ಹುಚ್ಚ ವೆಂಕಟ್ ಬೆನ್ನಿಗೆ ನಿಂತರು ಕಿಚ್ಚ ಸುದೀಪ್!

0
2708

ಹುಚ್ಚ ವೆಂಕಟ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದಿದ್ದರೂ ಯಾವುದೇ ಕರುಣೆ ಇಲ್ಲದೆ ಮಂಡ್ಯದ ಕೆಲವು ಹುಡುಗರು ವೆಂಕಟ್ ಅವರನ್ನು ಥಳಿಸಿದ್ದರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ವೈರಲ್ ಆಗಿತ್ತು, ನವರಸ ನಾಯಕ ಜಗ್ಗೇಶ್ ಅವರು ಕೂಡ ಈ ವಿಚಾರದ ಬಗ್ಗೆ ಬಹಳ ನೊಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ನಿಮ್ಮ ಮನೆಯಲ್ಲಿ ಯಾರಾದರೂ ಈ ರೀತಿ ಇದ್ದರೆ ಅವರಿಗೆ ಬೇರೆಯವರು ಈ ರೀತಿ ಹಲ್ಲೆ ಮಾಡಿದರೆ ನಿಮಗೆ ಹೇಗ್ ಎನಿಸಬಹುದು ದಯಮಾಡಿ ಅವರನ್ನು ಥಳಿಸಬೇಡಿ, ಬದಲಿಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಕೋರಿಕೊಂಡಿದ್ದರು.

ಇದರ ಬೆನ್ನಲ್ಲೇ ಈಗ ನಟ ಕಿಚ್ಚ ಸುದೀಪ್ ಹುಚ್ಚ ವೆಂಕಟ್ ಅವರಿಗೆ ಇರುವ ಮಾನಸಿಕ ರೋಗವನ್ನು ಗುಣಪಡಿಸಲು ಸಹಾಯ ಮಾಡಲು ಮುಂದಾಗಿದ್ದಾರೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ವತಿಯಿಂದ ವೆಂಕಟ್ ಅವರ ನೆರವಿಗೆ ಕಿಚ್ಚನ ಮತ್ತು ಅವರ ತಂಡ ಬಂದಿದೆ, ಸಾಮಾಜಿಕ ಜಾಲತಾಣದಲ್ಲಿ ಇವರು ಬಹಿರಂಗವಾದ ಪತ್ರವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜರಿತ ರಾಗಿ ಓಡಾಡುತ್ತಿದ್ದ ಶ್ರೀ ಹುಚ್ಚ ವೆಂಕಟ್ ಅವರ ಮೇಲೆ ದೈಹಿಕವಾಗಿ ಹಲ್ಲೆಯಾಗುತ್ತಿದ್ದು, ಸಾರ್ವಜನಿಕರು ಸ್ವಲ್ಪ ಸಂಯಮ ಮತ್ತು ಕರುಣೆ ತೋರಿ.

ಶ್ರೀ ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆ ಮತ್ತು ಸ್ವಾಂತನ ನೀಡಲು ನಮ್ಮ ಕಿಚ್ಚ ಸುದೀಪ್ ಸರ್ ನಿರ್ಧರಿಸಿ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿಗೆ ಅನುಮತಿ ನೀಡಿದ್ದು ಯಾವುದೇ ಸ್ಥಳದಲ್ಲಿ ಶ್ರೀ ಹುಚ್ಚ ವೆಂಕಟ್ ಅವರು ಕಂಡುಬಂದಲ್ಲಿ ನಮ್ಮ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾನವೀಯತೆ ಗೆಲ್ಲುವ ಹಾಗೆ ಮಾಡಿ ಎಂದು ಕೋರಿ ಕೊಂಡಿದ್ದು ಅವರ ಮೊಬೈಲ್ ನಂಬರ್ ಸಹ ನೀಡಿದ್ದಾರೆ 636 0334 455.

ಸಾರ್ವಜನಿಕರು ವೆಂಕಟ್ ಅವರು ನಿಮಗೆ ಕಂಡರೆ ದಯಮಾಡಿ ಮೇಲೆ ನೀಡಿರುವ ನಂಬರಿಗೆ ಕರೆ ಮಾಡಿ ಮಾಹಿತಿ ನೀಡಿ, ವೆಂಕಟ್ ಅವರ ಮಾನಸಿಕ ಸಮಸ್ಯೆಯನ್ನು ಸರಿಮಾಡಲು ಸುದೀಪ್ ಅವರ ಬೆನ್ನಿಗೆ ನಿಂತಿದ್ದು ಆದಷ್ಟು ಬೇಗ ವೆಂಕಟ್ ಅವರು ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಈ ಮಾಹಿತಿಯನ್ನು ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here