ಸಾಮಾನ್ಯವಾಗಿ ಮದುವೆ ನಂತರ ಹೆಂಗಸರು ದಪ್ಪವಾಗುತ್ತಾರೆ ಅನ್ನುವ ಮಾತಿದೆ, ಹಾಗು ಅದಕ್ಕೆ ಹಲವು ಕಾರಣಗಳು ಇದೆ ಆದರೆ ಇದರಿಂದ ಸಂಭವಿಸುವ ಅಪಾಯವೆಂದರೆ ಸಕ್ಕರೆ ಕಾಯಿಲೆ ಮತ್ತು ಹೃದಯಘಾತ ದಂತಹ ಸಮಸ್ಯೆಗಳಿಂದ ಬಳಲುತ್ತಾರೆ, ಹಾಗಾದರೆ ಇದರಿಂದ ಮುಕ್ತಿ ಹೊಂದಲು ಏನು ಮಾಡಬೇಕು ಅಂತ ಹೇಳ್ತಿವಿ.
ಈಸ್ಟ್ ಆಂಗ್ಲಿಯಾ ವಿಶ್ವ ವಿದ್ಯಾಲಯದ ಸಂಶೋಧನೆಯ ಪ್ರಕಾರ ಆರೋಗ್ಯವಂತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ಲೆವೊನಾಯ್ದ್ ಸೇವನೆಯಿಂದ ಸಕ್ಕರೆ ಕಾಯಲೆ ಬರುವ ಸಾಧ್ಯತೆಯನ್ನು ನಿಧಾನಿಸ ಬಹುದಂತೆ, ಈ ಪ್ಲೆವೊನಾಯ್ದ್ ಅಂಶಗಳು ಟೀ, ದ್ರಾಕ್ಷಿ, ವೈನ್ ಮತ್ತು ಹುಳಿ ಹಣ್ಣುಗಳಲ್ಲಿ ಹೆಚ್ಚಾಗಿ ಇರುತ್ತದೆ.
ಈ ಪ್ಲೆವೊನಾಯ್ದ್ ಅಂಶಗಳು ಶರೀರದಲ್ಲಿ ಇನ್ಸುಲಿನ್ ಪ್ರತಿರೋಧಕತೆಯನ್ನು ಕಡಿಮೆ ಮಾಡಿ, ರಕ್ತದಲ್ಲಿ ಸೇರುವ ಸಕ್ಕರೆ ಅಂಶವನ್ನು ಸರಿಯಾಗಿ ಉಪಯೋಗಿಸುತ್ತದೆ ಎಂದು ತಿಳಿದುಬಂದಿದೆ. ಈ ಅಂಶದ ಜೊತೆಗೆ ಆಂತೊಸಯಾನಿನ್ (Anthocyanins) ಗಳು ಕೂಡಿ ಶರೀರದಲ್ಲಿ ನಡೆಯುವ ಕೆಲವು ದೀರ್ಘ ಕಾಲದ ಉರಿ ಊತವನ್ನು ಕಡಿಮೆ ಮಾಡುವುದರ ಪರಿಣಾಮವಾಗಿ ಸಕ್ಕರೆ ಕಾಯಿಲೆ, ದಢೂತಿ, ಹೃದಯ ಕಾಯಿಲೆಗಳು ಕಾಣಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಪ್ರತಿ ದಿನ ಯಾವುದಾದರೂ ಒಂದು ಹಣ್ಣನ್ನು 78 ಗ್ರಾಂ ದ್ರಾಕ್ಷಿ , 30 ಗ್ರಾಂ ಸ್ಟ್ರಾಬೆರ್ರಿ , 100 ಗ್ರಾಂ ಕಿತ್ತಳೆ ಹಣ್ಣು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯನ್ನು ನಿಧಾನ ಮಾಡಬಹುದು.
ಹಣ್ಣು ಸೇವನೆ ಮಾತ್ರದಿಂದಲೇ ಕಾಯಿಲೆ ಬರುವ ಸಾಧ್ಯತೆಯನ್ನು ನಿಧಾನ ಮಾಡಲು ಉಪಾಯವಲ್ಲ. ಜೊತೆಗೆ ಸರಿಯಾದ ವ್ಯಾಯಾಮ ಮತ್ತು ಆಹಾರದ ಸೇವನೆಯನ್ನು ಪಾಲಿಸಬೇಕಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.