ತಲೆನೋವು ಅಥವಾ ತಲೆ ಸುತ್ತು ಬರಲು ಪ್ರಮುಖ ಕಾರಣ ಉಷ್ಣ ಹಾಗೂ ದೇಹದಲ್ಲಿನ ಪಿತ್ತ, ತಲೆ ಸುತ್ತಿಗೆ ಮುಖ್ಯ ಕಾರಣ ಪಿತ್ತ ಆದರೆ ತಲೆ ನೋವಿಗೆ ಹಲವು ಕಾರಣಗಳಿವೆ, ಇನ್ನು ತಲೆನೋವು ಹಾಗೂ ತಲೆಸುತ್ತು ನಿಮಗೆ ಎಂದಿಗೂ ಕಾಡದಂತೆ ಇರಲು ಹಲವು ಸೂಚನೆಗಳನ್ನು ಇಂದು ನೀಡುತ್ತೇವೆ.
ಆಹಾರ ಸೇವನೆಗೂ ಮುಂಚೆ ಖಾಲಿ ಹೊಟ್ಟೆಯಲ್ಲಿ ದೊಡ್ಡಪತ್ರೆ ಸೊಪ್ಪು ಹಾಗೂ ಒಂದೆರಡು ಹರಳು ಉಪ್ಪು ಸೇರಿಸಿ ಸೇವಿಸಬೇಕು ಹೀಗೆ ಮಾಡುವುದರಿಂದ ತಲೆಸುತ್ತು ದೂರವಾಗುತ್ತದೆ.
ಹಿಂದಿನ ಕಾಲದಲ್ಲಿ ತಲೆ ನೋವು ಹೆಚ್ಚಾದರೆ ಶ್ರೀಗಂಧವನ್ನು ತೇಯ್ದು ಹಣೆಗೆ ಹಚ್ಚಿ ಪಟ್ಟು ಹಾಕುತ್ತಿದ್ದರು, ಆಯುರ್ವೇದದಲ್ಲಿ ಇದರ ಉಲ್ಲೇಖವಿದ್ದು ತಲೆ ನೋವಿಗೆ ಉತ್ತಮ ಪರಿಹಾರ.
ಶ್ರೀಗಂಧ ಬದಲಿಗೆ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದು ಹಣೆಗೆ ಪಟ್ಟು ಹಾಕುವುದರಿಂದಲೂ ತಲೆ ನೋವು ಶಮನವಾಗುತ್ತದೆ.
ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಮಗೆ ತಲೆ ನೋವು ಸಮಸ್ಯೆ ತಲೆದೋರುವುದಿಲ್ಲ.
ಊಟದ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಮಾಡಿಕೊಂಡರು ತಲೆನೋವು ಬರುವುದು ನಿಲ್ಲುತ್ತದೆ.
ನುಗ್ಗೆ ಸೊಪ್ಪನ್ನು ಚೆನ್ನಾಗಿ ಅರೆದು ಅದಕ್ಕೆ ಎರಡು ಮೆಣಸನ್ನು ಸೇರಿಸಿ ಮತ್ತೆ ಚೆನ್ನಾಗಿ ಹರಿದು ಲೇಪನ ಮಾಡಿಕೊಂಡು, ಈ ಲೇಖನವನ್ನು ಹಣೆಗೆ ಹಚ್ಚುವುದರಿಂದ ತಲೆನೋವು ದೂರವಾಗುತ್ತದೆ.
ಕೆಲವೊಮ್ಮೆ ತಲೆ ನೋವು ಅತಿಯಾದರೆ ವಾಂತಿಯಾಗುವ ಸಂಭವ ಇರುತ್ತದೆ, ಅಂತಹ ಸಮಯದಲ್ಲಿ ನಿಂಬೆ ರಸಕ್ಕೆ ಏಲಕ್ಕಿ ಪುಡಿ, ಸಕ್ಕರೆ, ನೀರು ಬೆರೆಸಿ ಶರಬತ್ತು ಮಾಡಿ ಕುಡಿಯುವುದರಿಂದ ತಲೆಸುತ್ತು ಹಾಗೂ ವಾಂತಿ ನಿಲ್ಲುತ್ತದೆ.
ಇನ್ನು ಕೆಲವರಿಗೆ ಒಂದೇ ಕಡೆಯಲ್ಲಿ ತಲೆನೋವು ಕಾಣಿಸಿಕೊಳ್ಳುತ್ತದೆ ಅಂತವರು ಸೇಬಿನ ಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ತಿಂದರೆ ಒಂದೇ ಕಡೆ ತಲೆ ನೋವು ಬರುವುದು ನಿಲ್ಲುತ್ತದೆ.
ಪ್ರತಿದಿನ ನೀವು ಹಾಲು ಕುಡಿಯುವಾಗ ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆನೋವು ನಿಮ್ಮನ್ನು ಕಾಣಲು ಸಾಧ್ಯವೇ ಇಲ್ಲ.
ಕೆಲವೊಮ್ಮೆ ಪಿತ್ತ ದಿಂದಲೂ ತಲೆನೋವು ಬರುತ್ತದೆ ಅಂತಹ ಸಮಯದಲ್ಲಿ ಜೀರಿಗೆ ಕಷಾಯ ಮಾಡಿಕೊಂಡು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆನೋವು ಶಮನವಾಗುತ್ತದೆ.
ತಲೆ ನೋವಿಗೆ ಸೂಕ್ತ ಪರಿಹಾರಗಳನ್ನು ನೀಡಿದ ಈ ಮಾಹಿತಿ ಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ಸ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.