ವೈರಲ್ ಆದ ಫೋಟೋ ಹಿಂದಿದೆ ಕಣ್ಣೀರ ಕಹಾನಿ !

0
3158

ಇತ್ತಿಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಯ ಕಾಲನ್ನು ಹಿಡಿದು ಕೊಂಡು ಶೇಕ್ ಮಾಡುವ ರೀತಿಯಲ್ಲಿ ಇರುವ ಫೋಟೋ ಬಾರೀ ವೈರಲ್ ಆಗಿತ್ತು. ಅವರ ಸರಳತೆಗೆ ಇಡೀ ದೇಶವೇ ಮೆಚ್ಚಿಕೊಂಡಿದೆ.

ಹೌದು! ವಿಶೇಷ ಚೇತನ ಎರಡೂ ಕೈಗಳಿಲ್ಲದ ಕಾಲಿನಿಂದಲೇ ಚಿತ್ರಗಳನ್ನು ಬಿಡಿಸುವ ಎಂಬಿ ಪ್ರಣವ್ ಸೂಪರ್‌ ಸ್ಟಾರ್ ರಜನಿಕಾಂತ್ ರವರನ್ನು ಚೆನ್ನೈ ನ ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ. ಬಹಳ ವರ್ಷಗಳಿಂದ ರಜನಿಯವರನ್ನು ಮುಖತಃ ಭೇಟಿ ಮಾಡಬೇಕು, ಅವರ ಜೊತೆ ಮಾತನಾಡಬೇಕು ಎಂಬುದು ಪ್ರಣವ್’ರ ಕನಸಾಗಿತ್ತು.

ಇದನ್ನು ಮನಗಂಡ ರಜನಿಕಾಂತ್ ತಮ್ಮ ಚಿತ್ರದ ಶೂಟಿಂಗ್ ಕ್ಯಾನ್ಸಲ್ ಮಾಡಿ ಪ್ರಣವ್’ಗೆ ಭೇಟಿ ಮಾಡಲು ಅವಕಾಶ ಕೊಟ್ಟರು. ಎಷ್ಟೇ ಶ್ರೀಮಂತ ದೊಡ್ಡ ನಟರಾದರೂ ಅವರ ಸರಳತೆಗೆ ಮೆಚ್ಚಲೇಬೇಕು.

ಎಂಬಿ ಪ್ರಣವ್ ಕಾಲಿನಿಂದಲೇ ಅದ್ಭುತವಾಗಿ ಚಿತ್ರಗಳನ್ನು ಬಿಡಿಸುತ್ತಾರೆ. ಅನೇಕ ಚಿತ್ರ ನಟರು, ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಸಲ ಓಣಂನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರವರನ್ನು ಭೇಟಿ ಮಾಡಿ ಅವರ ಚಿತ್ರವನ್ನು ಬಿಡಿಸಿಕೊಟ್ಟರು. ಇದನ್ನು ಕಂಡು ಸಚಿನ್ ನಿಬ್ಬೆರಗಾದರು.

ಕಳೆದ ತಿಂಗಳು ಕೇರಳದ ಮುಖ್ಯಮಂತ್ರಿ ಪಿಣರಾಯ್’ರವರನ್ನು ಭೇಟಿ ಆಗಿ ಅವರ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ಸಕ್ಕತ್ ವೈರಲ್ ಆಗಿತ್ತು. ತಮ್ಮ ಹುಟ್ಟಿದ ಹಬ್ಬದ ಪ್ರಯುಕ್ತ ಚಿತ್ರಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ನೆರೆ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಅವರನ್ನು ಭೇಟಿಯಾಗಿದ್ದರು. ಇದನ್ನು ಕೇಳಿ ಸ್ವತಃ ಮುಖ್ಯಮಂತ್ರಿಯವರೇ ಭಾವುಕರಾಗಿ ನಿಬ್ಬೆರಗಾದರು.

ಸುಮಾರು 21 ವರ್ಷದ ಎಂಬಿ ಪ್ರಣವ್ ಬಾಲ್ಯದಿಂದಲೇ ಕೈಗಳನ್ನು ಕಳೆದುಕೊಂಡವರು. ಆದರೆ ಅವರ ತಂದೆ ಬಾಲಸುಬ್ರಮಣಿಯನ್ ರವರು ಅವರನ್ನು ಆತ್ಮವಿಶ್ವಾಸ ತುಂಬಿದರು. ಅವರಿಗೆ ಯಾವ ಟಾಲೆಂಟ್ ಇದೆ ಎಂದು ಕಂಡುಕೊಂಡರು. ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ ಎಂದು ಅರಿತು ಅದರಲ್ಲಿ ಅವರಿಗೆ ಶಿಕ್ಷಣ ಕೊಡಿಸಿದರು. ಈಗ ಅವರು ಒಂದು ಸಾರ್ಥಕ ಜೀವನವೆ ಕಳೆಯುತ್ತಿದ್ದಾರೆ.

ಬದುಕು ನಮಗೆ ಏನೆಲ್ಲಾ ಕೊಟ್ಟಿದೆ. ಆದರೆ ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ. ಆದರೆ ಆತ್ಮವಿಶ್ವಾಸ ಇದ್ದವರು ತಮಗೆ ಇಲ್ಲ ಎಂದು ಅಂದುಕೊಳ್ಳದೆ ಅಪರಿಮಿತ ಉತ್ಸಾಹದಿಂದ ಸಾಧನೆ ಮಾಡುತ್ತಾರೆ. ಆ ಮೂಲಕ ಇತರರಿಗೆ ಮಾದರಿಯಾಗುತ್ತಾರೆ.

LEAVE A REPLY

Please enter your comment!
Please enter your name here