ಪ್ರಿಯಾಂಕ ಮುಖದ ಹತ್ತಿರ ಬಂದು ಶೆಟ್ಟಿ ಏನ್ ಮಾಡಿದ್ರು ಗೊತ್ತಾ

0
2621

ಬಿಗ್ಬಾಸ್ ಕನ್ನಡದ ಈ ಸೀಜನ್ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ ಎಂದೇ ಹೇಳಬಹುದು‌. ಅದಕ್ಕೆ ಕಾರಣ ಹಾಸ್ಯಗಾರ ಕುರಿ ಪ್ರತಾಪ್ ಅಂತ ತಿಳ್ಕೋಬೇಡಿ. ಶೈನ್ ಶೆಟ್ಟಿ ಬಿಗ್’ಬಾಸ್ ಮನೆಯಲ್ಲಿ ಒಂತರಹ ಲವ್ವರ್ ಬಾಯ್ ಆಗಿರುವುದರಿಂದ ಅವರಿಂದ ಮನರಂಜನೆ ಸಿಗುತ್ತಿದೆ. ಧಾರಾವಾಹಿಗಳಲ್ಲಿ ನಟಿಸಿ ನಂತರ ಅದರಿಂದ ಹೊರ ಬಂದು ತನ್ನದೇ ಆದ ಪುಡ್ ಟ್ರಕ್ ಹೋಟೆಲ್ ನಡೆಸಿ ಯಶಸ್ವಿಯಾದ ಶೈನ್ ಶೆಟ್ಟಿ ಬಿಗ್ಬಾಸ್ ಮನೆಯೊಳಗೆ ಕಾಲಿಟ್ಟು ಅದರ ಟಿಆರ್ಪಿ ಹೆಚ್ಚುವಂತೆ ಮಾಡಿದ್ದಾರೆ.

ಶೈನ್ ಶೆಟ್ಟಿ ಮತ್ತು ದೀಪಿಕಾರವರ ಲವ್ ಸ್ಟೋರಿ ಸಕ್ಕತ್ ಆಗೇ ಮನರಂಜನೆ ಕೊಡುತ್ತಿದೆ. ಇದು ನಿಜವಾಗಿಯೂ ಇದೆಯಾ ಅಥವಾ ಬಿಗ್ಬಾಸ್ ಮನೆಯ ಆಟದ ಒಂದು ವಿಧವೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಎಲ್ಲರಿಗಿಂತ ಶೈನ್ ಶೆಟ್ಟಿ ಮಿಂಚುತ್ತಿರುವುದು ಅವರೇ ಗೆಲ್ಲುವ ಮುನ್ಸೂಚನೆ ನೀಡಿದೆ. ಅದರಲ್ಲೂ ಬಿಗ್’ಬಾಸ್ ಆಣತಿಯಂತೆ ದೀಪಿಕಾರವರ ಸೂಚನೆಗೆ ಗಡ್ಡ ಮೀಸೆ ತೆಗೆದ ಶೆಟ್ಟಿ ಅದೃಷ್ಟ ಖುಲಾಯಿಸಿದೆ .

ಈ ವಾರ ಶೈನ್ ಶೆಟ್ಟಿ ಮತ್ತು ಪ್ರಿಯಾಂಕ ಡ್ಯುಯೆಟ್ ಡ್ಯಾನ್ಸ್ ಮಾಡಿದರು. ಇದೇನಾಪ್ಪಾ ! ಲವ್ವರ್ ದೀಪಿಕಾ ಹಿಂದೆ ಸುತ್ತುವುದು ಬಿಟ್ಟು ಪ್ರಿಯಾಂಕ ಜೊತೆಗೆನಾ ? ಹೌದು ಈ ವಾರ ಪೂರ್ತಿ ಪ್ರಿಯಾಂಕ ಜೊತೆ ಲವಲವಿಕೆಯಿಂದ ಹಾಡು ಹಾಡುತ್ತಾ ಅವರ ಹಿಂದೆ ಸುತ್ತಿದರು. ಪ್ರಿಯಾಂಕ ಮತ್ತು ಶೈನ್ ಶೆಟ್ಟಿ ಹಾಡು ಹಾಡಿದರು. ಮೊದಲ ಹಾಡು ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ಹಾಡು ಹಾಡಿದರು. ಅವರ ಹಾಡಿಗೆ ಚಂದನಾ ಧ್ವನಿಗೂಡಿಸಿದರು‌ . ನಂತರ ಎರಡೂ ಜಡೆಯನ್ನು ಎಳೆದು ಕೇಳುವೆನು ಎಂದು ಥೇಟ್ ಪುನೀತ್ ರಾಜ್ ತರಹ ಹಾಡು ಹಾಡುತ್ತಾರೆ. ಇದನ್ನು ಚಂದನಾ ನೋಡಿ ಹಾಗೆಯೇ ಕಿಚನ್ ಕಡೆ ಹೋಗುತ್ತಾರೆ.

ಕಡೆಗೆ ಶೈನ್ ಶೆಟ್ಟಿ ಪ್ರಿಯಾಂಕರ ಮುಖದ ಹತ್ತಿರ ಬಂದು ಕಿ ಸ್ ಕೊಡುತ್ತಾರೆ. ಇದನ್ನು ಕಂಡು ದಿಗ್ಭ್ರಮೆಗೊಂಡ ರಾಜು ತಾಳಿಕೋಟೆ ಏನ್ರಪ್ಪಾ ಇದು ರೆಸಾರ್ಟಾ ಅಥವಾ ಬಿಗ್ಬಾಸ್ ಮನೆಯಾ ಎಂದು ಕೇಳುತ್ತಾರೆ. ಅದಕ್ಕೆ ಶೈನ್ ಶೆಟ್ಟಿ ಏನು ಮಾಡುವುದಿಲ್ಲ ಎಂದು ನಗುತ್ತಾರೆ.

LEAVE A REPLY

Please enter your comment!
Please enter your name here