ಸಬ್ಬಕ್ಸಿ ಸೊಪ್ಪಿನಲ್ಲಿದೆ ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿ..!

0
6305

ಈ ಸೊಪ್ಪು ನಮ್ಮ ಆರೋಗ್ಯಕ್ಕೆ ತುಂಬ ಉತ್ತಮವಾದ ಸೊಪ್ಪಾಗಿದೆ ಈ ಸೊಪ್ಪು ನಿಮ್ಮ ಹಲವು ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ತರುವಂತಹ ಕೆಲಸ ಮಾಡುತ್ತದೆ ಹಾಗಿದ್ದರೆ ಬನ್ನಿ ಈ ಸೊಪ್ಪು ಯಾವ ಯಾವ ರೋಗಗಳಿಗೆ ಉತ್ತಮ ಅನ್ನೋದನ್ನ ತಿಳಿಯೋಣ. ಈ ಸೊಪ್ಪನ್ನು ಬಳಸಿ ಮಾಡಿದ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುವುದು ಹಾಗೂ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.

ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ಮಕ್ಕಳು ಮತ್ತು ಬಾಣಂತಿಯರಿಗೆ ಉತ್ತಮ ಆಹಾರ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಸಬ್ಬಸಿಗೆ ಸೊಪ್ಪು ಪಚನಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಇವುಗಳಲ್ಲಿ ವಾತಾವರಣ ಉತ್ತೇಜಕ ಮತ್ತು ಮೂತ್ರೋತ್ಪಾದಕ ಗುಣಗಳಿವೆ. ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಸಬ್ಬಕ್ಕಿ ಕಾಳುಗಳನ್ನು ನೀರಿನಲ್ಲಿ ನೆನೆಸಿ ತಿಳಿಯನ್ನು ಗ್ರೈಪ್ ವಾಟರ್‌ನಲ್ಲಿ ಬಳಸಲಾಗುತ್ತದೆ.

ವಾತ, ಶೂಲೆ, ವಾಕರಿಕೆ ಮತ್ತು ಬಿಕ್ಕಳಿಕೆಯಂತಹ ರೋಗಗಳಿಗೆ ಬಹು ಉಪಯುಕ್ತ. ಸಬ್ಬಸಿಗೆ ಸೊಪ್ಪನ ರಸಕ್ಕೆ ಜೇನು ಬೇರಸಿ ಕುಡಿದರೆ ಅಜೀರ್ಣ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ. ಹೊಟ್ಟೆನೋವು ಕಡಿಮೆಯಾಗುತ್ತದೆ. ಸಬ್ಬಸಿಗೆ ಸೊಪ್ಪು ನರಗಳಿಗೆ ಶಕ್ತಿಯನ್ನು ನೀಡುತ್ತದೆ, ನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪು ಬಳಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ಅರಿಶಿನದ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ.

ಯಾವುದೇ ಗಾಯಗಳಿಗೆ ಸಬ್ಬಸಿಗೆ ಸೊಪ್ಪಿನ ರಸ ಹಚ್ಚಿದರೆ ರಕ್ತ ಬೇಗ ನಿಲ್ಲುತ್ತದೆ. ಗಾಯ ಬಲುಬೇಗ ಒಣಗಿ ವಾಸಿಯಾಗುತ್ತದೆ. ಸಬ್ಬಸಿಗೆ ಸೊಪ್ಪುನ್ನು ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ. ಅಲರ್ಜಿ ನಿವಾರಣೆ ಆಗುವುದು. ಸೊಪ್ಪಿನಲ್ಲಿರುವ ಎಣ್ಣೆ ಅಂಶವು ಕಾರ್ವೋನ್ ಸಂಯುಕ್ತವನ್ನೊಳಗೊಂಡಿದೆ. ಮಧುಮೇಹಿಗಳಿಗಾಗಿ ಇದೊಂದು ಉತ್ತಮ ಸಿದ್ಧೌಷಧ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here