ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದೊಂದು ಕನ್ನಡ ಚಿತ್ರರಸಿಕರಿಗೆ ಹಾಗೂ ದರ್ಶನ್ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ, ಬಿಡುಗಡೆಯಾದ ದಿನ ಬೆಳಗಿನ ಜಾವ 1 ಘಂಟೆಗೆ ಅಭಿಮಾನಿಗಳಿಗಾಗಿ ಸಿನಿಮಾ ಪ್ರದರ್ಶನ ಇರುತ್ತದೆ, ಆದರೆ ಈ ಬಾರಿ ದರ್ಶನ್ ಅಭಿನಯದ ಒಡೆಯ ಸಿನಿಮಾ ಬಿಡುಗಡೆಯಾದಾಗ ಅಷ್ಟೊಂದು ಕ್ರೇಜ್ ಕಾಣಿಸಲಿಲ್ಲ, ಎಲ್ಲ ಚಿತ್ರಮಂದಿರಗಳಲ್ಲೂ ಬೆಳಗ್ಗೆ 9 ಗಂಟೆಯ ನಂತರವೇ ಪ್ರದರ್ಶನ ಶುರುವಾಯಿತು, ಇದೇ ಕಾರಣಕ್ಕಾಗಿ ಏನೋ ಮೊದಲ ದಿನ ಒಡೆಯ ಸಿನಿಮಾ ಅಷ್ಟೊಂದು ಮೊತ್ತದ ಕಲೆಕ್ಷನ್ ಮಾಡಲಿಲ್ಲ.
ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ದರ್ಶನ್ ಅವರ ಒಡೆಯ ಸಿನಿಮಾ ಮೊದಲ ದಿನ 3 ಕೋಟಿ ಕಲೆಕ್ಷನ್ ಮಾಡಿದೆ ಅಂತೆ, ಆದರೆ ವಾರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ ಏರಿಕೆ ಕಂಡಿದೆ, ಶನಿವಾರ ನಾಲ್ಕು ಕೋಟಿ ಕಲೆಕ್ಷನ್ ಮಾಡಿದರೆ ಭಾನುವಾರ 5 ಕೋಟಿ ಕಲೆಕ್ಷನ್ ಮಾಡಿದೆ ಅಂತೆ, ಈ ವರ್ಷ ದರ್ಶನ್ ಅವರು ಅಭಿನಯದ ಯಜಮಾನ ಮತ್ತು ಕುರುಕ್ಷೇತ್ರ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸೇರಿವೆ, ಒಡೆಯ ಸಿನಿಮಾ ಕೂಡ ಯಶಸ್ಸನ್ನು ಕಂಡರೆ ದರ್ಶನ್ ಅವರು ಈ ವರ್ಷ ಹ್ಯಾಟ್ರಿಕ್ ಬಾರಿಸುತ್ತಾರೆ.
ಮೊದಲ ದಿನ ಕಲೆಕ್ಷನ್ ಕಡಿಮೆ ಇದ್ದರೂ ನಂತರ ದಿನಗಳಲ್ಲಿ ಒಡೆಯ ಸಿನಿಮಾ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದೇನೆ, ಇನ್ನು ಹೊಡೆಯ ಸಿನಿಮಾ ತಮಿಳು ಚಿತ್ರ ವೀರಮ್ ಚಿತ್ರದ ರೀಮೇಕ್ ಆಗಿತ್ತು ಅಷ್ಟೇ ಅಲ್ಲ ಈ ಸಿನಿಮಾ ತೆರೆಕಂಡು ಬರೋಬ್ಬರಿ ಐದು ವರ್ಷಗಳು ಕಳೆದಿದೆ, ಹಲವರು ಈ ಸಿನಿಮಾವನ್ನು ನೋಡಿದ್ದಾರೆ, ಬಹಳ ಜನರಿಗೆ ಸಿನಿಮಾದ ಕಥೆ ಗೊತ್ತಿದೆ, ಇದೇ ಕಾರಣಕ್ಕಾಗಿ ಸಿನಿಮಾ ಅಷ್ಟು ಒಳ್ಳೆಯ ಓಪನಿಂಗ್ ಪಡೆದುಕೊಳ್ಳಲಿಲ್ಲ ಎಂಬುದು ಗಾಂಧಿನಗರದ ಮಾತು, ಅದೇನೇ ಇರಲಿ ನಂತರ ದಿನಗಳಲ್ಲಿ ಸಿನಿಮಾ ತನ್ನ ಕಲೆಕ್ಷನ್ ಹೆಚ್ಚಿಸಿ ಕೊಂಡಿರುವುದು ದರ್ಶನ್ ಅವರು ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.