ಮಹಾಭಾರತದ ಈ ಸಂಭಾಷಣೆ ನಿಮ್ಮ ಬದುಕಿನ ಹಾದಿಯನ್ನೇ ಬದಲಿಸುತ್ತೆ.

0
1615

ಯುದ್ಧ ಭೂಮಿಯಲ್ಲಿ ನಿಂತ ಅರ್ಜುನ ಗೊಂದಲಕ್ಕೆ ಬೀಳುತ್ತಾನೆ. ಆಗ ಮಾಧವನೇ ಅವನಿಗೆ ಬಿಡಿಸಿ ಬಿಡಿಸಿ ಹೇಳುತ್ತಾನೆ ಎದುರಿಗಿರುವವರು ಯಾವ ಯಾವ ರೀತಿಯ ಅಧರ್ಮವನ್ನು ಮಾಡಿದ್ದಾರೆ ಎಂದು. ಅದಕ್ಕೆ ಅರ್ಜುನ ಇಲ್ಲ ಮಾಧವ. ಪಿತಾಮಹ, ಗುರು ದ್ರೋಣ, ಮಾಮಾಶ್ರೀ, ಭ್ರಾತ ದುರ್ಯೋಧನ ಮುಂತಾದವರ ವಿರುದ್ಧ ನಾನು ಶಸ್ತ್ರ ಎತ್ತಲಾರೆ. ಆ ಮೂಲಕ ನಾನೂ ಅಧ’ರ್ಮವ ಮಾಡಲಾರೆ ಎಂದು ಹೇಳುತ್ತಾನೆ.

ಆಗ ಮಾಧವ ಸೊಗಸಾಗಿ ಹೇಳುತ್ತಾನೆ. ಪಾರ್ಥ, ನೀನು ಹೇಗೆ ಹೇಳುತ್ತಿಯಾ ನೀವು ಅಧ’ರ್ಮವನ್ನೇ ಮಾಡಿಲ್ಲ ಎಂದು. ಕೌರವರ ರೀತಿಯೇ ನೀವೂ ಸಹ ಅಧ’ರ್ಮ ಮಾಡಿದ್ದೀರಿ. ಹಾಗೂ ನೀನು ಕೂಡ ಅವಶ್ಯವಾಗಿ ಅಧ’ರ್ಮವನ್ನು ಮಾಡಿದ್ದೀಯಾ ಪಾರ್ಥ ಎಂದು ಹೇಳುತ್ತಾನೆ. ಈ ಧರ್ಮ ಅಧರ್ಮ, ಸತ್ಯ ಅಸತ್ಯಗಳ ಗೊಂದಲದಲ್ಲಿ ಅರ್ಜುನ ಮತ್ತಷ್ಟು ವಿ’ಚಲಿತನಾಗುತ್ತಾನೆ. ತನ್ನ ರಥದಿಂದ ಇಳಿದು ಕೆಳಗೆ ನಿಂತಿದ್ದ ಮಾಧವನ ಕಾಲ ಬುಡದಲ್ಲಿ ತನ್ನ ಶಸ್ತ್ರವನ್ನು ಇಟ್ಟು ಮೊಣಕಾಲೂರಿ ಕುಳಿತುಕೊಂಡು ಅವನಿಗೆ ಕೈ ಮುಗಿದು ಅರ್ಜುನ ಹೇಳುತ್ತಾನೆ.

