ಈಗ ಕಾಲ ಬದಲಾಗಿದೆಯೋ ಅಥವಾ ಜನರೇ ಬದಲಾಗಿದ್ದಾರೋ ಗೊತ್ತಿಲ್ಲ. ಆದರೆ ಶ್ರೀಮಂತಿಕೆ, ಅಹಂಕಾರ ಮನುಷ್ಯನನ್ನು ಕುರುಡಾಗಿಸುತ್ತೆ. ಅಂದರೆ ಇತರರು ಕಷ್ಟದಲ್ಲಿದ್ದರೂ ಅವರನ್ನು ನಾವು ನೋಡುವುದಿಲ್ಲ. ಕುರುಡಾಗುತ್ತೇವೆ.
ಚೀನಾದ ರಾಜಧಾನಿ ಬೀಜಿಂಗ್’ನಲ್ಲಿ ಒಂದು ದೊಡ್ಡ ಆಸ್ಪತ್ರೆಗೆ ಗಂಡ ತನ್ನ ಗರ್ಭಿ’ ಣಿ ಹೆಂಡತಿಯನ್ನು ಚೆಕಪ್ ಮಾಡಿಸಲು ಕರೆದುಕೊಂಡು ಬರುತ್ತಾನೆ. ಆಕೆಯೊ ತಿಂಗಳು ತುಂಬಿದವಳು. ಇನ್ನ ಆಸ್ಪತ್ರೆ ಅಂದ ಮೇಲೆ ಜನ ಇದ್ದೇ ಇರ್ತಾರಲ್ಲ. ಕ್ಯೂ ಇತ್ತು . ಟೋಕನ್ ಪ್ರಕಾರ ಒಳಹೋಗಬೇಕು. ಪಾಪ ಇವರಿಗೆ ಅಲ್ಲಿ ಕೂರಲು ಜಾಗವಿರಲಿಲ್ಲ. ಇದ್ದ ಸೀಟುಗಳಲ್ಲಿ ಜನರು ಕೂತಿದ್ದರು. ಆಕೆ ಪಾಪ ನನಗೆ ಹೆಚ್ಚು ಹೊತ್ತು ನಿಲ್ಲಲು ಆಗುವುದಿಲ್ಲ. ದಯವಿಟ್ಟು ಸೀಟ್ ಬಿಟ್ಟುಕೊಡಿ ಎಂದು ಕೇಳಿಕೊಳ್ಳುತ್ತಾಳೆ. ಆದರೆ ಅಲ್ಲಿನ ಜನರು ಅವಳ ಮಾತೇ ಕೇಳಿಸದಂತೆ ಸುಮ್ಮನೆ ಕೂತಿರುತ್ತಾರೆ.
ಇದನ್ನು ಕಂಡು ಗಂಡ ಹತಾಷನಾಗುತ್ತಾನೆ. ತನ್ನ ಪತ್ನಿಯ ಪರಿಸ್ಥಿತಿ ಅವನಿಗೆ ದುಃಖ ಉಂಟು ಮಾಡುತ್ತದೆ. ಕೊನೆಗೆ ಅವನು ತನ್ನ ಪತ್ನಿಗೆ ಹೇಳುತ್ತಾನೆ. ನಾನು ನೆಲದ ಮೇಲೆ ಕೂರುತ್ತೇನೆ .ನೀನು ನನ್ನ ಬೆನ್ನ ಮೇಲೆ ಅರಾಮಾಗಿ ಕೂರು ಎಂದು ಕುಳಿತುಕೊಳ್ಳುತ್ತಾನೆ. ಆಗ ಅವಳು ಅವನ ಬೆನ್ನ ಮೇಲೆ ಕೂರುತ್ತಾಳೆ.
ಈ ವೀಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ಸೆರೆ ಆಗಿದ್ದು ಆ ದೇಶದ ಪೋಲಿಸ್ ಇಲಾಖೆ ತನ್ನ ವೆಬ್ಸೈಟ್ ನಲ್ಲಿ ಹಾಕಿ ಅವಳ ಗಂಡನ ಕೆಲಸಕ್ಕೆ ಭೇಷ್ ಎಂದಿದ್ದಾರೆ. ಈ ವಿಡಿಯೋ ಸುಮಾರು 80 ಲಕ್ಷ ವೀವ್ಸ್ ಪಡೆದಿದೆ. ಜನರು ಎಲ್ಲಾ ಕಡೆ ಇದನ್ನು ಖುಷಿಯಿಂದ ಶೇರ್ ಮಾಡುತ್ತಿದ್ದು ಗಂಡನ ನಿಷ್ಕಲ್ಮಶ ಪ್ರೀತಿಗೆ ತಲೆಬಾಗಿದ್ದಾರೆ. ಹಾಗೆಯೆ ಅಲ್ಲಿ ಜನರು ಸೀಟ್ ಬಿಟ್ಟುಕೊಡದೇ ಅಮಾನವೀಯತೆ ವರ್ತಿಸಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೆ ಆಸ್ಪತ್ರೆಯವರು ಇಂತಹ ಮಹಿಳೆಯರು, ವೃದ್ಧ ರಿಗೆ ಮೊದಲ ಆದ್ಯತೆ ಕೊಡಬೇಕು. ಹಾಗೂ ಅಲ್ಲಿ ಸೆಕ್ಯುರಿಟಿ ಜನರನ್ನು ನೇಮಕ ಮಾಡಬೆಕು ಎಂದು ಜನರು ಸಲಹೆ ನೀಡಿದರು. ನೀವು ಕೂಡ ವೀಡಿಯೋ ನೋಡಿ. ನಿಮ್ಮ ಅಭಿಪ್ರಾಯ ತಪ್ಪದೇ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.