ಹಣೆಗೆ ಕುಂಕುಮವಿಟ್ಟು ರಸ್ತೆಯಲ್ಲಿ ಜನರಿಗೆ ಪೂಜೆ ಮಾಡುತ್ತಿರುವ ಪೊಲೀಸರು.. ವೈರಲ್ ವಿಡಿಯೋ.

0
3625

ಸಂಪೂರ್ಣ ದೇಶವೇ ಲಾಕ್ಡೌನ್ ಆಗಿದ್ದರು ಸರ್ಕಾರದ ನಿಯಮವನ್ನು ದಿಕ್ಕರಿಸಿ ಮುಖಕ್ಕೆ ಮಾಸ್ಕ್ ಕೂಡ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ವಿಜಯಪುರದ ಗಾಂಧಿ ಚೌಕ್ ಪೊಲೀಸರು ವಿಶಿಷ್ಟ ರೀತಿಯಲ್ಲಿ ಬುದ್ಧಿ ಹೇಳಿದ್ದಾರೆ, ಲಾಕ್ ಡೌನ್ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಸುಮ್ಮನೆ ಓಡಾಡುತ್ತಿದ್ದವರನ್ನು ತಡೆದು ಹಣೆಗೆ ಕುಂಕುಮವಿಟ್ಟು ಗಂಧದ ಕಡ್ಡಿ ಯಲ್ಲಿ ಪೂಜೆ ಮಾಡಿದ್ದಾರೆ, ಇನ್ನು ಈ ಪೂಜಾ ಕಾರ್ಯಕ್ರಮ ಗಾಂಧಿ ಚೌಕ ಪೊಲೀಸ್ ಠಾಣಾ ಸಿಬಿಐ ಅಧಿಕಾರಿ ರವೀಂದ್ರ ನಾಯ್ಕೋಡಿ ಹಾಗೂ ಸಂಚಾರಿ ಪಿಎಸ್ಐ ಅಧಿಕಾರಿ ಆರಿಫ್ ಮುಶ್ರಪುರಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

ಈ ಪೂಜಾ ಕಾರ್ಯಕ್ರಮವನ್ನು ನಗರದ ಹಲವೆಡೆ ಅಂದರೆ ಗೋದಾವರಿ, ಗಾಂಧೀ ಚೌಕ ಬಳಿ ನಡೆಸಲಾಗುತ್ತಿದ್ದು ಉಳಿದೆಡೆ ಲಾಠಿಪ್ರಹಾರ ಮುಂದುವರೆದಿದೆ, ಮೊದಲಬಾರಿಗೆ ನಿಯಮ ಉಲ್ಲಂಘನೆ ಮಾಡಿದ ಕಾರಣ ಪೂಜೆಮಾಡಿ ಕಳಿಸುತ್ತಿದ್ದೇವೆ ಮತ್ತೊಮ್ಮೆ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸಹ ನೀಡುತ್ತಿದ್ದಾರೆ, ಪೊಲೀಸರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here