ಹೇ ಮಾಧವ ಗೊಂದಲದಲ್ಲಿ ಇದ್ದೇನೆ. ಇದರಿಂದಾಗಿ ನಾನು ದುರ್ಬಲನಾಗಿದ್ದೇನೆ. ನನ್ನ ಆ’ತ್ಮದ ಸಾರಥಿಯಾಗಿ ಈ ಜೀವನ ರಥವನ್ನು ಸೂಕ್ತ ಮಾರ್ಗದಲ್ಲಿ ಕರೆದೊಯ್ಯಿರಿ. ಅತಂಹದ್ದು ಏನನ್ನು ತಿಳಿಯುವುದರಿಂದ ನಾನು ನನ್ನ ದುರ್ಬ’ಲತೆಯನ್ನು ತ್ಯಜಿಸಬಲ್ಲೆ. ಮಾಧವ ಅರ್ಜುನನ ಬಳಿ ಬಂದು ತನ್ನ ಎದುರು ಮೊಣಕಾಲೂರಿ ಕುಳಿತು ನಮಸ್ಕರಿಸಿದ್ದ ಅವನನ್ನು ಮೇಲೆ ಎಬ್ಬಿಸುತ್ತಾನೆ, ಮತ್ತೆ ಹೇಳುತ್ತಾನೆ. ಏಳು ಪಾರ್ಥ. ಹೇಳುವುದನ್ನು ಕೇಳು. ಮೊದಲು ಜೀವನದ ರಹ’ಸ್ಯವನ್ನು ತಿಳಿದುಕೋ. ಜಗತ್ತಿನ ವಾಸ್ತವಿಕ ರೂಪವನ್ನು ಅರ್ಥ ಮಾಡಿಕೋ. ಗಂಗಾಮಾತೆಯ ಪ್ರ’ವಾಹದಲ್ಲಿ ಮುಷ್ಟಿಯಿಂದ ಜಲವನ್ನು ತೆಗೆದುಕೊಂಡರೆ ಏನೂ ದೊರೆಯುವುದಿಲ್ಲ ಪಾರ್ಥ.

ಆದರೆ ಕೈಗಳನ್ನು ಜೋಡಿಸುವ ಮೂಲಕ ಗಂಗಾಪ್ರವಾಹವನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿದರೆ ಅದು ಆಗ ಮುಖದವರೆಗೂ ತಲುಪಬಹುದು. ಯೋಚಿಸಿ ನೋಡು ಪಾರ್ಥ. ಅಹಂಕಾರದ ಮುಷ್ಟಿ ಕಟ್ಟುವೆಯೋ. ಅಥವಾ ಸಮರ್ಪಣೆಯಿಂದ ಕೈ ಜೋಡಿಸುವೆಯೋ. ಈ ಜ್ಞಾನವನ್ನು ಗ್ರಹಿಸುವ ಶಕ್ತಿ ಇದೆಯೇ ನಿನ್ನಲ್ಲಿ. ಅರ್ಜುನ ತಲೆ ಅಲ್ಲಾಡಿಸಿ ಆಗಲಿ ಮಾಧವ. ಹೇಳಿ ನೀವು. ಗ್ರಹಿಸುತ್ತೇನೆ ಎಂದು ಹೇಳುತ್ತಾನೆ. ಈ ನಂತರದ ಸಂಭಾಷಣೆ ನಿಜಕ್ಕೂ ಅತೀ ಸುಂದರವಾದದ್ದು. ಮತ್ತು ನಮಗೆಲ್ಲರಿಗೂ ಇದು ಅವಶ್ಯವಾಗಿ ಗೊತ್ತಿರಬೇಕಾದದ್ದು. ಮತ್ತು ಇದೆಲ್ಲವೂ ಗೊತ್ತಿದ್ದರೆ ಈ ಬದುಕು ಸರಳ ಮತ್ತು ತುಂಬಾನೇ ಸುಂದರ.

ನೋಡಿ ಮಾಧವ ಏನು ಹೇಳುತ್ತಾನೆ ಎಂದು. ಮಾಧವ ನಗುತ್ತಲೇ ಹೇಳುತ್ತಾನೆ. ಈ ಜಗತ್ತು ಅಂದರೆ ಏನು ಪಾರ್ಥ. ಮಾನವರು, ದಾನವರು, ಪಶು, ಪಕ್ಷಿಗಳು, ಜಂತುಗಳು, ಕೀಟಗಳು, ಮತ್ಸ್ಯ, ವೃಕ್ಷಗಳು ಇವೆಲ್ಲಾ ಹೇಗೆ ಹುಟ್ಟುತ್ತದೆ. ಯಾವ ಪದಾರ್ಥಗಳಿಂದ ಇವುಗಳು ಮಾಡಲ್ಪಡುತ್ತವೆ. ಹೇಗೆ ಸಾಗುತ್ತವೆ. ಹೇಗೆ ಜೀವಿಸುತ್ತವೆ. ಮೃ’ತ್ಯು ಹೇಗಾಗುತ್ತದೆ ಇವುಗಳದ್ದು. ಹಾಗೂ ಮೃ’ತ್ಯುವಿನ ನಂತರ ಏನಾಗುತ್ತದೆ. ಈ ರ’ಹಸ್ಯದ ಬಗ್ಗೆ ಯೋಚನೆ ಮಾಡು.

