ದಿನವಿಡಿ ನಂದಿಹೋಗದೆ ದೇವರನ್ನು ಬೆಳಗುವ ದೀಪವೇ ನಂದಾದೀಪ, ನoದ ಎಂದರೆ ಭಗವಂತ (ಅನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ)ನಂದಯತಿ ಭಕ್ತಾನ್ ಇತಿನಂದಃ
ದೀಪದ ಅರ್ಥ : ದೀಪ್ಯತೇ ದೀಪಯತಿ ವಾ ಸ್ವo ಪರಂ ಚೇತಿ ದೀಪಃ, ಅಂದರೆ ಭಗವಂತನನ್ನು ತೋರಿಸುವ ವಸ್ತುವೇ ದೀಪ.
ರವೇರಸ್ತ ಸಮಾರಭ್ಯ ಯಾವತ್ ಸೂರ್ಯೋದಯೋ ಭವೇತ್, ಯಸ್ಯ ತಿಷ್ಠತಿ ಗೃಹೇ ದೀಪಃ ತಸ್ಯ ನಾಸ್ತಿ ದರಿದ್ರತಾ ಅಂದರೆ ಸೂರ್ಯಾಸ್ತವಾದ ಕೊಡಲೆ ಗೃಹಿಣಿಯು ದೇವರ ಮುಂದೆ ಮುಂದಿನ ದಿನ ಸೂರ್ಯೋದಯವಾಗುವವರೆಗೂ ದೀಪವು ನಂದಿಹೋಗದಂತೆ ನೋಡಿಕೊಳ್ಳಬೇಕು, ಹೀಗೆ ದೀಪ ಬೆಳಗಿದ ಮನೆಯಲ್ಲಿ ಅ ಲಕ್ಷ್ಮಿಯು ಅತ್ತ ಇತ್ತ ಸುಳಿಯಲಾರಳು, ದಾರಿದ್ರ್ಯವು ಬರಲಾರದು.
ಲಕ್ಷ್ಮೀದೇವಿಯ ಸನ್ನಿಧಾನ ವಿಶೇಷವಿರುವ ತುಳಸಿ ಕಾಷ್ಠದಿoದ ದೇವರಿಗೆ ದೀಪವನ್ನು ಹಚ್ಚಿದರೆ ಭಗವಂತನು ಹೆಚ್ಚು ಸಂತುಷ್ಟನಾಗುವನು, ಆತ ಏವ ಶಲಾಕಾಂ ತತ್ರ ಸ್ಥಪಯಂತಿ.
ದೀಪದಲ್ಲಿರುವ ದೇವತೆಗಳು : ಭೂದೇವಿಯರು ಪ್ರಣತಿಯೊಳಗೆ, ಲಕ್ಷ್ಮೀದೇವಿಯರು ಎಣ್ಣೆಯೊಳಗೆ ಶೇಷದೇವರು ಬತ್ತಿಯೊಳಗೆ, ವಾಯುದೇವರು ಪ್ರಕಾಶದೊಳಗೆ, ರುದ್ರದೇವರು ಕಪ್ಪಿನೊಳಗೆ, ಶಚಿಪತಿ ಇಂದ್ರದೇವರು ದೀಪಕ್ಕೆ ಅಭಿಮಾನಿ.
ದೀಪ ಹಚ್ಚುವಾಗ ಹೇಳಬೇಕಾದ ಮಂತ್ರ : ದೀಪ ದೇವಿನಮಸ್ತುಭ್ಯಂ ಮಂಗಲೇ ಪಾಪನಾಶಿನೀ, ಆಜ್ಞಾನಾಂಧಸ್ಯ ಮೇ ನಿತ್ಯಂ ಸುಜ್ಞಾನಂದೇಹಿ ಸುಪ್ರಭೆ.
ದೀಪದಲ್ಲಿರಬೇಕಾದ ಬತ್ತಿಯ ಸಂಖ್ಯೆ : ದೀಪದಲ್ಲಿ ಎರಡು ಬತ್ತಿ ಗಳಿರಲೇಬೇಕು, ಒಂದು ಬತ್ತಿ ಇಂದ ದೀಪ ಹಚ್ಚಬಾರದು, ಹೊಬತ್ತಿಯನ್ನು ಎರಡು ಇಟ್ಟಿರಬೇಕು.
ದೀಪಕ್ಕೆ ಉಪಯೋಗಿಸುವ ಎಣ್ಣೆ : ಗವಾಜ್ಯಂ ತಿಲತೈಲಂ ಚ ಕುಸುಮೈಶ್ಚ ಸುವಾಸಿತಮ್, ಸಂಯೋಜ್ಯ ವರ್ತಿನಾ ದೀಪಂ ಭಕ್ತ್ಯಾ ವಿಷ್ಣೋರ್ನಿವೇದಯೇತ್ ಅಂದರೆ ಶ್ರೀವಿಷ್ಣುವಿಗೆ ದೀಪವನ್ನು ಹಚ್ಚುವಾಗ (ತುಪ್ಪ) ತಿಲತೈಲ (ಎಳ್ಳೆಣ್ಣೆ)ವಾಗಲಿ ಹೂವುಗಳಿಂದ ಸುವಾಸಿತಗೊಳಿಸಿ ನಂತರ ಬೆಳಗಬೇಕು, ಎಂಬ ಪ್ರಮಾಣ ವಾಕ್ಯವು ಘೃತದೀಪ, ತೈಲದೀಪವು ವಿಷ್ಣುಲೋಕ ಪ್ರಾಪ್ತಿಗೆ ಕಾರಣವೆನ್ನಲಾಗಿದೆ, ದೀಪಕ್ಕಾಗಿ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರಉಪಯೋಗಿಸಬೇಕು. ಉಳಿದ ಎಣ್ಣೆಗಳು ವರ್ಜ್ಯ ಎಂದು ಅಗ್ನಿ ಪುರಾಣ ತಿಳಿಸಿದೆ.
ದೀಪಸ್ಥಂಭದಲ್ಲಿರುವ ದೇವತೆಗಳು : ದೀಪಸ್ಥoಭದಲ್ಲಿ 27 ನಕ್ಷತ್ರದೇವತೆಗಳು ಇದ್ದಾರೆ ನಾಳದಲ್ಲಿ ವಾಸುಕಿ ದೇವತೆ, ಪಾದದಲ್ಲಿ ಚಂದ್ರಸೂರ್ಯರು, ದೂಪ ದೀಪ ಪಾತ್ರದಲ್ಲಿ ಅಗ್ನಿದೇವತೆ.
ದೀಪಪಾತ್ರಾದಿದೈವತ್ಯಂ ಮುಖೇ ಪಾವಕ ಮುಚ್ಯಂತೇ, ದಂಡಮೀಶ್ವರದೈವತ್ಯಂ ಪಾದಂ ಪ್ರಜಾಪತಿಸ್ತಥಾ ಅಂದರೆ ದೀಪಸ್ಥಃಭಗಳಲ್ಲಿ ಅಗ್ರದಲ್ಲಿಯ ಅಗ್ನಿಯು, ದಂಡದಲ್ಲಿ ರುದ್ರನು, ಬುಡದಲ್ಲಿ ಬ್ರಹ್ಮದೇವನು ಇರುವರು.