ಬಿಗ್’ಬಾಸ್ ಕನ್ನಡದಲ್ಲಿ ಮನೆಯೊಳಗೆ ತನ್ನದೇ ಆದ ಸ್ಟೈಲಿನಲ್ಲಿ ಆಟ ಆಡುತ್ತಿರುವ ಮಂಗಳೂರಿನ ಶೈನ್ ಶೆಟ್ಟಿ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಕುರಿ ಪ್ರತಾಪ್ , ಹರೀಶ್ ರಾಜ್, ವಾಸುಕಿ ವೈಭವ್ ಅಂತಹ ಘಟಾನುಘಟಿ ಜನಪ್ರಿಯ ನಟರಿಗಿಂತ ಪರಿಚಯವೇ ಇಲ್ಲದ ಶೈನ್ ಶೆಟ್ಟಿ ತನ್ನ ಚಾಪು ಮೂಡಿಸುತ್ತಿರುವುದು ಬಿಗ್ಬಾಸ್ ಮಹಿಮೆ ಇರಬೇಕು. ಹೋಟೆಲ್ ಬಿಜಿನೆಸ್ ಮಾಡುತ್ತಿರುವ ಹಾಗೂ ನಟನೆಯನ್ನೂ ಮಾಡುವ ಶೈನ್ ಶೆಟ್ಟಿ ಬಿಗ್ಬಾಸ್ ಮನೆಯಲ್ಲಿ ರಂಜನೆಯನ್ನು ಕೊಡುತ್ತಿದ್ದಾರೆ.
ಮಹಾನ್ ಹಾಸ್ಯ ಮಾಡುತ್ತಿದ್ದ ಕುರಿ ಪ್ರತಾಪ್’ರಿಂದ ಅಷ್ಟಾಗಿ ಮನರಂಜನೆ ಸಿಗುತ್ತಿಲ್ಲ . ಸುದ್ದಿಯಾಗುತ್ತಿರುವುದು ಜಾಸ್ತಿ ಶೆಟ್ಟಿನೆ. ಶೈನ್ ಶೆಟ್ಟಿಯ ಲವ್ ಸ್ಟೋರಿ ಕೂಡ ಬಿಗ್ಬಾಸ್ ನಲ್ಲಿ ಶುರುವಾಗಿದೆ. ದೀಪಿಕಾ ಮತ್ತು ಶೆಟ್ಟಿಯ ನಡುವೆ ಏನೋ ಸಮ್ಥಿಂಗ್ ಇದೆ ಎಂದು ಗುಸುಗುಸು. ಒಟ್ಟಿನಲ್ಲಿ ಮನೆಯಿಂದ ಹೊರಬಂದ ಬಳಿಕ ಇಬ್ಬರೂ ಚಂದನ್ ಶೆಟ್ಟಿ ಹಾಗೂ ನಿವೇದಿತಾರಂತೆ ಮದುವೆಯಾಗುತ್ತಾರೋ ಅಥವಾ ಬಿಗ್ಬಾಸ್ ನ ಟಾಸ್ಕ್ ಮಾತ್ರನಾ ಇದು ಎಂದು ಆಮೇಲೇನೆ ಗೊತ್ತಾಗುತ್ತದೆ.
ಬಿಗ್’ಬಾಸ್ ಶೋನಲ್ಲಿ ನೂರು ದಿನಗಳ ಕಾಲ ಯಶಸ್ವಿಯಾಗಿ ಉಳಿಯುವವನು 50 ಲಕ್ಷ ಗಳಿಸುತ್ತಾರೆ. ಆದರೆ ಇನ್ನು ಉಳಿದವರಿಗೆ ಸಂಭಾವನೆ ಕೊಡುವುದಿಲ್ಲವಾ ಅಂತ ಕೇಳಿದರೆ ಖಂಡಿತಾ ಕೊಡ್ತಾರೆ.ಅವರಿಗೂ ತಕ್ಕ ಮಟ್ಟಿಗೆ ಹಣ ಸಿಗುತ್ತದೆ. ನಟ- ನಟಿಯರಾದರೆ ಅವರಿಗೆ ಇಷ್ಟು ಅಂತ ಫಿಕ್ಸ್ ಆಗಿರುತ್ತದೆ. ಯಾರೇ ಇದ್ದರೂ ಕೂಡ ಒಂದು ದೊಡ್ಡ ಮೊತ್ತದ ಹಣವನ್ನು ಜೇಬಿಗಿಳಿಸುತ್ತಾರೆ.
ಶೈನ್ ಶೆಟ್ಟಿ ಬಿಗ್ಬಾಸ್ ನಲ್ಲಿ ವಾರದ ಲೆಕ್ಕದಲ್ಲಿ ಪಡೆಯುತ್ತಾರೆ. ಅದೂ ಅಲ್ಲದೇ ಬಿಗ್ಬಾಸ್ ಟಾಸ್ಕ್’ನಂತೆ ಅವರು ತಮ್ಮ ಗಡ್ಡ ಮೀಸೆಯನ್ನು ತೆಗೆದಿದ್ದರು. ಇದಕ್ಕೆ ಅವರಿಗೆ ವಿಶೇಷ ಉಡುಗೊರೆ ಇದೆ. ಅಂದರೆ ಅವರು ಇನ್ನಷ್ಟು ದಿನಗಳ ಕಾಲ ಇರಬಹುದು. ಶೈನ್ ಶೆಟ್ಟಿಗೆ ವಾರಕ್ಕೆ 60 ಸಾವಿರ ಸಿಗಲಿದ್ದು ಒಂದು ವೇಳೆ ಅವರು ಕನಿಷ್ಠ ಪಕ್ಷ 10 ವಾರ ಇದ್ದರೆ ಸುಮಾರು 6 ಲಕ್ಷ ರೂಪಾಯಿಗಳನ್ನು ಜೇಬಿಗಿಳಿಸುತ್ತಾರೆ. ಇನ್ನೂ ಒಂದು ವೇಳೆ ಪ್ರೇಕ್ಷಕರು ಅವರಿಗೆ ಹೆಚ್ಚು ಓಟ್ ಹಾಕಿದರೆ ಗೆಲ್ಲಬಹುದು. ಗೆದ್ದರೆ 50 ಲಕ್ಷ ಮತ್ತು ಟ್ರೋಫಿ ಗೆಲ್ಲುತ್ತಾರೆ.