ಸಾಡೇಸಾತಿ ದೆಸೆಯಲ್ಲಿ ಶನಿ ಯಾರನ್ನು ಬಾಧಿಸದೆ ಅಥವಾ ಅವರವರ ಕರ್ಮಾನುಸಾರ ಶಿಕ್ಷಿಸದೆ ಬಿಡುವುದಿಲ್ಲ, ಶನಿದೇವನು ಲೋಕಪಾಲ ಶಿವನನ್ನು ಕೈ ಬಿಡುವುದಿಲ್ಲ, ಒಮ್ಮೆ ಶಿವನಿಗೂ ಸಾಡೇಸಾತಿ ಕಾಲ ಆರಂಭವಾಗುತ್ತದೆ, ಆಗ ಶನಿದೇವನು ಶಿವನ ಬಳಿಗೆ ಹೋಗುತ್ತಾನೆ, ನಿಮಗೆ ಈಗ ಸಾಡೆಸಾತಿ ಶುರುವಾಗಿದೆ ಹಾಗಾಗಿ ನಾನು ನಿಮ್ಮನ್ನು ಮೂರುವರೆ ಗಂಟೆಗಳ ಕಾಲ ಹಿಡಿಯಬೇಕಾಗಿದೆ, ನನಗೆ ಅನುಮತಿಯನ್ನು ಕೊಡಿ ಎಂದು ಶನಿಯು ಪರಶಿವನನ್ನು ಕೇಳುತ್ತಾನೆ.
ಪರಶುರಾಮ ಶನಿಯ ಮಾತನ್ನು ಕೇಳಿ ದಿಟ್ಟಿಸಿ ನೋಡುತ್ತಾನೆ, ಆಗ ಶನಿದೇವನು ಪರಶಿವನಿಗೆ ಪ್ರಭು ಶನಿ ಕಾಲ ಬಂದಾಗ ಯಾರನ್ನು ಬಿಡಬೇಡ ಎಂದು ನೀವೇ ಆಜ್ಞೆ ಕೊಟ್ಟಿದ್ದರಿ ಜ್ಞಾಪಕ ಇದೆಯಾ, ಇದೀಗ ನಿಮ್ಮ ಕಾಲ ಬಂದಿದೆ ನಿಮ್ಮನ್ನು ಹಿಡಿಯಲು ನನಗೆ ಅವಕಾಶ ಮಾಡಿಕೊಡಿ ಎನ್ನುತ್ತಾನೆ, ಆಗ ಪರಮೇಶ್ವರ ಸರಿ ವಿಧಿಯ ನಿಯಮವನ್ನು ನಾವ್ಯಾರು ಮೀರಲು ಸಾಧ್ಯವಿಲ್ಲ, ನೀನು ನನ್ನನ್ನು ಹಿಡಿದುಕೊಳ್ಳಬಹುದು ಎನ್ನುತ್ತಾನೆ.
ಆದರೆ ಶನಿದೇವರಿಗೆ ನೀರು ಎಂದರೆ ಭಯ ಎನ್ನುವ ಅಂಶ ಪರಶಿವನಿಗೆ ತಿಳಿದಿರುತ್ತದೆ, ಇದೇ ಕಾರಣಕ್ಕಾಗಿ ಪರಶಿವನು ನೀರಿನ ಕೊಳ ಒಂದರಲ್ಲಿ ಹೋಗಿ ಬಚ್ಚಿಟ್ಟು ಕೊಳ್ಳುತ್ತಾನೆ, ನೀರಿನಲ್ಲಿ ಬಚ್ಚಿಟ್ಟುಕೊಳ್ಳಲು ಕಮಲ ಪುಷ್ಪಕ್ಕೆ ನಾನು ಚಿಕ್ಕವನಾಗಿ ನಿನ್ನ ಪುಷ್ಪದ ಮೇಲೆ ಕೂಡಲೇ ಎಂದು ಕೇಳುತ್ತಾನೆ, ಕಮಲ ಪುಷ್ಪವು ತಕ್ಷಣ ಖುಷಿಯಿಂದಲೇ ಒಪ್ಪಿಕೊಳ್ಳುತ್ತದೆ, ಹಾಗೂ ಪುಷ್ಪದ ಮೇಲೆ ಮೂರುವರೆ ಗಂಟೆಗಳ ಕಾಲ ಪರಶಿವನಿಗೆ ಕುಳಿತುಕೊಳ್ಳಲು ಒಪ್ಪಿಕೊಳ್ಳುತ್ತದೆ.
