ಕಫ ಕರಗಿಸಲು ಮನೆಯಲ್ಲೇ ಸರಳ ಮನೆಮದ್ದು ಮಾಡಿ

0
4132

ಇತ್ತೀಚಿನ ಜನರು ಸಿಕ್ಕಸಿಕ್ಕ ತಿಂಡಿ-ತಿನಿಸುಗಳು, ಜ್ಯೂಸ್, ಐಸ್ ಕ್ರೀಮ್ ಗಳನ್ನೆಲ್ಲ ತಿನ್ನುತ್ತಾರೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಅಲ್ಲದೇ ಕೆಮ್ಮು, ನೆಗಡಿ, ಗಂಟಲು ಕಿರಿಕಿರಿಯಿಂದ ಬಳಲುತ್ತಾರೆ. ಇದನ್ನು ಗುಣಪಡಿಸಲು ವೈದ್ಯರ ಬಳಿ ಹೋಗಿ ಅವರಿಗೆ ಸಾವಿರಗಟ್ಟಲೆ ಹಣವನ್ನು ಸುರಿಸುತ್ತಾರೆ. ಇದರ ಬದಲು ಮನೆಯಲ್ಲಿ ಕುಳಿತುಕೊಂಡು ಮನೆಮದ್ದನ್ನು ತಯಾರಿಸಿ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕು. ವೈದ್ಯರಿಗೆ ಹಣವನ್ನು ಹಾಕುವ ಬದಲು ನೀವೇ ಮನೆಯಲ್ಲಿ ಮದ್ದನ್ನು ತಯಾರಿಸಿ ಕೆಮ್ಮು ಕಫಗಳನ್ನು ಹೋಗಲಾಡಿಸಬಹುದು.

ಕೆಮ್ಮು ನಿವಾರಿಸಲು ಬಲು ಪ್ರಾಚೀನವಾದ ವಿಧಾನವೆಂದರೆ ಬಾದಾಮಿ ಹರಿದು ಸೇವಿಸುವುದು ಸುಮಾರು ಏಳರಿಂದ ಎಂಟು ಬಾದಾಮಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ಸಿಪ್ಪೆಯನ್ನು ತೆಗೆಯಿರಿ ಇದಕ್ಕೆ ಸ್ವಲ್ಪ ಬೆಣ್ಣೆ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ಕೆಮ್ಮು ಕಫ ಕೇವಲ ಎರಡು ದಿನದಲ್ಲಿ ಮಾಯವಾಗುತ್ತದೆ.

ಅಲ್ಲದೆ ಇನ್ನೊಂದು ಸುಲಭವಾದ ವಿಧಾನವೆಂದರೆ ಈರುಳ್ಳಿಯನ್ನು ಹೆಚ್ಚಿ ಜಜ್ಜಿ ಹಿಂಡಿ ರಸವನ್ನು ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುವುದು ಮಾತ್ರವಲ್ಲ ಕಟ್ಟಿಕೊಂಡಿರುವ ಎದೆಯು ಸಡಿಲಗೊಳ್ಳುತ್ತದೆ ಪ್ರತಿ ಆರು ಗಂಟೆಗಳಿಗೊಮ್ಮೆ ಒಂದರಿಂದ ಎರಡು ಚಿಕ್ಕ ಚಮಚ ಈರುಳ್ಳಿ ರಸವನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು ಹೀಗೆ ಮಾಡುವುದರಿಂದ ಎದೆಯಲ್ಲಿರುವ ಕಫ ಗಟ್ಟಿಯಾಗುವುದು ಕಡಿಮೆಯಾಗುತ್ತದೆ.

ನೀವು ಅತಿಯಾಗಿ ಕೆಮ್ಮುತ್ತಿದ್ದರೆ ಶ್ವಾಸನಾಳ ದಿಂದ ಹುರಿ ಶುರುವಾದರೆ ಒಣಕೆಮ್ಮು ಅಥವಾ ಕಫ ಶುರುವಾದಾಗ ಅದನ್ನು ನಿರ್ಲಕ್ಷಿಸಬಾರದು ಅದು ಬ್ರಾಂಕೈಟಿಸ್ ಆಗುವ ಸಾಧ್ಯತೆ ಇದೆ ಅದರಲ್ಲೂ ಸಿಗರೇಟು ತಂಬಾಕು ಸೇವಿಸುತ್ತಿದ್ದರೆ ಇಂತಹ ರೋಗ ಬರುತ್ತದೆ ಅದಕ್ಕೆ ಸೂಕ್ತ ಮನೆಮದ್ದು ಏನೆಂದರೆ

ಕೆಮ್ಮು ಬಂದರೆ ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ನಮ್ಮನ್ನು ಕುಂಠಿತಗೊಳಿಸುತ್ತದೆ ಇದಕ್ಕೆ ಸೂಕ್ತ ಪರಿಹಾರವೆಂದರೆ ಒಂದು ವೀಳ್ಯದೆಲೆ ಐದರಿಂದ ಆರು ಕರೀ ತುಳಸಿ ಎಲೆ ಮತ್ತು ಒಂದು ಚಿಕ್ಕ ಈರುಳ್ಳಿ ಹಾಗೂ ಒಂದು ಕಾಳುಮೆಣಸು ಇವೆಲ್ಲವನ್ನೂ ಜಗಿದು ತಿನ್ನಬೇಕು ಹೀಗೆ ಎರಡು ಮೂರು ಬಾರಿ ಮಾಡುವುದರಿಂದ ಕೆಮ್ಮು ಗಟ್ಟಿಯಾಗುವುದು ಕೂಡ ಕಡಿಮೆಯಾಗುತ್ತದೆ ಹಾಗೂ ಒಣ ಕೆಮ್ಮು ಕೂಡ ಕಡಿಮೆಯಾಗುತ್ತದೆ

LEAVE A REPLY

Please enter your comment!
Please enter your name here