ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ಭಾರೀ ವೈರಲ್ ಆಗಿತ್ತು.ಅದರಲ್ಲಿ ಒಂದು ರಾಕ್ಷಸ ಮಗು ಜನಿಸಿದೆ.ಹುಟ್ಟಿದ ಮಗುವಿಗೆ ರಾಕ್ಷಸ ಆಕಾರವಿದೆ.ಅದು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತನ್ನ ಹೆತ್ತ ತಾಯಿಯನ್ನೇ ಸಾಯಿ ಸಿತು.ಅದೂ ಅಲ್ಲದೇ ಅದರ ಕೈ ಹಿಡಿದು ಹೆರಿಗೆ ಮಾಡಿದ ನರ್ಸ್ ಳ ಜೀವವನ್ನೂ ಬ ಲಿ ತೆಗೆದುಕೊಂಡಿತು. ಆಗ ಬೆದರಿದ ಡಾಕ್ಟರ್’ಗಳು ಅದಕ್ಕೆ 15 ಇಂಜೆಕ್ಷನ್ ಕೊಟ್ಟು ಸಾಯಿಸಿದರಂತೆ.ಇದು ನಡೆದಿದ್ದು ಅಸ್ಸಾಂ ನಲ್ಲಿ ಎಂದು ಸುದ್ದಿಯಾಗಿತ್ತು.
ವಿಚಿತ್ರ ಮತ್ತು ಖೇದದ ಸಂಗತಿ ಏನೆಂದರೆ ಇದನ್ನು ಮಂಗಳೂರಿನ ಪತ್ರಿಕೆಯೊಂದು ಪ್ರಕಟಿಸಿತ್ತು.ಇಂದಿನ ಕಾಲದಲ್ಲಿ ಇಂತಹ ಮಕ್ಕಳು ಹುಟ್ಟುವುದಕ್ಕೆ ಸಾಧ್ಯವೇ ? ಎಂದು ಹಿಂದೆ ಮುಂದೆ ಯೋಚಿಸದೇ ವರದಿ ಪ್ರಕಟಿಸಿತು.ಆದರೆ ನಿಜವಾಗಿಯೂ ಇದು ನಡೆದಿದೆಯಾ ? ಜನರು ಈ ವಿಷಯವನ್ನು ಇಷ್ಟೊಂದು ವೈರಲ್ ಮಾಡುತ್ತಿರುವುದು ಯಾಕೆ ? ಎಂದು ಸುದ್ದಿಯ ಬೆನ್ನತ್ತಿ ಹೋದರೆ ಅಸಲಿ ವಿಷಯ ಬಯಲಾಗಿದೆ.
ಇಂಟರ್ನೆಟ್’ನ ಈಗಿನ ಉತ್ತುಂಗದ ಕಾಲದಲ್ಲಿ ಯಾವುದೇ ವಿಷಯಗಳು ಬಹಳ ಬೇಗನೇ ಜನರಿಗೆ ತಲುಪುತ್ತಿವೆ.ಜನರಿಗೆ ಇಂಟರ್ನೆಟ್ ಎಷ್ಟು ಉಪಯೋಗ ಇದೆಯೋ ಅಷ್ಟೇ ಅದು ಅನಾಹುತಕಾರಿ.ವಾಟ್ಸಪ್ ನಲ್ಲಿ ಒಂದು ಸುಳ್ಳು ಸುದ್ದಿ ಹತ್ತಾರು ಜನರ ನೆಮ್ಮದಿ ಕೆಡಿಸಬಹುದು.ಊರು ಊರಿಗೆ ಕಿಚ್ಚು ಹತ್ತಿಸಬಹುದು.ಅದಕ್ಕೆ ಈಗ ಭಾರತ ಸರ್ಕಾರ ವಾಟ್ಸಪ್ ಮತ್ತು ಫೇಸ್‌ಬುಕ್ ದುರ್ಬಳಕೆ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.ವಾಟ್ಸಪ್’ಗೆ ನೋಟಿಸ್ ಮೇಲೆ ನೋಟಿಸ್ ನೀಡಿದ ಮೇಲೆ ಅದು ಈಗ ತನ್ನ ಅಪ್ಡೇಟ್ ವರ್ಷನ್’ನಲ್ಲಿ ಸುದ್ದಿ ಎಷ್ಟು ಸಲ ಫಾರ್ವರ್ಡ್ ಆಗಿದೆ ಎಂಬುದನ್ನು ತೋರಿಸುವ ವ್ಯವಸ್ಥೆ ಹೊಂದಿದೆ.ಫೇಸ್ಬುಕ್ ಬಳಕೆಗೆ ಆಧಾರ್ ಕಡ್ಡಾಯವಾಗಬೇಕು ಎಂದು ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.ಇದರ ತೀರ್ಪು ಸದ್ಯದಲ್ಲಿಯೇ ಬರಲಿದೆ.ಧರ್ಮ,ಜಾತಿಯ ಬಗ್ಗೆ ಜನರಲ್ಲಿ ಒಡಕು ಮೂಡಿಸಲು ಕೆಲವು ಸುಳ್ಳು ಸುದ್ದಿಗಳೂ ಕಾರಣವಾಗುತ್ತವೆ.
ಅದೂ ಅಲ್ಲದೇ ಹಿಂದಿನ ಕಾಲದಲ್ಲಿ ಒಂದು ಪಾಂಪ್ಲೆಟ್ ಹಂಚಲಾಗುತ್ತಿತ್ತು.ಅದನ್ನು ಓದಿದವರು ಇಪ್ಪತ್ತೊಂದು ಜನರಿಗೆ ಅದನ್ನು ಬರೆದು ಹಂಚಬೇಕು.ಇಲ್ಲದಿದ್ದರೆ ಕೆಡುಕಾಗುತ್ತದೆ ಎಂದು ದೇವರ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದರು.ಆದರೆ ಈಗ ವಾಟ್ಸಪ್ ನಲ್ಲಿಯೇ ಓಂ ಶನೀಶ್ವರಾಯ ನಮಃ , ಮಂಜುನಾಥಾಯ ನಮಃ ಹೀಗೆ ವಿವಿಧ ದೇವರ ಹೆಸರು ಬರೆದು ಇದನ್ನು ಹತ್ತು ಜನರಿಗೆ ಕಳಿಸಿ ಎಂದು ಕಳಿಸುತ್ತಿರುತ್ತಾರೆ.ಅದನ್ನು ನಂಬಿದವರು ಭಯದಿಂದಲೋ ಅಥವಾ ಆಸೆಯಿಂದಲೋ ಅದನ್ನು ಹತ್ತು ಜನರಿಗೆ ಕಳಿಸಿ ಮೂಢರಾಗುತ್ತಾರೆ.ಈ ತರಹದ್ದು ನಿಮಗೆ ಎಷ್ಟು ಬಂದಿಲ್ಲ ಹೇಳಿ ?!
ಈಗ ವಿಷಯಕ್ಕೆ ಬರೋಣ.ನಿಜವಾಗಿಯೂ ರಾಕ್ಷಸ ಮಗು ಜನಿಸಿತ್ತಾ ? ಅದರ ಅಸಲಿ ಸುದ್ದಿ ಯಾವುದು ಎಂದು ಈ ಕೆಳಗಿನ ವೀಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.ದಯವಿಟ್ಟು ನೋಡಿ.ಆದಷ್ಟು ಇದನ್ನು ಎಲ್ಲಾ ಕಡೆ ಶೇರ್ ಮಾಡಿ.ಸತ್ಯ ಎಲ್ಲೆಡೆ ಹರಡಲಿ.