ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನಿನ್ನೆ ಫೇಸ್ ಬುಕ್ ಲೈವ್ ಗೆ ಬಂದಿದ್ದರು, ಈ ಸಂದರ್ಭ ಮೈಸೂರಿನ ನಂಜನಗೂಡಿನಲ್ಲಿ ಕೊರೋನ ಅಟ್ಟಹಾಸದ ಬಗ್ಗೆ ಜನರಿಗೆ ಜಾಗೃತಿ ನೀಡುತ್ತಿದ್ದರು, ಅದರ ಜೊತೆಯಲ್ಲಿ ಆಘಾತಕಾರಿ ಸುದ್ದಿಯನ್ನು ನೀಡಿದ್ದಾರೆ, ಈವರೆಗೆ ನಂಜನಗೂಡಿನಲ್ಲಿ 5 ಕೊರೊನ ಪೀಡಿತರ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ, ಆದರೆ ಇನ್ನೂ 4 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದನ್ನು ಸರ್ಕಾರ ಅಧಿಕೃತವಾಗಿ ತಿಳಿಸಬೇಕಿದೆ ಅಷ್ಟೇ ಎಂದರು.
ತುಂಬಾ ಜನರಿಗೆ ತಮಗೆ ಕೊರೊನ ಬಂದಿದೆ ಎಂದು ತಿಳಿದಿರುವುದಿಲ್ಲ , ಅದೇ ಕಾರಣಕ್ಕಾಗಿ ಅಧಿಕಾರಿಗಳು ಹಾಗೂ ವೈದ್ಯರು ಮುಂಜಾಗೃತಾ ಕ್ರಮಗಳನ್ನು ವಹಿಸಿ ತಪಾಸಣೆಗಳನ್ನು ನಡೆಸುತ್ತಿರುವುದರಿಂದ ನಾಲ್ಕು ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ, ದಿನೇದಿನೇ ನಂಜನಗೂಡಿನಲ್ಲಿ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಂಜನಗೂಡನ್ನು ಸಂಪೂರ್ಣ ಲಾಕ್ ಡೌನ್ ಮಾಡಿದ್ದರು, ಜನರು ಮಾತ್ರ ತರಕಾರಿ, ಹಾಲು, ಮಾಂಸ ಎಂದು ಬೀದಿಗೆ ಇಳಿಯುತ್ತಿದ್ದಾರೆ, ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.