ನಾಳೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯಿಂದ ಹೊಸ ಸರ್ ಪ್ರೈಸ್ ಸಿಗಲಿದೆ. ಏನಪ್ಪಾ ಅಂತ ಅಂತೀರಾ?! ಏನಿಲ್ಲ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ಹೊಸ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.
ಡಿಸೆಂಬರ್ 27 ಕ್ಕೆ ಬಿಡುಗಡೆ ಆಗಲಿರುವ ಚಿತ್ರದ ಕ್ರೇಜ್ ಜಾಸ್ತಿ ಇದೆ. ಹಾಗಾಗಿ ಇನ್ನೂ ಅದರ ಕುತೂಹಲ ಉಳಿಸಿಕೊಳ್ಳಲು ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತೆ. ನಾಳೆ ನಾಯಕನ ಇಂಟ್ರೋಡಕ್ಷನ್ ಹಾಡು ಬಿಡುಗಡೆ ಆಗುತ್ತೆ. ನಾಗಾರ್ಜುನ ಶರ್ಮಾ ಬರೆದಿರುವ ಹ್ಯಾಂಡ್ಸ್ ಅಪ್ ಎಂಬ ಹಾಡು ರಕ್ಷಿತ್ ಶೆಟ್ಟಿಯ ನಾರಾಯಣನ ಪಾತ್ರ ಕುರಿತಾಗಿದೆ. ಇದರಲ್ಲಿ ನಾಯಕನ ಗುಣಗಾನ, ಅವನ ಮ್ಯಾನರಿಸಂ ಗಳನ್ನು ಚೆನ್ನಾಗಿ ಕವರ್ ಮಾಡಲಾಗಿದೆ. ಈ ಹಾಡಿಗಾಗಿ ಬಾರೀ ವೆಚ್ಚದ ಸೆಟ್ ನಿರ್ಮಿಸಲಾಗಿದ್ದು ರಕ್ಷಿತ್ ಶೆಟ್ಟಿ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ನಾಗಾರ್ಜುನ ಶರ್ಮಾ ಹೇಳಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳನ್ನು ಇವರೇ ಬರೆದಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲ ಹಾಡುಗಳು ಕತೆಗೆ ತಕ್ಕಂತೆ ಬರುತ್ತವೆ . ಯಾವ ಹಾಡೂ ಎಕ್ಸ್ಟಾ ಆಗಿ ಸ್ಪೇಸ್ ತೆಗೆದುಕೊಳ್ಳುವುದಿಲ್ಲ.
ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದವರು ಅಜನೀಶ್ ಲೋಕನಾಥ್. ಈ ಹಿಂದೆ ಕಿರಿಕ್ ಪಾರ್ಟಿಯ ಸಂಗೀತ ನಿರ್ದೇಶನ ಮಾಡಿದವರು ಇವರೇ. ಆ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಕಿರಿಕ್ ಪಾರ್ಟಿಯ ನಂತರ ಅಜನೀಶ್ ಲೋಕನಾಥ್ ಗೆ ಕನ್ನಡ ಮತ್ತು ತಮಿಳಿನಲ್ಲಿ ಭಾರೀ ಅವಕಾಶಗಳು ಸಿಗುತ್ತಿವೆ. ಈ ಚಿತ್ರದ ಮೇಲೂ ಭಾರೀ ನಿರೀಕ್ಷೆ ಇದೆ.