ಸ್ಕಂದ ಮಾತೆಯನ್ನು ನವರಾತ್ರಿಯ ಐದನೇ ದಿನ ಆರಾಧಿಸುವವರು ಜೀವನದಲ್ಲಿ ಶಾಂತಿ ಹಾಗೂ ಸಂತೋಷವನ್ನು ಪಡೆಯುತ್ತಾರೆ. ಹಾಗೂ ಮೋಕ್ಷದ ಮಾರ್ಗವು ಸುಲಭವಾಗಿರುತ್ತದೆ. ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಭಗವಾನ್ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ.
ಸ್ಕಂದ ಮಾತೆಯ ಮಹತ್ವ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುತ್ತದೆ. ಈ ರೂಪದಲ್ಲಿ ತಾಯಿಯು ಸಂತೋಷದಿಂದ ಹಾಗೂ ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ. ಸ್ಕಂದ ಮಾತೆಯ ರೂಪ : ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.
ಪೂಜಾ ವಿಧಿ : ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು. ಸ್ಕಂದಮಾತೆಯ ಮಂತ್ರ ಓಂ ದೇವಿ ಸ್ಕಂದಮಾತಾಯ ನಮಃ ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಂಚಿತ ಕರದ್ವಾಯೇ. ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ
ಪ್ರಾರ್ಥನೆ : ಸಿಂಹಸಂಗತ ನಿತ್ಯಂ ಪದ್ಮಾಂಚಿತ ಕರದ್ವಾಯೇ ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ. ಸ್ತುತಿ : ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ. ಧ್ಯಾನ ಮಂತ್ರ : ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ ಸಿಂಹರುಧ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ ಧವಲವರ್ಣ ವಿಶುದ್ಧ ಚಕ್ರಸ್ಥಿತೋಂ ಪಂಚಮ ದುರ್ಗಾ ತ್ರಿನೇತ್ರಂ ಅಭಯ ಪದ್ಮ ಯುಗ್ಮ ಕರಂ ದಕ್ಷಿಣ ಉರು ಪುತ್ರಧರಂ ಭಜೆಂ.
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕಾರ ಭೂಷಿತಂ ಮಂಜಿರಾ, ಹರಾ, ಕೀಯೂರ, ಕಿಂಕಿಣಿ, ರತ್ನಕುಂಡಲ ಧಾರಿಣೀಂ ಪ್ರಫುಲ್ಲ ವಂದನಾ ಪಲ್ಲವಧರಂ ಕಾಂತಾ ಕಪೋಲಂ ಪಿನಾ ಪಯೋಧರಂ ಕಾಮನಿಯಂ ಲಾವಣ್ಯಂ ಚಾರು ತ್ರೈವಲ್ಲಿ ನಿತಂಬನೀಂ. ಸ್ತೋತ್ರ : ನಮಾಮಿ ಸ್ಕಂದಮಾತಾ ಸ್ಕಂದಧಾರಿಣೀಂ ಸಮಗ್ರತಾತ್ವಸಾಗರಂ ಪರಪರಗಹರಂ ಶಿವಪ್ರಭಾ ಸಮುಜ್ವಲಾಂ ಸ್ಫುಚ್ಛಾಶಾಶಶೇಖರಂ ಲಲಾಟರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ. ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾಧ್ಬುತಂ ಅತರ್ಕ್ಯರೋಚಿರುವಿಜಂ ವಿಕಾರ ದೋಷವರ್ಜಿತಂ ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ.
ನಾನಾಲಂಕಾರ ಭೂಷಿತಾಂ ಮೃಗೇಂದ್ರವಾಹನಾಗೃಜಂ ಸುಶುದ್ಧತಾತ್ವತೋಶನಂ ತ್ರಿವೇಂದಮರ ಭೂಷಣಂ ಸುಧಾರ್ಮಿಕಾಪುಕಾರಿಣಿ ಸುರೇಂದ್ರ ವೈರಿಗ್ರತಿನಿಂ ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಂ. ಸಹಸ್ರಸೂರ್ಯರಂಜಿಕಂ ಧನಜ್ಜೋಗಕಾರಿಕಂ ಸುಶುದ್ಧಾ ಕಾಲ ಕಂಡಾಲ ಶುಭ್ರಿದವೃಂದಮಾಜ್ಜುಲಂ ಪ್ರಜಾಯಿಣೀ ಪ್ರಜಾವತೀ ನಮಾಮಿ ಮಾತರಂ ಸತೀಂ ಸ್ವಕರ್ಮಕಾರಣೇ ಗತೀಂ ಹರಿಪ್ರಯಾಚ ಪಾರ್ವತಿಂ.ಅನಂತಶಕ್ತಿ ಕಾಂತಿದಾಂ ಯಶೋರ್ಥಭಕ್ತಿಮುಕ್ತಿದಾಂ ಪುನಃ ಪುನಾರ್ಜಗದ್ಧಿತಂ ನಮಾಮ್ಯಂ ಸುರಾರ್ಚಿತಂ ಜಯೇಶ್ವರಿ ತ್ರಿಲೋಚನೆ ಪ್ರಸಿದಾ ದೇವಿ ಪಾಹಿಮಾಂ. ಸ್ಕಂದ ಮಾತಾ ಕವಚ : ಏಂ ಬಿಜಲಿಂಕಾ ದೇವಿ ಪದ್ಯುಗ್ಮಧರಾಪರಾ ಹೃದಯಂ ಪಾತು ಸ ದೇವಿ ಕಾರ್ತಿಕೇಯಾಯುತ. ಶ್ರೀ ಹ್ರೀಂ ಹ್ರೀಂ ಏಂ ದೇವೀ ಪರ್ವಸ್ಯಾ ಪಾತು ಸರ್ವದಾ ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ ವನವನಾಮೃತೇಂ ಹಂ ಫತ್ ಬಿಜಾ ಸಮಾನ್ವಿತ ಉತ್ತರಸ್ಯಾ ತಥಗ್ನೇ ಚಾ ವಾರುಣೇ ನೈರಿತೈವತು.
ಇಂದ್ರಾಣಿ ಭೈರವೀ ಚೈವಾಸಿತಂಗಿ ಚ ಸಂಹಾರಿಣಿ ಸರ್ವದಾ ಪಾತು ಮಂ ದೇವಿ ಚನ್ಯಾನ್ಯಸು ಹಿ ದೀಕ್ಷು ವೈ. ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯ ಪೂಜೆ ಮಾಡಿದರೆ ಮನಃ ಶುದ್ಧಿಯಾಗುವುದು. ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಭಕ್ತರು ಯಶಸ್ಸು ಹಾಗೂ ಖ್ಯಾತಿಯನ್ನು ಪಡೆಯುತ್ತಾರೆ, ಅಲ್ಲದೇ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಾರೆ. ದೇವಿಯ ಈ ರೂಪದ ಪೂಜೆಯಿಂದ ಸಾಧಕನಿಗೆ ಅಲೌಕಿಕ ತೇಜಸ್ಸು ಹಾಗೂ ಪ್ರಭೆಯು ಸಿಗುವುದರಿಂದ ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ.