ಗೋಮೂತ್ರ ಇದುವೇ ಸ್ವಸ್ಥ ಜೀವನದ ಆರೋಗ್ಯ ಮಂತ್ರ ಈ ದಿವ್ಯ ಔಷದಿಯನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ..!!

0
3897

ಮಂತ್ರಗಳು, ವೇದಗಳು, ಪುರಾಣಗಳಿಗೆ ಭಾರತ ತವರುಮನೆ ಸಾವಿರ ವರ್ಷಗಳ ಹಿಂದೆ ದೇವತೆಗಳು ನಡೆದಾಡಿದ ಈ ಪುಣ್ಯಭೂಮಿ ಮೇಲೆ ವನ್ಯಪ್ರಾಣಿಗಳೂ ಸಹ ಗೌರವ ಪಡೆದುಕೊಂಡವು ಅಂತಹವುಗಳಲ್ಲಿ ವಿಶೇಷವಾದ ಪ್ರಾಣಿ ಗೋವು ಹಸುವಿನಿಂದ ಬರುವ ಹಾಲು, ಮೊಸರು, ಬೆಣ್ಣೆ, ಸಗಣಿ, ಮೂತ್ರಗಳನ್ನು ಪಂಚಗವ್ಯಗಳು, ಪಂಚಾಮೃತ ಎಂದು ಕರೆಯುತ್ತಾರೆ ಗೋಮೂತ್ರ ಮನುಷ್ಯನ ದೇಹದಲ್ಲಿನ ಕಾಯಿಲೆಗಳಿಗೆ ಕಾರಣವಾಗುವ ಮಲಿನಗಳನ್ನು ನಿರ್ಮೂಲನ ಮಾಡುತ್ತದೆ, ಸೌದೆಯನ್ನು ಅಗ್ನಿ ದಹಿಸಿದಂತೆ ಈ ಪಂಚಗವ್ಯಗಳು ಮಾನವ ದೇಹದಲ್ಲಿನ ವ್ಯಾಧಿಗಳನ್ನು ಸುಟ್ಟುಹಾಕುತ್ತವೆ.

ಗವ್ಯಮ್ ಪವಿತ್ರಮ್ ಚ ರಸಯನಮ್ ಕ ಪಥ್ಯಮ್ ಚ ಹೃದ್ಯಮ್ ಬಲಮ್ ಬುದ್ಧಿ ಸ್ಯತ ಆಯುಹ್ ಪ್ರದಮ್ ರಕ್ತ್ ವಿಕರ್ ಹರಿ ತ್ರಿದೋಶ್ ಹೃದ್ರೊಗ್ ವಿಶಪಹಮ್ ಸ್ಯತ.

ಈ ಶ್ಲೋಕದ ಮೂಲಕ ಗೋಮೂತ್ರದ ಪ್ರಾಮುಖ್ಯತೆಯ ಬಗ್ಗೆ ವೇದಗಳಲ್ಲಿ ತಿಳಿಸಲಾಗಿದೆ ಇದರ ಅರ್ಥ ಹೀಗಿದೆ, ಗೋಮೂತ್ರ ಪಂಚಗವ್ಯ ಒಂದು ಉತ್ತಮ ಸಿದ್ಧರಸ, ಉತ್ತಮ ಆಹಾರ, ಹೃದಯಕ್ಕೆ ಉತ್ತಮವಾದ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ, ಆಯಸ್ಸು ಹೆಚ್ಚಿಸುವ, ಪಿತ್ತವನ್ನು ಸಮತೋಲನದಲ್ಲಿರಿಸುವ, ಶ್ವಾಸ ಮತ್ತು ಮೂಗಿನೊಳಗಣ ಲೋಳೆಯನ್ನು ಉತ್ತಮವಾಗಿಸುವ, ಹೃದಯತೊಂದರೆಗಳನ್ನು ನಿವಾರಿಸುವ ಮತ್ತು ವಿಷದ ಪರಿಣಾಮವನ್ನು ಕಡಿಮೆಗೊಳಿಸುವ ಶಕ್ತಿಯುಳ್ಳದ್ದಾಗಿದೆ.

ಗೋಮೂತ್ರವನ್ನು ಮೇಧ್ಯ ಮತ್ತು ಹೃದ್ಯ ಎಂದೂ ಕರೆಯಲಾಗುತ್ತದೆ ಇದರ ಅರ್ಥ ಇದು ಮೆದುಳಿಗೆ ಮತ್ತು ಹೃದಯಕ್ಕೆ ಬಲ ನೀಡುವ ದ್ರವವಾಗಿದೆ ಆ ಪ್ರಕಾರ ಗೋಮೂತ್ರ ಹೃದಯ ಮತ್ತು ಮೆದುಳಿನ ತೊಂದರೆಗಳನ್ನು ಮತ್ತು ಹೆಚ್ಚಿನ ಮಾನಸಿಕ ಒತ್ತಡದಿಂದ ಆಗುವ ಮೆದುಳಿನ ಹಾನಿಯನ್ನು ತಡೆಗಟ್ಟುತ್ತದೆ.

ಇದುನ್ನು ಕಪ್ಪು ಮೆಣಸು, ಮೊಸರು ಮತ್ತು ತುಪ್ಪದೊಂದಿಗೆ ಬೆರೆಸಿ ಕುಡಿದರೆ ಜ್ವರದ ಚಿತಟ್ಟನೆ ಮಾಯವಾಗುವುದು, ಪೆಪ್ಟಿಕ್ ಅಲ್ಸರ್, ಆಸ್ತಮಾ ಮತ್ತು ಕೆಲವು ಪಿತ್ತಜನಕಾಂಗದ ಕಾಯಿಲೆಯ ಚಿಕಿತ್ಸೆಯಲ್ಲಿ ಹಸು ಮೂತ್ರವು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಗೋಮೂತ್ರವು ದೇಹದ ಎಲ್ಲಾ ಕೆಟ್ಟ ಅಂಶವನ್ನು ಹೊರಹಾಕುವ ಮೂಲಕ ಮಾನವ ದೇಹವನ್ನು ಶುದ್ಧೀಕರಿಸುತ್ತದೆ, ಇದರಿಂದಾಗಿ ಮಧುಮೇಹ, ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಇತ್ಯಾದಿ ಸೇರಿದಂತೆ ಆರೋಗ್ಯದ ಹೆಚ್ಚಿನ ಅಪಾಯಗಳನ್ನು ಕಡಿಮೆ ಮಾಡುತ್ತದೆ.

ನಿಯಮಿತವಾಗಿ ಗೋಮೂತ್ರ ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ತನ್ಮೂಲಕ ಹಲವಾರು ರೋಗಗಳಿಂದ ದೇಹ ರಕ್ಷಣೆ ಪಡೆಯುತ್ತದೆ, ಆಯುರ್ವೇದದಲ್ಲಿ ಕುಷ್ಠರೋಗ, ಕಿಬ್ಬೊಟ್ಟೆಯ ನೋವು, ಹೊಟ್ಟೆ ಉಬ್ಬುವುದು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಗೊಮತ್ರಾ ಸಹಾಯಕವಾಗಿದೆಯೆಂದು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here