ಒಂದೇ ಗುಂಡಿಯಲ್ಲಿ ನಾಲ್ವರು ಕರೊನಾ ಸೋಂಕಿತರ ಶವ; ತಂದು ಬಿಸಾಕುತ್ತಿರುವ ಸಿಬ್ಬಂದಿ

0
4253

ಒಂದೆಡೆ ದೇಶದಲ್ಲಿ ಕೊರೊನ ತನ್ನ ತೀವ್ರತೆಯನ್ನು ಮೆರೆಯುತ್ತಿದೆ, ಕರ್ನಾಟಕದಲ್ಲೂ ಕಳೆದ ಮೂರೂ ದಿನದಿಂದ ದಾಖಲೆ ಮಟ್ಟದಲ್ಲಿ ಸೋಕಿತರು ಪತ್ತೆಯಾಗುತ್ತಿದ್ದಾರೆ, ಇಷ್ಟಾದರೂ ದೇಶದ ಪ್ರದಾನಿಗಳೇ ಸ್ವತಃ ಬಂದು ಸಾರ್ವಜನಿಕರಿ ಮಾಸ್ಕ್ ಧರಿಸಲು ಬೇಡಿಕೊಳ್ಳಬೇಕಿದೆ, ಕೆಲವು ಜನರಲ್ಲಿ ಕೊರೊನ ತೀವ್ರತೆ ಎಷ್ಟಿದೆ ಎನ್ನುವುದರ ಬಗ್ಗೆ ಸೊಲ್ಪವೂ ಯೋಚನೆ ಇಲ್ಲ ಎಂದು ಅನಿಸುತ್ತದೆ, ಅಂತವರು ಇಂದು ನಿಮಗೆ ನಾವು ತೋರಿಸಲು ಹೊರಟಿರುವ ಈ ವಿಡಿಯೋ ಒಮ್ಮೆ ನೋಡಲೇ ಬೇಕು.

ಕರೊನಾ ಸೋಂಕು ಸೃಷ್ಟಿಸಿರುವ ಭೀ ಕರತೆಗಳಿಗೆ ಸಾಕ್ಷಿಯಾಗಿದೆ ಈ ದೃಶ್ಯ, ಬಳ್ಳಾರಿಯಲ್ಲಿ ಸೋಂಕಿನಿಂದ ಮೃ ತಪಟ್ಟವರನ್ನು ಮಣ್ಣು ಮಾಡುತ್ತಿರುವ ರೀತಿ ನೋಡಿದರೆ ಮನಕಲಕುತ್ತದೆ ಜೆಸಿಬಿ ಮೂಲಕ ದೊಡ್ಡ ಗುಂಡಿ ತೋಡಿಸಿ, ಅದರಲ್ಲೇ ಮೂರ್ನಾಲ್ಕು ಶ ವಗಳನ್ನು ಒಟ್ಟಿಗೆ ಹಾಕಿ, ಮಣ್ಣು ಮುಚ್ಚಲಾಗುತ್ತಿದೆ. ಕರೊನಾದಿಂದ ಮೃ ತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಕುಟುಂಬದವರಿಗೆ ಅವಕಾಶ ಇಲ್ಲ. ಆದರೆ ತೀರ ಹೀಗೆ ಒಂದೇ ಗುಂಡಿಯಲ್ಲಿ ನಾಲ್ಕು ಮೃ ತದೇಹಗಳನ್ನು ಹಾಕಿ, ಅದೂ ಮೇಲಿನಿಂದ ಎಸೆದು ಹಾಕುತ್ತಿದ್ದಾರೆ. ಈ ರೀತಿ ಮಣ್ಣು ಮಾಡುವುದನ್ನು ನೋಡಿದರೆ ಎಂಥವರ ಮನಸೂ ಒಂದು ಕ್ಷಣ ಮರುಗುತ್ತದೆ. ಒಂದೇ ಗುಂಡಿಯಲ್ಲಿ ಹಾಕಿ ಇನ್ನೊಂದು ಗುಂಡಿ ನಾಳೆಗೆ ಬೇಕಾಗುತ್ತದೆ ಎಂದು ಅಲ್ಲಿ ನಿಂತವರೋರ್ವರು ಹೇಳುವುದನ್ನೂ ಕೇಳಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಇದರ ಲಿಂಕ್ ಕೆಳಗೆ ನೀಡಿದ್ದು ಇದನ್ನು ನೋಡಿ ಆದರೂ ಜನರು ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ ಹಾಗು ನಿಮ್ಮ ಮನೆಯಲ್ಲಿ ಇರುವ ವಯಸ್ಸಾದ ಪೋಷಕರನ್ನು ಹಾಗು ಸಣ್ಣ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ ಮಾಡಿ ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರಿ, ಈ ಮಾಹಿತಿಯನ್ನು ಹೆಚ್ಚಿನ ಜನರ ಜೊತೆ ಹಂಚಿಕೊಳ್ಳುವುದನ್ನು ಮರೆಯದಿರಿ.

LEAVE A REPLY

Please enter your comment!
Please enter your name here