ಇತ್ತ ಶನಿದೇವನು ಕೊಳದ ಆಚೆಯ ಬದಿಯಲ್ಲಿ ಕಾಯುತ್ತಾ ಕುಳಿತಿರುತ್ತಾರೆ, ಮೂರುವರೆ ಗಂಟೆಗಳ ಕಾಲ ಹೂವಿನ ಮೇಲೆ ಇದ್ದ ಪರಶಿವನು ಹೊರಬಂದು ಶನಿಯನ್ನು ಕಂಡು ನೋಡಿದೆಯ ನಾನು ನಿನ್ನ ಕೈಯಿಂದ ಹೇಗೆ ತಪ್ಪಿಸಿಕೊಂಡೆ ಅಂತ ಕೇಳುತ್ತಾನೆ, ಆಗ ಶನಿದೇವರು ಮಹದೇವ ನಾನೇನು ಮಾಡಬೇಕೆಂದು ಕೊಂಡು ಮೂರುವರೆ ಗಂಟೆಗಳ ಕಾಲ ನಿನಗೆ ಕಾಟ ಕೊಡಬೇಕೆಂದು ಅಂದುಕೊಂಡಿದ್ದನೋ ಅದನ್ನು ನೀನಾಗಿಯೇ ಮಾಡಿಕೊಂಡ್ದಿದ್ದೀಯ.
ನನ್ನ ಭಯದ ಕಾರಣ ನೀನು ಹೂವಿನೊಳಗೆ ಅಡಗಿ ಬೆದರಿ ಹರಣಿಯಂತೆ ಕುಳಿತು ಕೊಂಡಿದ್ದೇ, ಈಗ ನೀನು ಏನು ಹೇಳುವೆ ಎನ್ನುತ್ತಾನೇ ಶನಿದೇವನ, ಶನಿಯ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂಬುದನ್ನು ಶನೇಶ್ವರನ ನಿರೂಪಿಸುತ್ತಾನೆ.
ಇತ್ತ ಶಿವ ಮತ್ತು ಶನಿ ನಡುವಿನ ಸಂಬಂಧವನ್ನು ಕಮಲ ಪುಷ್ಪವು ಕೇಳಿಸಿಕೊಳ್ಳುತ್ತಾ, ಕಮಲ ಪುಷ್ಪವು ತನಗೊಂದು ವರ ಕೊಡುವಂತೆ ಪರಶಿವನನ್ನು ಪ್ರಾರ್ಥಿಸುತ್ತದೆ, ಹೇ ಪರಮೇಶ್ವರ ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ನನ್ನ ಮೇಲೆ ಸದಾ ಕುಳಿತುಕೊಳ್ಳುತ್ತಾರೆ ಈ ದೇವತೆಗಳ ಆರಾಧನೆಗೆ ಪ್ರತಿಯೊಬ್ಬರು ನನ್ನ ಹೂವನೇ ಬಳಸುತ್ತಾರೆ ನನ್ನ ಪೂಜೆಯನ್ನು ಮಾಡುವವರಿಗೆ ದೊರೆಯುವ ಲಾಭವನ್ನು ತಿಳಿಸು ಎಂದು ಕೇಳಿಕೊಳ್ಳುತ್ತೇನೆ.
ಆಗ ಪರಶಿವನು ಮಾತನಾಡುತ್ತಾ ಯಾರು ಕಮಲ ಪುಷ್ಪದಿಂದ ದೇವಿಯನ್ನು ಆರಾಧಿಸುತ್ತಾರೆ ಅವರ ಮುಂದಿನ 10 ಸಂತತಿ ನಿರ್ಭಯವಾಗಿ ಇರುತ್ತದೆ ಮತ್ತು ಹಿಂದಿನ 10 ಸಂತತಿಯ ಪಾಪಗಳು ಕ್ಷಯವಾಗುತ್ತದೆ, ನಿನ್ನ ಬೇರುಗಳು ನೀರಿನಲ್ಲಿ ಮೂರುವರೆ ಗಂಟೆಗಳ ಕಾಲ ಮಾತ್ರವೇ ಇರುವುದರಿಂದ ಕಮಲ ಹೂವಿನ ನಾರೂ ದೀಪ ಬೆಳಗುವ ಬತ್ತಿಯಾಗಿ ಬಳಕೆಯಾಗಲಿ, ಎಂದು ವರವನ್ನು ನೀಡುತ್ತಾನೆ.
ಹಾಗಾಗಿ ನಾವು ಕಮಲದ ಹೂವನ್ನು ದೇವತಾ ಪೂಜೆಗೆ ವಿಶೇಷವಾಗಿ ಬಳಸುತ್ತೇವೆ ಕಮಲ ಪುಷ್ಪದ ಪೂಜೆಯಿಂದ ಪರಮೇಶ್ವರ ಶೀಘ್ರದಲ್ಲಿ ಸಂತೃಪ್ತ ಗೊಳ್ಳುತ್ತಾನೆ.