ಅರ್ಜುನ ಆಲೋಚಿಸಿ ಹೇಳುತ್ತಾನೆ. ಮನುಷ್ಯನ ದೇಹ ಮಣ್ಣಿನಿಂದ ಮಾಡಲ್ಪಟ್ಟಿದೆ ಮಾಧವ. ಅದರಲ್ಲಿ ಪ್ರಾಣವಾಗಿ ವಾಯುವಿನ ಸಂಚಾರವಿದೆ. ಜಲ ಅದರಲ್ಲಿ ರ’ಕ್ತ ಹಾಗೂ ಇತ್ಯಾದಿ ರೂಪದಲ್ಲಿ ಹರಿಯುತ್ತದೆ. ಅ’ಗ್ನಿಯು ದೇಹಕ್ಕೆ ತಾಪಮಾನ ನೀಡುತ್ತದೆ. ಹಾಗೂ ದೇಹದ ಬರಿದಾದ ಪ್ರದೇಶದಲ್ಲಿ ಆಕಾಶ ಪ್ರಕಟವಾಗುತ್ತದೆ. ಅರ್ಥಾತ್ ಪ್ರಥ್ವಿ, ವಾಯು, ಜಲ, ಅ’ಗ್ನಿ, ಹಾಗೂ ಆಕಾಶ. ಈ ಪಂಚಭೂತಗಳಿಂದಲೇ ಶರೀರದ ನಿರ್ಮಾಣವಾಗಿರುವುದು. ಮಾಧವ ಹೇಳುತ್ತಾನೆ, ಅರ್ಥಾತ್ ಮಹಾಮಹಿಮರು, ಗುರು ದ್ರೋಣರು, ಪ್ರಥ್ವಿ, ವಾಯು, ಜಲ, ಅ’ಗ್ನಿ ಹಾಗೂ ಆಕಾಶಗಳಿಗಿಂತ ಹೆಚ್ಚು ಬೇರೆನೂ ಇಲ್ಲ.

ಧರ್ಮ ಜ್ಞಾನಿಗಳು ಪಂಚಭೂತಗಳಿಂದಲೇ ಆಗಿದ್ದಾರೆ. ಹಾಗೂ ಅಧರ್ಮಿಗಳು ಕೂಡ ಪಂಚಭೂತಗಳಿಂದಲೇ ಆಗಿದ್ದಾರೆ. ಹಾಗಾದರೆ ಮೋ’ಹ ಯಾವುದಕ್ಕೋಸ್ಕರ ಪಾರ್ಥ. ಮಣ್ಣಿಗಾಗಿಯೇ. ಅರ್ಜುನ ಹೇಳುತ್ತಾನೆ, ಆದರೆ ಮಾಧವ ಈ ಮಣ್ಣಿನ ದೇಹದಿಂದಲೇ ಮನುಷ್ಯರು ಒಬ್ಬರನ್ನೊಬ್ಬರು ಗುರುತಿಸುವುದು. ಎಲ್ಲಾ ಸಂಬಂಧಗಳು ಈ ಮಣ್ಣಿನ ದೇಹಕ್ಕೇ ಇರುತ್ತದೆ. ಮಾಧವ ಇದಕ್ಕೆ ಯಾವ ರೀತಿ ಉತ್ತರಿಸುತ್ತಾನೆ ನೋಡಿ. ಇಲ್ಲ ಪಾರ್ಥ, ಒಂದು ವೇಳೆ ಅದೇ ಸತ್ಯವಾಗಿದ್ದರೆ, ಮೃತ್ಯುವಿನ ನಂತರ ದೇಹದ ನಾ’ಶವೇಕೆ ಮಾಡಲಾಗುತ್ತದೆ. ವಾಸ್ತವವಾಗಿ ಮನುಷ್ಯನ ಪರಿಚಯವು ಅವನ ದೇಹದಿಂದ ಆಗುವುದಿಲ್ಲ. ಅಥವಾ ಸಂಬಂ’ಧಗಳ ಆಧಾರವೂ ಅವನ ದೇ’ಹದಿಂದ ಆಗುವುದಿಲ್ಲ.

