ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ, 9 ತಿಂಗಳ ಗರ್ಭಿಣಿ ಮೃತದೇಹವನ್ನು ಆಕೆಯ ಪೋಷಕರು ಅರಣ್ಯದ ಮರವೊಂದಕ್ಕೆ ಕಟ್ಟಿ ಹೋಗಿರುವ ಅಮಾನವೀಯ ಘಟನೆಯೊಂದು ನಡೆದು ಹೋಗಿದೆ, ಮೃತ ಗರ್ಭಿಣಿಯನ್ನು ಲಾವಣ್ಯ ಎಂದು ಗುರುತಿಸಲಾಗಿದ್ದು, ಈಕೆಯ ಗ್ರಾಮದವರು ಊರಿನಲ್ಲಿ ಗರ್ಭಿಣಿಯ ಅಂತ್ಯಸಂಸ್ಕಾರ ಮಾಡಿದರೆ ಗ್ರಾಮಕ್ಕೆ ಒಳಿತಾಗುವುದಿಲ್ಲ ಮಳೆ-ಬೆಳೆ ಯಾಗುವುದಿಲ್ಲ ಎಂಬ ಕಾರಣ ಕೊಟ್ಟು ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡಲಿಲ್ಲ.
ಕುಟುಂಬದವರು ಎಷ್ಟೇ ಬೇಡಿಕೊಂಡರು ಗ್ರಾಮಸ್ಥರು ಒಪ್ಪಿಗೆ ನೀಡದ ಕಾರಣಕ್ಕೆ ಏನು ಮಾಡಬೇಕು ಎಂದು ತೋಚದೆ ಹತ್ತಿರವೇ ಇದ್ದ ಅರಣ್ಯದ ಮರವೊಂದಕ್ಕೆ ಆಕೆಯ ದೇಹವನ್ನು ಕಟ್ಟಿ ಬಂದಿದ್ದಾರೆ, ಮರುದಿನ ಕಟ್ಟಿಗೆ ಸಂಗ್ರಹಿಸಲು ಸುತ್ತಲ ಊರಿನ ಜನರು ಕಾಡಿಗೆ ಬಂದಾಗ ಮರಕ್ಕೆ ಕಟ್ಟಿರುವ ಮೃತದೇಹ ನೋಡಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಂದು ಪೊಲೀಸರು ಮೃತ ದೇಹದ ಕುಟುಂಬದವರನ್ನು ಹುಡುಕಿ ವಿಚಾರಣೆ ನಡೆಸಿದಾಗ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಳ್ಳಲಿಲ್ಲ ಎಂಬ ವಿಚಾರ ತಿಳಿದು ಬಂದಿದೆ.
ನಂತರ ಪೊಲೀಸರು ಗ್ರಾಮದ ಅವರ ಹತ್ತಿರ ಅಂತ್ಯಸಂಸ್ಕಾರ ಮಾಡಲು ಎಷ್ಟೇ ಮನವೊಲಿಸಿದರು ಅವರು ಒಪ್ಪಿಗೆ ನೀಡಲಿಲ್ಲ ಕೊನೆಗೆ ಏನು ಮಾಡಬೇಕೆಂದು ತೋಚದೆ ಮೃತದೇಹದ ಅಂತ್ಯ ಸಂಸ್ಕಾರವನ್ನು ಪೊಲೀಸರು ಮಾಡಿ ಮುಗಿಸಿದ್ದಾರೆ, ನಂತರ ಅದೇ ಗ್ರಾಮದ 15 ಜನರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ, ಕೆಲವು ಮೂಢಾಚರಣೆಗಳು ನಮ್ಮ ದೇಶವನ್ನು ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ಯಲು ಅವಕಾಶ ಕೊಡುವುದಿಲ್ಲ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.