53 ಪತ್ರಕರ್ತರಿಗೆ ವಕ್ಕರಿಸಿದೆ ಕರೋನಾ ವೈರಸ್!

0
5495

ದೇಶದ ಪತ್ರಕರ್ತರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ, ದೇಶದ ಹಾಗೂ ರಾಜ್ಯದ ಮೂಲೆ ಮೂಲೆ ಹೊಕ್ಕಿ ಸುದ್ದಿ ಪ್ರಸಾರ ಮಾಡಬೇಕಾಗಿ ಬರುತ್ತದೆ, ಜಗತ್ತಿನಲ್ಲಿ ಸೋಂಕಿನ ಭೀತಿ ಹೆಚ್ಚಾಗಿದೆ, ಮನೆಯಲ್ಲಿ ಕೂತಿರುವ ನಾಗರಿಕರಿಗೆ ಹೊರಗಡೆ ಏನಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಪತ್ರಕರ್ತರು ತಮ್ಮದೇ ಆದ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದಾರೆ, ಇದೇ ಕಾರಣಕ್ಕಾಗಿಯೇ ಸೋಂಕಿನ ಸಂದರ್ಭದಲ್ಲೂ ಆರೋಗ್ಯದ ಒಲವು ತೊರೆದು ಕೆಲಸ ಮಾಡಬೇಕಾಗಿ ಬರುತ್ತದೆ.

ಮುಂಬೈ ನಗರದ ಆಜಾದ್ ಮೈದಾನದಲ್ಲಿ ಕರುನಾ ವೈರಸ್ ಪರೀಕ್ಷೆಗಾಗಿ ವಿಶೇಷ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು, ಈ ಶಿಬಿರದಲ್ಲಿ 171 ಪತ್ರಕರ್ತರು ತಮ್ಮ ಗಂಟಲು ಧ್ರುವವನ್ನು ನೀಡಿ ಪರೀಕ್ಷೆ ಮಾಡಿಸಿಕೊಂಡಿದ್ದರು, ಆದರೆ ಇದರಲ್ಲಿ 53 ಮಂದಿಗೆ ಕರುನಾ ಸೋಂಕು ಇರುವುದು ದೃಢಪಟ್ಟಿದೆ, ಟಿವಿ ಮಾಧ್ಯಮದ ಪತ್ರಕರ್ತರು ಹಾಗೂ ಮುದ್ರಣ ಮಾಧ್ಯಮದ ಲೇಖಕರು ಸೇರಿ ಕ್ಯಾಮೆರಾಮ್ಯಾನ್ ಗಳು ಕೂಡ ಇದರಲ್ಲಿ ಇದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಸೋಂಕಿತರಿಗೆ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದ್ದು, ಇವರ ಸಂಪರ್ಕಕ್ಕೆ ಯಾರು ಬಂದಿದ್ದಾರೆ ಎನ್ನುವ ಬಗ್ಗೆಯೂ ತನಿಖೆ ಆರಂಭ ಮಾಡಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಹೇಳಿಕೆ ನೀಡಿದೆ.

LEAVE A REPLY

Please enter your comment!
Please enter your name here