ವಿಮಾನಕ್ಕೆ ಇಂಧನ ತುಂಬಿಸುವಾಗ ಮೋದಿ ಏನ್ ಮಾಡ್ತಾರೆ ಗೊತ್ತೇ ?

1
7632

ಮೋದಿ ಈ ಕೆಲವು ವರ್ಷಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗುತ್ತಿರುವ ರಾಜಕಾರಣಿ. ಪ್ರಧಾನ ಮಂತ್ರಿಯಾಗಿ ಕೆಲವೊಂದು ಉತ್ತಮ ಆಡಳಿತ ನೀಡುತ್ತಿರುವ ಮೋದಿ ದೇಶ ಈಗ ಅರ್ಥಿಕ ಹಿಂಜರಿತ ಕಾಣುತ್ತಿರುವುದನ್ನು ಮನಗಂಡು ಸ್ವತಃ ಖುದ್ದಾಗಿ ಅದರ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.ಎಲ್ಲಿ ಹೆಚ್ಚು ಖರ್ಚು ಆಗುತ್ತಿದೆಯೋ ಅಲ್ಲಿ ಕಡಿಮೆ ಖರ್ಚು ಮಾಡಲು ಬಯಸುತ್ತಿದ್ದಾರೆ.ಈ ಬಗ್ಗೆ ಅವರ ನೆಚ್ಚಿನ ಸ್ನೇಹಿತ , ಗೃಹ ಸಚಿವ ಅಮಿತ್ ಶಾ ರವರು ಸವಿವರವಾಗಿ ವಿವರಿಸಿದ್ದಾರೆ.

ಲೋಕಸಭೆಯ ಕಲಾಪದಲ್ಲಿ ದೇಶದ ಹಣಕಾಸಿನ ಮುಗ್ಗಟ್ಟಿನ ಬಗ್ಗೆ ವಿವರಿಸಿರುವ ಅಮಿತ್ ಶಾ ಮೋದಿ ಆದಷ್ಟು ಕಡಿಮೆ ಖರ್ಚು ಮಾಡುತ್ತಾರೆ. ವಿದೇಶ ಪ್ರಯಾಣ ಮಾಡುವಾಗ ತಮ್ಮ ಜೊತೆಯಲ್ಲಿ ಅಧಿಕಾರಿ ವರ್ಗದ ಕೇವಲ ಶೇಕಡಾ 20 ರಷ್ಟು ಜನರನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ದೇಶದ ಒಳಗೆ ಕಾರ್ಯಕ್ರಮ ಇದ್ದಾಗ ಕಡಿಮೆ ಅಧಿಕಾರಿಗಳು ಇದ್ದರೆ ಅವರಿಗೆ ಕಾರು ಬಳಸಲು ಸೂಚಿಸುತ್ತಾರೆ. ಹೆಚ್ಚು ಅಧಿಕಾರಿಗಳು ಬರುವ ಕಾರ್ಯಕ್ರಮಗಳಿಗೆ ಬಸ್ ವ್ಯವಸ್ಥೆ ಮಾಡಲು ಹೇಳುತ್ತಾರೆ. ಏಕೆಂದರೆ ಎಲ್ಲರಿಗೂ ಕಾರುಗಳನ್ನು ಕೊಟ್ಟರೆ ಇಂಧನ ವ್ಯಯವಾಗುತ್ತದೆ. ಅದೂ ಅಲ್ಲದೇ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೂ ತೊಂದರೆ ಆಗುತ್ತದೆ.ಇದನ್ನು ಮುಂದಾಲೋಚನೆ ಮಾಡಿಯೇ ಮೋದಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ವಿದೇಶಗಳಿಗೆ ವಿಮಾನದಲ್ಲಿ ಹೋಗುವಾಗ ದಾರಿ ಮಧ್ಯೆ ಇಂಧನ ಖಾಲಿಯಾದಾಗ ಸಿಬ್ಬಂದಿ ವರ್ಗದವರು ಮೋದಿಗೆ ಉಳಿದುಕೊಳ್ಳಲು ಪಂಚತಾರಾ ಹೋಟೆಲ್ ಬುಕ್ ಮಾಡುತ್ತಾರೆ. ಆದರೆ ಮೋದಿ ಇದನ್ನು ನಿರಾಕರಿಸಿ ಸ್ನಾನ , ವಿಶ್ರಾಂತಿಗೆ ವಿಮಾನ ನಿಲ್ದಾಣದ ಟರ್ಮಿನಲ್’ಲೇ ಉಳಿಯುತ್ತಾರೆ. ಬೇರೆ ದೇಶದ ಪ್ರಧಾನಿಗಳಾದರೆ ಅವರಿಗೆ ಐಶಾರಾಮಿ ಹೋಟೆಲ್ ಬೇಕಾಗುತ್ತದೆ.  ಆದರೆ ಮೋದಿ ಸರಳವಾಗಿ ಇರಲು ಪ್ರಯತ್ನ ಪಡುತ್ತಾರೆ ಎಂದು ಅಮಿತ್ ಶಾ ಹೇಳುತ್ತಾರೆ.