ಮನುಷ್ಯನ ಸ್ವಭಾವ, ಅವನ ವರ್ತನೆ ಹಾಗೂ ಅವನ ಕಾರ್ಯಗಳಿಂದ ಅವನ ಪರಿಚಯವಾಗುತ್ತದೆ. ಆಹಾ ಎಷ್ಟು ಸುಂದರವಾದ ಮಾತು. ನೋಡಿ ನಮ್ಮ ದೇಹದಿಂದ ನಮ್ಮ ಗುರು ಪರಿಚಯ ಆಗುವುದಿಲ್ಲವಂತೆ. ಮಾಧವ ಹೇಳುತ್ತಿದ್ದಾನೆ ನಮ್ಮ ಸ್ವಭಾವ, ವರ್ತನೆ ಹಾಗೂ ನಮ್ಮ ಕಾರ್ಯಗಳಿಂದ ನಮ್ಮ ಪರಿಚಯ ಜಗತ್ತಿಗೆ ಆಗುತ್ತದೆಯಂತೆ. ನಿಜವಾಗಿಯೂ ಎಷ್ಟು ಸತ್ಯ ಅಲ್ಲವೇ. ಮಾಧವ ಮುಂದುವರಿದು ಹೇಳುತ್ತಾನೆ. ಈ ಸ್ವಭಾವ, ವರ್ತನೆ ಹಾಗೂ ಕಾರ್ಯಗಳು ಹೇಗೆ ಆಗುತ್ತವೆ. ಅದನ್ನು ಅರ್ಥ ಮಾಡಿಕೋ ಪಾರ್ಥ. ಮನುಷ್ಯ ಜೀವನ ಕೇವಲ ಇಪ್ಪತ್ತು ಗೋಚರ ಹಾಗೂ ಅಗೋಚರ ಪದಾರ್ಥಗಳ ಸಂಯೋಜನೆಯಿಂದ ಆಗಿದೆ.

ಆದರೂ ಕೂಡ ಪ್ರತಿಯೊಬ್ಬ ಮನುಷ್ಯನ ಸ್ವಭಾವ ಹಾಗೂ ಕಾರ್ಯಗಳು ಭಿನ್ನ ಭಿನ್ನವಾಗಿಯೇ ಕಾಣುತ್ತವೆ. ಅದಕ್ಕೆ ಕಾರಣವೇನೆಂದರೆ ಈ ಸೃಷ್ಟಿಯ ಮೂರು ಗುಣಗಳು. ತಮಸ್ಸು, ರಜಸ್ಸು ಹಾಗೂ ಸತ್ವ. ಅರ್ಜುನ ಕೇಳುತ್ತಾನೆ – ಈ ಮೂರು ಗುಣಗಳ ಅರ್ಥವೇನು ಮಾಧವ. ಮಾಧವ ಉತ್ತರಿಸುತ್ತಾನೆ, ತಮಸ್ಸಿನ ಅರ್ಥ ಅಂ’ಧಕಾರವಾಗಿದೆ. ಒಳ್ಳೆಯದು ಕೆಟ್ಟದ್ದು ಎಂದು ಯೋಚಿಸದೇ ಜೀವನ ವ್ಯಯಿಸುವುದನ್ನು ತಾಮಸಿಕ ವ್ಯವಹಾರ ಎನ್ನಲಾಗುತ್ತದೆ. ಹೇಗೆ ಪಶು ಪಕ್ಷಿಗಳು ಜೀವಿಸುವವು ಅದು ತಮ್ಮ ಶಾರೀರಿಕ ಇಚ್ಛೆಗಳನ್ನು ಪೂರೈಸಲು ಮಾತ್ರ.

