ಬಿಗ್’ಬಾಸ್ ನಲ್ಲಿ ಈ ವಾರ ಸಲ್ಮಾನ್ ಖಾನ್ ಬರಲಿದ್ದಾರೆ. ಇದೇನಿದು ಬಿಗ್ಬಾಸ್ ನಲ್ಲಿ ಸಲ್ಮಾನ್ ಖಾನ್ ? ಹಿಂದಿಯಲ್ಲಿ ಸಲ್ಮಾನ್ ಖಾನ್ ತಾನೆ ನಿರೂಪಣೆ ಮಾಡ್ತಿರೋದು ? ನಿಜ ಸಲ್ಮಾನ್ ಖಾನ್ ಈಗ ಕನ್ನಡದಲ್ಲಿ ಸಹ ಬರ್ತಿದ್ದಾರೆ. ಹಾಗಂತ ಸುದೀಪ್ ಬಿಗ್ಬಾಸ್ ಬಿಟ್ಟು ಹೊರಹೊಗ್ತಾರಾ ? ಅಂತ ಭಯ ಪಡ್ಬೇಡಿ. ಸುದೀಪ್ ಖಂಡಿತಾ ಕನ್ನಡ ಬಿಗ್’ಬಾಸ್ ಬಿಟ್ಟು ಹೋಗಲ್ಲ. ಆದರೆ ಸಲ್ಮಾನ್ ಖಾನ್ ಕನ್ನಡಕ್ಕೆ ಕೇವಲ ಮೂವಿ ಪ್ರಮೋಷನ್’ಗೆ ಮಾತ್ರ ಬರ್ತಿದ್ದಾರೆ.
ಸುದೀಪ್ ನಡೆಸಿಕೊಡುವ ವಾರದ ಜೊತೆ ಕಿಚ್ಚ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಮತ್ತು ದಬಾಂಗ್ ಚಿತ್ರದ ನಿರ್ದೇಶಕ ಪ್ರಭುದೇವ , ಸೋನಾಕ್ಷಿ ಸಿನ್ನಾ ಬಿದ್ದಾರೆ. ಸಲ್ಮಾನ್ ಖಾನ್ ಬರುವ ಪ್ರೋಮೋ ಬಿಡುಗಡೆ ಆಗಿದ್ದು ಅದರಲ್ಲಿ ಸುದೀಪ್ ಖುಷಿಯಿಂದ ಅವರನ್ನು ಬರಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಬಿಗ್ಬಾಸ್ ಅಪೇಕ್ಷಿಸುತ್ತಾರೆ ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಶೋ ಇಂದು ನಡೆಯಲಿದೆ.
ಬಿಗ್ಬಾಸ್ ಕನ್ನಡ ದಿನದಿಂದ ದಿನಕ್ಕೆ ವೀಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಸುದೀಪ್ ರ ವಾರದ ಜೊತೆ ಕಿಚ್ಚ ಜೊತೆ ಈ ಸಲ ಸಲ್ಮಾನ್ ಖಾನ್ ಬರಲಿದ್ದಾರೆ. ದಬಾಂಗ್ ಚಿತ್ರದ ಪ್ರಚಾರಕ್ಕೆ ಸಲ್ಮಾನ್ ಮತ್ತು ಚಿತ್ರತಂಡ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ದಬಾಂಗ್ ಹಿಂದಿ,ಕನ್ನಡ ,ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಮೂಡಿ ಬರುತ್ತಿದ್ದು ಇದೇ ಮೊದಲ ಬಾರಿಗೆ ಹಿಂದಿಯ ಚಿತ್ರವೊಂದು ಕನ್ನಡಕ್ಕೆ ಡಬ್ ಆಗುತ್ತಿದೆ. ದಬಾಂಗ್ 3 ಚಿತ್ರದಲ್ಲಿ ಸುದೀಪ್ ಸಹ ನಟಿಸಿದ್ದು ಖಳನಟನಾಗಿ ಅಬ್ಬರಿಸಿದ್ದಾರೆ. ವಿಶೇಷ ಮತ್ತು ವಿಚಿತ್ರ ಅಂದರೆ ಸಲ್ಮಾನ್ ಖಾನ್ ಸ್ವತಃ ಕನ್ನಡದಲ್ಲಿ ಡಬ್ ಮಾಡಿದ್ದಾರೆ.
ದಬಾಂಗ್ ಚಿತ್ರದ ಮೂರನೇ ಸರಣಿ ಇದಾಗಿದ್ದು ಚುಲ್ಬುಲ್ ಪಾಂಡೆಯಾಗಿ ಸಲ್ಮಾನ್ ಖಾನ್ ಪೋಲಿಸ್ ಅಧಿಕಾರಿ ಆಗಿ ಖಳನಟರ ಬೆಂಡೆತ್ತಿದ್ದಾರೆ. ಸುದೀಪ್ ಮತ್ತು ಸಲ್ಮಾನ್ ಖಾನ್ ಅತ್ಯುತ್ತಮ ಸ್ನೇಹಿತರಾಗಿದ್ದು ಸುದೀಪ್ ಗೆ ತೆಲುಗಿನ ಈಗ ನಂತರ ಪ್ರಮುಖ ಪಾತ್ರ ಸಿಕ್ಕಿದೆ.
ಸಲ್ಮಾನ್ ಖಾನ್ ಜೊತೆಗೆ ಸೊನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ತಮಿಳಿನ ಖ್ಯಾತ ಡ್ಯಾನ್ಸ್ ಮಾಸ್ಟರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಿರ್ದೇಶಿಸಿದ್ದಾರೆ. ಪ್ರಭುದೇವ ಈಗಾಗಲೇ ಸಲ್ಮಾನ್ ಖಾನ್ ನ ಹಾಕಿಕೊಂಡು ವಾಂಟೆಡ್ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ಆಗಲೇ ನೂರು ಕೋಟಿ ಕಲೆಕ್ಷನ್ ಮಾಡಿ ರೆಕಾರ್ಡ್ ಸೃಷ್ಟಿಸಿತ್ತು.