ಪೊಲೀಸರಿಂದ ಹೊಸ ಪ್ರಯತ್ನ ಇಲ್ಲಿ ನೋಡಿ ಕೊರೋನ ಹೆಲ್ಮೆಟ್..

0
4093

ಮಹಾಮಾರಿ ವೈರಸ್ ಬಗ್ಗೆ ಅರಿವು ಮೂಡಿಸಲು ಪೊಲೀಸರು ನಾನಾ ರೀತಿಯ ಪ್ರಯತ್ನಗಳನ್ನು ಪಡುತ್ತಿದ್ದಾರೆ, ಆದರೆ ಜನರು ಮಾತ್ರ ಇದು ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಲಾಠಿ ಚಾರ್ಜ್ ಮಾಡಿದರೆ ಅದಕ್ಕೂ ಜನರು ಹಲವು ರೀತಿ ಮಾತನಾಡುತ್ತಾರೆ, ಹಾಗಾದರೆ ಪೊಲೀಸರು ಇನ್ನು ಯಾವ ರೀತಿಯಲ್ಲಿ ಜನರಿಗೆ ಅರ್ಥಮಾಡಿಸಬೇಕು ನೀವೇ ಹೇಳಿ? ಕೆಲ ದಿನಗಳ ಹಿಂದೆ ಪೊಲೀಸರು ಕೈಮುಗಿದು ಕಣ್ಣೀರಿಟ್ಟಿದ್ದು ಆಯಿತು ಅದಕ್ಕೂ ಬಗ್ಗೆದ ಜನರಿಗೆ ಕರೋನವೈರಸ್ ರೀತಿಯ ಹೆಲ್ಮೆಟ್ ಅನ್ನು ಧರಿಸಿ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.

ಈ ಹೊಸ ಪ್ರಯತ್ನವನ್ನು ಮಾಡುತ್ತಿರುವುದು ಚೆನ್ನೈ ನಗರದ ಪೊಲೀಸರು, ಅಲ್ಲಿ ಹತ್ತಿರದ ಕಲಾವಿದನ ಸಹಾಯ ಪಡೆದು ವೈರಸ್ ರೀತಿಯಲ್ಲಿ ಹೆಲ್ಮೆಟ್ ರಚನೆ ಮಾಡಿಸಿಕೊಂಡಿದ್ದಾರೆ, ಅದನ್ನು ಧರಿಸಿ ರಸ್ತೆಯಲ್ಲಿ ನಿಂತು ಓಡಾಡುವ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ, ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು 24ಗಂಟೆ ರಸ್ತೆಯಲ್ಲಿ ನಿಂತು ಕೆಲಸ ಮಾಡುತ್ತಿರುವ ಪೊಲೀಸರು ಇನ್ಯಾವ ಪರಿಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕು.

ವೈರಸ್ ಹೆಲ್ಮೆಟ್ ತಯಾರುಮಾಡಲು ಹಾಳಾಗಿರುವ ಹೆಲ್ಮೆಟ್ ಹಾಗೂ ಪೇಪರ್ ಬಳಸಲಾಗಿದೆ, ಈ ಹೆಲ್ಮೆಟ್ ರಚನೆ ಮಾಡಿದವರು ಗೌತಮ್ ಎಂಬುವ ಚೆನ್ನೈ ಮೂಲದ ವ್ಯಕ್ತಿ, ವೈರಸ್ ನ ಗಂಭೀರತೆಯನ್ನು ಜನರಿಗೆ ಅರ್ಥ ಮಾಡಿಸಲು ಪೊಲೀಸರಿಗೆ ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ಈ ಹೊಸ ಯೋಚನೆ ಬಂದು ಹೆಲ್ಮೆಟ್ ವಿನ್ಯಾಸ ಮಾಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here