ತಡದಿಂದ ಕಿಡ್ನಿಯ ಮೇಲೆ ಒತ್ತಡ ಬಿದ್ದು ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ.
ಆರೋಗ್ಯಕರ ಆಹಾರ ಪದ್ಧತಿ : ಉತ್ತಮ ಆಹಾರ ಉತ್ತಮ ಆರೋಗ್ಯವನ್ನು ತರುತ್ತದೆ ಹಾಗಾಗಿ ಹೊರಗಡೆ ತಿನ್ನುವ ಆಹಾರವನ್ನು ಕಡಿಮೆಗೊಳಿಸಿ ಮತ್ತು ನೀವು ಬೆಳೆಸುವ ಆಹಾರದಲ್ಲಿ ಉಪ್ಪನ್ನು ಕಡಿಮೆ ಉಪಯೋಗಿಸಬೇಕು ಮತ್ತು ಹೊರಗಡೆಯಿಂದ ಸಿಗುವ ಆಹಾರದಲ್ಲಿ ಸೋಡಿಯಂ ಅಂಶ ಹೆಚ್ಚಿದ್ದು ಕಿಡ್ನಿ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹ ಅಂತಹ ಕಾಯಿಲೆಗಳು ಹೆಚ್ಚಾಗುತ್ತವೆ ಹಾಗಾಗಿ ನಿಮ್ಮ ದೈನಂದಿನ ಆಹಾರವನ್ನು ತಾಜಾ ಹಣ್ಣುಗಳು ಮತ್ತು ತರಕಾರಿಗಳು ಉಪ್ಪು ಕಡಿಮೆ ಬಳಸಿದ ಆಹಾರ ಕ್ರಮ ಉತ್ತಮ.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು : ದಿನ ನಾವು ಎರಡರಿಂದ ಮೂರು ಲೀಟರ್ ನೀರು ಕುಡಿಯುವುದರಿಂದ ಚರ್ಮವು ಸುಚಿ ಆಗಿರುವುದಲ್ಲದೆ ಚರ್ಮದ ನೀರಿನ ಸಾಂದ್ರತೆ ಕಾಯ್ದಿರಿಸಿ ಕೊಳ್ಳುವುದಲ್ಲ ದೆ ಮೂತ್ರಪಿಂಡ ಗಳು ಆರೋಗ್ಯವಾಗಿರುತ್ತವೆ ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ತುಂಬಿರುವಂತಹ ಕಲ್ಮಶಗಳು ಮತ್ತು ದೇಹದಲ್ಲಿರುವ ವಿಷಕಾರಿ ಅಂಶಗಳು ನೀರಿನ ಮುಖಾಂತರ ಹೊರ ಹೋಗುತ್ತದೆ ಇದರಿಂದ ಮನಸ್ಸು ದೇಹ ಕಿಡ್ನಿ ಮತ್ತು ಕೂದಲಿನ ಸಮಸ್ಯೆಗಳು ಬರೆದೆ ಎಲ್ಲವೂ ಸುಖಕರವಾಗಿರುತ್ತದೆ.
ಧೂಮಪಾನವನ್ನು ದೂರಗೊಳಿಸುವುದು : ಸತತವಾಗಿ ಧೂಮಪಾನ ಮಾಡುವುದರಿಂದ ರಕ್ತ ಗಟ್ಟಿಯಾಗುತ್ತದೆ ಮತ್ತು ರಕ್ತದ ಹರಿವು ಕಡಿಮೆಯಾಗುತ್ತದೆ ಇದರಿಂದ ಕಿಡ್ನಿಯ ಮೇಲೆ ಪ್ರಬಲವಾದ ಪರಿಣಾಮಗಳು ಹೆಚ್ಚಾಗಿ ಕಾಲಕ್ರಮೇಣ ಕಿಡ್ನಿ ಕೆಲಸ ಮಾಡುವುದು ಸಂಕುಚಿತಗೊಳ್ಳುತ್ತದೆ, ಹಾಗಾಗಿ ಧೂಮಪಾನವನ್ನು ಮಾಡದೇ ಇರುವುದು ಉತ್ತಮ ಅಭ್ಯಾಸ.
ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು : ವೈದ್ಯರ ಸಲಹೆ ಇಲ್ಲದೆ ಮಾತ್ರೆ ಗಳನ್ನು ತೆಗೆದುಕೊಳ್ಳುವುದರಿಂದ ಕಿಡ್ನಿಯ ಮೇಲೆ ಪ್ರಭಾವ ಬೀರುತ್ತದೆ ಜ್ವರಕ್ಕೆ ಬಳಸುವ ಪ್ಯಾರಸಿಟಮಲ್ ಮತ್ತು ನೋವು ನಿವಾರಕ ಮಾತ್ರೆಗಳು ಕಿಡ್ನಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಇದರಿಂದ ಕಾಲಕ್ರಮೇಣ ಕಿಡ್ನಿ ತನ್ನ ಕಾರ್ಯವನ್ನು ಕಡಿಮೆ ಮಾಡುತ್ತದೆ.
ಒಂದೇ ಸಮನೆ ಹೆಚ್ಚಿನ ಕಾಯಿಲೆಗಳು ಇದ್ದರೆ ಅಂದರೆ ಬಿಪಿ ಮಧುಮೇಹ ಬೊಜ್ಜು ಮತ್ತು ಇದರೆ ಸಮಸ್ಯೆಗಳು ಇದ್ದರೆ ನಿಯಮಿತವಾಗಿ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.