ಬಿಗ್ಬಾಸ್ ಕನ್ನಡ ಸರಣಿಯನ್ನು ಜನಪ್ರಿಯ ಗಳಿಸಲು , ಝೀ ಕನ್ನಡ ವಾಹಿನಿಗಿಂತ ನಂಬರ್ ಒನ್ ಸ್ಥಾನ ಏರಲು ಹರಸಾಹಸ ಪಡುತ್ತಿದ್ದಾರೆ. ಹೇಗಾದರೂ ಈ ಸಲ ಬಿಗ್ಬಾಸ್ ಶೋವನ್ನು ಜನಪ್ರಿಯಗೊಳಿಸಲು ವಿವಿಧ ಟಾಸ್ಕ್’ಗಳನ್ನು ಕೊಡುತ್ತಿದ್ದಾರೆ.
ಈ ಸಲ ಕುರಿ ಪ್ರತಾಪ್, ಹರೀಶ್ ರಾಜ್ , ವಾಸುಕಿ ವೈಭವ್ , ಭೂಮಿಕಾ ಶೆಟ್ಟಿ , ಕಿಶನ್ ಮುಂತಾದವರು ಇದ್ದಾರೆ.ಈ ವಾರ ಬರಹಗಾರ್ತಿ ಚೈತ್ರ ಕೋಟೂರು ಒಳ ಹೋಗಿದ್ದಾರೆ.ಈ ರಾತ್ರಿ ವಿಶೇಷ ಟಾಸ್ಕ್ ನೀಡಲಾಗಿದೆ.ಈಗಾಗಲೇ ಪ್ರೋಮೋ ಬಿಟ್ಟಿದ್ದು ಅದು ಎಲ್ಲಾ ಕಡೆ ವೈರಲ್ ಆಗಿದೆ.
ಆ ಪ್ರೋಮೋದಲ್ಲಿ ಗಂಡಸರು ಹೆಂಗಸರಿಗೆ ಮೇಕಪ್ ಮಾಡಬೇಕು. ಆ ಪ್ರೋಮೋದಲ್ಲಿ ಹರೀಶ್ ರಾಜ್ , ಕುರಿ ಪ್ರತಾಪ್ , ಕಿಶನ್ ಸೇರಿದಂತೆ ಗಂಡಸರು ಹೆಣ್ಣು ಮಕ್ಕಳಿಗೆ ಮೇಕಪ್ ಮಾಡಿ ನಗಿಸುತ್ತಿರುತ್ತಾರೆ. ಹರೀಶ್ ರಾಜ್ ಅಂತೂ ಮಲಯಾಳಿ ಕನ್ನಡ ಮಾತಾಡುತ್ತಾ ನೀವು ಈ ಮೇಕಪ್ಪಿಂದ ಚೆಂದ ಕಾಣ್ತೀರ ಎಂದು ಹೇಳುತ್ತಾರೆ. ಕುರಿ ಪ್ರತಾಪ್’ಗೆ ಇನ್ನೊಬ್ಬ ಸ್ಪರ್ಧಿ ಒಬ್ಬ ನಟಿಗೆ ಮೇಕಪ್ ಮಾಡುತ್ತಾ ಇವರನ್ನು ನೋಡುತ್ತಿದ್ದರೆ ಮುತ್ತು ಕೊಡೋಣ ಅನ್ನಿಸುತ್ತೆ ಎನ್ನುತ್ತಾರೆ. ಹಾಗಾದರೆ ಕೊಡಿ ಎಂದು ಕುರಿ ಪ್ರತಾಪ್ ಹೇಳುತ್ತಾರೆ.
ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ಬಿಗ್ ಬಾಸ್ ನಲ್ಲಿ ಮೇಕಪ್ ಮಾಡುವ ಗಂಡಸರು ಅವರ ತಮಾಷೆ, ನಗು ಹೆಣ್ಣು ಮಕ್ಕಳಿಗೆ ಅವರು ಯಾವ ರೀತಿ ಮೇಕಪ್ ಮಾಡಿದ್ದಾರೆ ಎಂಬುದನ್ನು ನೋಡಿ.ಈಗ ಬಿಗ್ಬಾಸ್ ಕುತೂಹಲ ಘಟ್ಟಕ್ಕೆ ತೆರಳುತ್ತಿದೆ.ಮೊದಲ ಕೆಲವು ವಾರ ರವಿ ಬೆಳಗೆರೆ, ಜೈ ಜಗದೀಶ್ ರವರಿಂದ ಶೋ ಕಳೆ ಗಟ್ಟಿದ್ದರೆ ಸ್ವಲ್ಪ ಸಮಯ ಬೋರ್ ಆಗತೊಡಗಿತ್ತು.ಆದರೆ ಈಗ ಉತ್ತಮ ಟಾಸ್ಕ್ ಕೊಡುತ್ತಿರುವುದರಿಂದ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಪೈಪೋಟಿಯಿಂದ ಆಡುತ್ತಿದ್ದಾರೆ.
ಈ ಬಿಗ್ಬಾಸ್ ಅನ್ನುವುದು ನೂರು ದಿನಗಳ ಕಾಲ ನಡೆಯುವ ಒಂದು ರಿಯಾಲಿಟಿ ಶೋ.ಇದರಲ್ಲಿ ಯಾರು ಕೊನೆಯವರೆಗೂ ಶೋನಲ್ಲಿ ಉಳಿಯುತ್ತಾರೋ ಅವರೇ ವಿನ್ ಆಗುತ್ತಾರೆ. ಶೋ ನ ಮೊತ್ತ 50 ಲಕ್ಷ ಗೆಲ್ಲುವುದರ ಜೊತೆಗೆ ಬಿಗ್ಬಾಸ್ ವಿನ್ನರ್ ಪಟ್ಟ ಗಳಿಸುತ್ತಾರೆ. ಈ ಬಿರುದು ಅವರ ಮುಂದಿನ ಜೀವನದ ವೃತ್ತಿಗೆ ಅನುಕೂಲ ಆಗುತ್ತದೆ. ನೋಡಿ ಈ ದಿನದ ಶೋನ. ನಿಮ್ಮ ಅಭಿಪ್ರಾಯ ತಿಳಿಸಿ.