ಬೆಳ್ಳುಳ್ಳಿಯನ್ನು ಸಹಜ ಔಷಧೀಯ ಆಹಾರ ಪದಾರ್ಥ ವನ್ನಾಗಿ ನಮ್ಮ ಹಿರಿಯರು ಉಪಯೋಗಿಸುತ್ತಿದ್ದರು, ಬೆಳ್ಳುಳ್ಳಿ ನಮ್ಮ ಶರೀರದ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ ಎಂತಹ ಅನಾರೋಗ್ಯ ಸಮಸ್ಯೆಗಳಿದ್ದರೂ ಇವೆಲ್ಲವನ್ನು ಬೆಳ್ಳುಳ್ಳಿ ಪರಿಹರಿಸುತ್ತದೆ.
ಬೆಳ್ಳುಳ್ಳಿಯನ್ನು ಕೇವಲ ಅಡುಗೆಯಲ್ಲಿ ಸುವಾಸನೆ ಹಾಗೂ ರುಚಿಗಾಗಿ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉಪಯೋಗಿಸುತ್ತೇವೆ, ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಮೈ ಕೈ ನೋವು ಕಡಿಮೆ ಮಾಡುತ್ತದೆ : ದೇಹದ ಯಾವುದೇ ಭಾಗದಲ್ಲಿ ನೋವಿದ್ದರೆ ಬೆಳ್ಳುಳ್ಳಿಯನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ಬಹುಬೇಗ ಉಪಶಮನ ಲಭಿಸುತ್ತದೆ, ಕಿವಿಯಿಂದ ಕೀವು ಸೋರುತ್ತಿದ್ದರೆ, ಬೆಳ್ಳುಳ್ಳಿಯನ್ನು ಕಿವಿಯ ಬಳಿ ಇರಿಸಿಕೊಂಡರೆ ವಾಸನೆ ಕಡಿಮೆಯಾಗುತ್ತದೆ.
ನೋವು ನಿವಾರಕ : ಕಿವಿಯಲ್ಲಿ ಬೆಳ್ಳುಳ್ಳಿಯನ್ನು ಉಳಿಸಿಕೊಳ್ಳುವುದರಿಂದ ಶರೀರದ ಒಳಗಿನ ಉಷ್ಣಾಂಶ ಹೆಚ್ಚಾಗಿ ಮೈ ಕೈ ನೋವು, ತಲೆನೋವು, ಜ್ವರ ಹಾಗೂ ಕಿವಿನೋವು ಕಡಿಮೆಯಾಗುತ್ತದೆ.
ಕಿವಿ ನೋವಿಗೆ ಉಪಶಮನ : ಕಿವಿ ನೋವಿನಿಂದ ನರಳುತ್ತಿರುವವರು ಒಂದು ಬೆಳ್ಳುಳ್ಳಿಯನ್ನು ರಾತ್ರಿ ಮಲಗುವ ಮುಂಚೆ ಕಿವಿಯಲ್ಲಿ ಇಟ್ಟುಕೊಂಡು ಮಲಗಿದರೆ ಬೆಳಗಾಗುವುದರೊಳಗೆ ಕಿವಿ ನೋವು ಮಾಯವಾಗುತ್ತದೆ.
ಕೆಮ್ಮು ನಿವಾರಣೆ : ಕೆಮ್ಮಿನಿಂದ ನರಳುತ್ತಿರುವವರು ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಎರಡು ಗಂಟೆಗಳಿಗೊಮ್ಮೆ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.
ಹೃದಯದ ರಕ್ಷಣೆ : ರಕ್ತ ಪ್ರಸಾರ ಸರಿಯಾಗಿ ಆಗಲು ದೇಹದ ಕೊಬ್ಬನ್ನು ತೊಲಗಿಸಲು ಬೆಳ್ಳುಳ್ಳಿ ಸಹಕಾರಿಯಾಗಿರುತ್ತದೆ, ಹೃದಯ ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ, ಹೃದಯ ಸಂಬಂಧಿ ರೋಗಿಗಳು ಪ್ರತಿದಿನ ಬೆಳಗ್ಗೆ ಒಂದೆರಡು ಹಸಿ ಬೆಳ್ಳುಳ್ಳಿಯನ್ನು ತಿಂದರೆ ಒಳ್ಳೆಯದು.
ರಕ್ತದೊತ್ತಡ ನಿಯಂತ್ರಣ : ಶುದ್ಧವಾದ ರಕ್ತ ಸರಿಯಾಗಿ ಹರಿಯಲು ಸಹಕಾರಿ, ಅಧಿಕ ರಕ್ತದೊತ್ತಡದಿಂದ ನರಳುತ್ತಿರುವವರು ಬೆಳಗ್ಗೆ ಹೊತ್ತು ಬೆಳ್ಳುಳ್ಳಿಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.