ಇತ್ತೀಚೆಗೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿತ್ತು ಕೇಂದ್ರದ ಮೋದಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ದೇಶವನ್ನು ಆರ್ಥಿಕ ಮುಗ್ಗಟ್ಟಿನಿಂದ ಬಚಾವು ಮಾಡಲು ದಿಟ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ.ಅವರೇ ಹೇಳುವಂತೆ ಪ್ರಧಾನ ಮಂತ್ರಿ ಮೋದಿ ಇದರಲ್ಲಿ ಹೆಚ್ಚು ಗಮನ ಹರಿಸುತ್ತಿದ್ದಾರೆ . ಆದಷ್ಟು ಬೇಗ ಸುಧಾರಣೆ ಆಗಲಿದೆ ಎಂದಿದ್ದಾರೆ.

1 COMMENT

  1. ಏನಪ್ಪಾ ನೀವು ಹೇಳ್ತಿದ್ದೀರಾ ನಾವು ಕೇಳ್ತಿದ್ದೆವೆ..ಬ್ಯಾಂಕ್ ಸ್ಥಿತಿಉದ್ಯೋಗ ಸ್ಥಿತಿ,,ಹಿಂದೂ ಮುಸ್ಲಿಂ ಸ್ಥಿತಿ,ಈ nrc npr caa ಸ್ಥಿತಿ.ಆರ್ಥಿಕ ಮುಗ್ಗಟ್ಟು ಸ್ಥಿತಿ,ಗುಂಪುಕೊಲೆಗಳು, ರೈತರ ಆತ್ಮಹತ್ಯೆ.ಅದ್ಯಾವುದೂ ನಮ್ಮದಲ್ಲ ಹಿಂದಿನ ಸರ್ಕಾರದ ಕಾರ್ಯವೈಖರಿ ಎನ್ನುವ ಸರ್ಕಾರ.ಈ ಗಡಿಪಾರಿಗ ತನ್ನ ಮಗನಿಗೆ bcci ನಲ್ಲಿ ದೊಡ್ಡ ಉದ್ಯೋಗ ಕೊಡಿಸಿ,ಇರೋ ಬರೋ ಸರ್ಕಾರಿ ನಿವೇಶಗಳನ್ನೆಲ್ಲಾ ಮಾರಿ ನಮ್ಮ ಮೋದಿಜಿಯವರು ಉಳಿಸುತ್ತಿದ್ದಾರೆ ಅಂತ ಶ್ರೀಯುತ ಗೃಹಸಚಿವರಿಂದ ಕೇಳಿ ಜೀವ ತಣ್ಣಗಾಯಿತು.ನೀವಿಬ್ಬರೂ ಭಾರತದ ಹೆಮ್ಮೆ.ಜೊತೆಗೆ ಸಂವಿಧಾನದ 4 ನೇ ಕಂಬ ಮೀಡಿಯಾ ಈಗ ವಿಶ್ವದಲ್ಲಿ ಎಷ್ಟರ ಸ್ಥಾನದಲ್ಲಿ ನಿಂತಿದೆ ಯಾತಕ್ಕೆ ನಿಂತಿದೆಯೆಂತ ಗೊತ್ತಿದ್ದರೆ.ದೇಶದ ಜ್ವಲಂತ ಸಮಸ್ಯೆ,ಗಳನ್ನು ಸರ್ಕಾರಕ್ಕೆ ಪ್ರಶ್ನೆ ಮಾಡುವುದನ್ನು ಕಲಿಯಿರಿ ಜೈಹಿಂದ್

LEAVE A REPLY

Please enter your comment!
Please enter your name here