ಹಾಗೇ ಬದುಕುವುದು. ಸತ್ವದ ಅರ್ಥ ಜ್ಞಾನದ ಬೆಳಕು. ಯಾವಾಗ ವ್ಯಕ್ತಿಯೊಬ್ಬ ಪ್ರತಿಯೊಂದು ಪರಿಸ್ಥಿತಿಯಲ್ಲೂ ಧರ್ಮ, ಸತ್ಯ ಹಾಗೂ ಪರಂಪರೆಗಳ ಬಗ್ಗೆ ಯೋಚಿಸಿ ವ್ಯವಹಾರ ಮಾಡುವನೋ ಅದನ್ನು ಸಾತ್ವಿಕ ಜೀವನ ಎನ್ನಲಾಗುತ್ತದೆ. ಈ ಇಬ್ಬರ ಮಧ್ಯದಲ್ಲಿ ಒಬ್ಬ ವ್ಯಕ್ತಿ ಇರುತ್ತಾನೆ. ಅವನ ಬಳಿ ಜ್ಞಾನ ಇರುತ್ತದೆ. ಆದರೆ ಶರೀರ ಹಾಗೂ ಮನಸ್ಸಿನ ಇಚ್ಛೆಗಳ ಅನುಸಾರ ಬಂಧನಕ್ಕೊಳಗಾಗಿರುತ್ತಾನೆ ಅಂತಹ ಮನುಷ್ಯ ರಜಸ್ಸು ಅರ್ಥಾತ್ ಅಹಂ’ಕಾರದ ಮನಸ್ಥಿತಿಯೊಂದಿಗೆ ಜೀವನ ಮಾಡುತ್ತಾನೆ.

ತಮಸ್ಸು, ರಜಸ್ಸು ಹಾಗೂ ಸತ್ವ ಗುಣಗಳ ಹೆಚ್ಚು ಕಡಿಮೆ ಪ್ರಮಾಣಗಳ ಸಂಯೋಜನೆಯಿಂದಲೇ ಮನುಷ್ಯನ ಸ್ವಭಾವ ನಿರ್ಮಾಣವಾಗುತ್ತದೆ. ಎದುರಿಗೆ ನೋಡು ಪಾರ್ಥ. ಈ ಕೌರವರನ್ನು ನೋಡು. ಈ ಎಲ್ಲರಲ್ಲಿ ನಿನಗೆ ಯಾವ ಗುಣ ಕಾಣುತ್ತದೆ ಎಂದು ಒಮ್ಮೆ ನೋಡು. ಅರ್ಜುನ ಹಾಗೇ ಒಮ್ಮೆ ಎಲ್ಲರನ್ನೂ ಕಣ್ಣು ಹಾಯಿಸಿ ನೋಡುತ್ತಾನೆ. ಈ ಅರ್ಥಪೂರ್ಣ ಸಂಭಾಷಣೆ ಇನ್ನೂ ಮುಂದುವರಿಯಲಿದೆ. ಹಾಗೂ ಈ ಅರ್ಜುನ ಹಾಗೂ ಮಾಧವನ ಸಂಭಾಷಣೆಯಲ್ಲಿಯೇ, ಈ ನೆಲದಲ್ಲಿಯೇ ಹುಟ್ಟಿದ ಹಿಂದೂ ಧರ್ಮದ ಸಂಪೂರ್ಣ ಸಾರವಿದೆ. ಮಹಾಭಾರತದ ಕಥೆಯಲ್ಲಿ ಅತೀ ಹೆಚ್ಚಿನ ಜೀವನ ಮೌಲ್ಯ ಸಿಗುವುದು ಅವಶ್ಯವಾಗಿ ಇವರೀರ್ವರ ಸಂಭಾಷಣೆಯಿಂದಲೇ.

LEAVE A REPLY

Please enter your comment!
Please enter your name here