ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 68 ಫಲಿತಾಂಶ ಪಡೆದಿದ್ದಕ್ಕೆ ಈ ಹುಡುಗಿಗೆ ಸಿಗ್ತು ಮನೆ ಗಿಫ್ಟ್!

0
4887

ಹೌದು ಈ ಗಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ, ಇಂದೋರ್ ನ ಫುಟ್ಪಾತ್ ನಲ್ಲಿ ವಾಸವಾಗಿದ್ದ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ದಂಪತಿಗಳ ಮಗಳು ವಿದ್ಯಾರ್ಥಿನಿ ಭಾರ್ತಿ ಎನ್ನುವ ಹುಡುಗಿಗೆ ಹತ್ತನೇ ತರಗತಿಯಲ್ಲಿ ಶೇಕಡ 68 ಫಲಿತಾಂಶ ಪಡೆದ ಕಾರಣ ಈಕೆಗೆ ಒಂದು ಫ್ಲಾಟ್ ಹಾಗೂ ಮುಂದೆ ಬರುವ ಈಕೆಯ ಎಲ್ಲಾ ವಿದ್ಯಾಭ್ಯಾಸದ ಖರ್ಚನ್ನು ಉಚಿತ ವಾಗಿರುವಂತೆ ಮಾಡಿದ ಘಟನೆ ನಡೆದಿದೆ.

1 ಬಿ ಎಚ್ ಕೆ ಫ್ಲಾಟ್ ಅನ್ನು ಉಚಿತವಾಗಿ ನೀಡಿರುವ ಇಲ್ಲಿನ ಪಾಲಿಕೆ ಆಯುಕ್ತರು ಈ ಹುಡುಗಿಯ ಮುಂದಿನ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಸಹ ನೋಡಿಕೊಳ್ಳಲಿದ್ದಾರೆ ಈಗಾಗಲೇ ಓದಿಗೆ ಬೇಕಾದ ಟೇಬಲ್ ಕುರ್ಚಿ ಪುಸ್ತಕ ಹಾಗೂ ಬಟ್ಟೆಗಳನ್ನು ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಶಾಂತ್ ತಿಳಿಸಿದ್ದಾರೆ.

ಈಕೆಯ ಪೋಷಕರು ತಮಗೆ ಹೊಸಮನೆ ಸಿಗುತ್ತಿರುವ ಬಗ್ಗೆ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದು ಇದಕ್ಕೂ ಮೊದಲು ನಾವು ಗುಡಿಸಲಲ್ಲಿ ವಾಸವಿದ್ದವು ಆದರೆ ಒತ್ತುವರಿ ಮಾಡಿದ್ದ ಕಾರಣ ಗುಡಿಸಲನ್ನು ನೆಲಸಮ ಮಾಡಲಾಯಿತು. ಆದರೆ ಇಂದು ತಮ್ಮ ಮಗಳಿಂದ ಸ್ವಂತ ಮನೆ ದೊರೆತಿದೆ ಆಕೆ ತುಂಬಾ ಶ್ರಮಪಟ್ಟು ಮಧ್ಯರಾತ್ರಿ ಒಂದು ಗಂಟೆವರೆಗೂ ಓದುತ್ತಾಳೆ, ಓದಿನಲ್ಲಿ ನನ್ನ ಮಗಳಿಗೆ ಅತಿಯಾದ ಚಲ ಇದ್ದು ಅವಳು ಮುಂದೆ ಐಎಎಸ್ ಆಗಬೇಕು ಎಂಬ ಆಸೆಯನ್ನು ಹೊಂದಿದ್ದಾಳೆ ಎಂದರು.

LEAVE A REPLY

Please enter your comment!
Please enter your name here