ನಿಜವಾದ ಸ್ವಾತಂತ್ರ್ಯ ಎಂದರೆ ಏನು ಹಾಗು ಹೇಗಿರುತ್ತದೆ..!!

0
2088

ಒಬ್ಬ ವಿದ್ಯಾರ್ಥಿ ಪರೀಕ್ಷೆಯ ಹಾಲ್‌ನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾನೆ. ಅಂತಹ ಸಮಯದಲ್ಲಿ ಆತ ನನಗೆ ಸ್ವಾತಂತ್ರ್ಯ ಬೇಕು ಎಂದುಕೊಂಡು ಪರೀಕ್ಷೆಯ ಮಧ್ಯದಲ್ಲೇ ಎದ್ದು ಹೊರಗೆ ಹೋದರೆ ಏನಾಗುತ್ತದೆ? ಆ ಸ್ವಾತಂತ್ರ್ಯ ಆತನ ಅಭಿವೃದ್ಧಿಗೆ ಪ್ರತಿಬಂಧಕವಾಗುತ್ತದೆ.

ವರ್ಷವೆಲ್ಲಾ ಕಷಪಟ್ಟು ಓದಿ, ಆ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣನಾದರೆ ಆತನಿಗೆ ಲಾಭ, ಇಷ್ಟರಲ್ಲೇ ನನಗೆ ಸ್ವಾತಂತ್ರ್ಯ ಇಲ್ಲ ಎಂದು ಆಕ್ರೋಶಿಸಿದರೆ ಆತನಿಗೆ ವರ್ಷದ ಹಣ, ಸಮಯ ಮತ್ತು ಶ್ರಮ ವ್ಯರ್ಥವಾಗುತ್ತದೆ.

ಹಾಗೆಯೇ, ನಾವು ಕೂಡಾ ಅನೇಕಾನೇಕ ನಕ್ಷತ್ರಲೋಕಗಳಲ್ಲಿ ಕೆಲವು ಯುಗಗಳು ಕಳೆದು ಬಹಳಷ್ಟು ವಿಷಯಗಳನ್ನು ಸಂಗ್ರಹಿಸಿಕೊಂಡು ಅದನ್ನು ಅನುಭವ ಜ್ಞಾನದಂತೆ ರೂಪಿಸಿಕೊಳ್ಳಲು ಈ ಭೂಮಿ ಎನ್ನುವ ಪರೀಕ್ಷಾ ಹಾಲ್ ಗೆ ಬಂದಿದ್ದೇವೆ, ಇಲ್ಲಿನ ನಿಯಮ, ನಿಬಂಧನೆಗಳು ಎಲ್ಲವನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ಬಂದಿದ್ದೇವೆ.

ಆದರೂ ಜೀವನ ಎನ್ನುವ ಪ್ರಶ್ನೆಪತ್ರಿಕೆ ಕೈಗೆ ಬಂದ ಮೇಲೆ ಅದನ್ನು ಪೂರ್ತಿಮಾಡದಂತೆ ನನಗೆ ಸ್ವಾತಂತ್ರ್ಯ ಬೇಕು ಎನ್ನುತ್ತಾ ಪರೀಕ್ಷೆಯ ಮಧ್ಯದಲ್ಲಿಯೇ ಎದ್ದು ಹೊರ ಬರುವುದು ಮೂರ್ಖತನ ಎನಿಸಿಕೊಳ್ಳುತ್ತದೆ.

ಪರೀಕ್ಷೆಯ ಹಾಲ್‌ನಲ್ಲಿ ಕುಳಿತು ಪ್ರತಿಯೊಂದು ಪ್ರಶ್ನೆಗೂ ತನ್ನ ಬಳಿಯಿರುವ ಜ್ಞಾನವನ್ನು ಉಪಯೋಗಿಸಿ ಒಳ್ಳೆಯ ಉತ್ತರಗಳನ್ನು ಬರೆಯುತ್ತಾ ಹಾಗೆ ಬರೆಯುತ್ತಿದ್ದಾಗ ಹೊಂದುವ ಸ್ವಾತಂತ್ರ್ಯವನ್ನು ಒಂದೊಂದು ಕೋನದಲ್ಲೂ ಅನುಭವಿಸುತ್ತಾ ಇರುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ.

LEAVE A REPLY

Please enter your comment!
Please enter your name here