ಚಿಟ್ಟೆಹೆಜ್ಜೆ ಎಂಬ ಧಾರಾವಾಹಿಯೊಂದಿಗೆ ಪ್ರಧಾನವಾದ ಲೈಮ್ ಲೈಟ್ ಗೆ ಬಂದ ಖ್ಯಾತ ನಟಿ ನಯನ ಪುಟ್ಟಸ್ವಾಮಿ. ಚಂದನವನದ ನಟಿಯಾದ ನಯನ ಪುಟ್ಟಸ್ವಾಮಿಯವರು ತಮ್ಮ ರಿಯಾಲಿಟಿ ಶೋ ಕಾರ್ಯಕ್ರಮಗಳಿಂದ ಜನರಿಗೆ ಅಚ್ಚುಮೆಚ್ಚು. ಚಿಟ್ಟೆ ಹೆಜ್ಜೆ, ಬಿಗ್ ಬಾಸ್, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 1 ಹೀಗೆ ವಿವಿಧ ರಿಯಾಲಿಟಿ ಶೋ ಹಾಗೂ ಚಿತ್ರಗಳಲ್ಲಿ ನಟನೆ ಮಾಡಿದ ನಂತರ ನಯನ ಪುಟ್ಟಸ್ವಾಮಿಯವರು ತಮ್ಮ ಮುಂದಿನ ಜೀವನವನ್ನು ಅಮೆರಿಕಾದಲ್ಲಿ ಕಳೆಯುತ್ತಿದ್ದಾರೆ.
ನಯನ ಪುಟ್ಟಸ್ವಾಮಿ ಅವರು ಅವರ ಪತಿಯಾದ ಶರಣ್ ಅವರೊಂದಿಗೆ ಕಳೆದ ವರ್ಷವೇ ಅಮೆರಿಕಾಗೆ ಶಿಫ್ಟ್ ಆಗಿದ್ದರು. ಆದರೂ ಕೂಡ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿಯ ಜೊತೆಗೆ ಹಲವಾರು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನಾನು ಮತ್ತೊಮ್ಮೆ ಬೆಂಗಳೂರಿಗೆ ಬಂದು ನನ್ನ ನಟನೆಯನ್ನು ಮುಂದುವರಿಸಬೇಕು ಎಂದು ತಮ್ಮ ಮನೋಭಿಲಾಷೆ ವ್ಯಕ್ತಪಡಿಸಿದ್ದಾರೆ.
ನನ್ನ ಪತಿಗೆ ಅಮೆರಿಕಾದ ಖ್ಯಾತ ಯೂನಿವರ್ಸಿಟಿಯಲ್ಲಿ ಕೆಲಸ ಸಿಕ್ಕ ಕಾರಣ ನಾನು ಅಮೆರಿಕಾ ದೇಶಕ್ಕೆ ಬರಬೇಕಾಗಿ ಬಂತು. ಆದರೆ ನಾನು ಇಲ್ಲಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕೋರ್ಸ್ ಮಾಡಲು ಇಚ್ಚಿಸುತ್ತಿದ್ದೇನೆ. ಹಾಗೆಯೇ ನಾನು ಈಗ ತಾಯಿಯಾಗುವ ಸಂಭ್ರಮದಲ್ಲಿ ಇದ್ದೇನೆ ಎಂದು ನಯನ ಪುಟ್ಟಸ್ವಾಮಿ ಅವರು ಹೇಳಿದ್ದಾರೆ.
ಮುಂಬರುವ ಆಗಸ್ಟ್ ತಿಂಗಳಿನಲ್ಲಿ ನಯನ ಪುಟ್ಟಸ್ವಾಮಿ ದಂಪತಿ ತಂದೆ ತಾಯಿಗಳಾದ ದಿನಾಂಕವನ್ನು ವೈದ್ಯರು ನಿಶ್ಚಯಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಪಡೆಯುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು, ಇದು ನಮ್ಮ ಹೊಸ ಪ್ರಾರಂಭ. ಸಂತೋಷವನ್ನು, ಸಂಭ್ರಮವನ್ನು ಪಡೆಯಲು ನಮಗೆ ಕಾಯಲಾಗುತ್ತಿಲ್ಲ. ಮಗು ಆಗಸ್ಟ್ ತಿಂಗಳಲ್ಲಿ ಬರಲಿದೆ ಎಂದು ನಯನ ಅವರು ಬರೆದುಕೊಂಡಿದ್ದಾರೆ.
ಅವರು ಬಿಗ್ ಬಾಸ್ ಸೀಸನ್ 6 ರಲ್ಲಿ ಭಾಗವಹಿಸಿದ್ದರು. ೫೬ ದಿನಗಳ ಕಾಲ ಆಟವಾಡಿ ನಂತರ ಎಲಿಮಿನೇಟ್ ಆಗಿ ಹೊರಬಂದಿದ್ದರು. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದಲ್ಲಿ ಕೂಡ ವಿನ್ನರ್ ಆಗಿ ಹೊರಬಂದಿದ್ದರು. ಅದಾದ ನಂತರ ಅವರು ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಚಿಟ್ಟೆಹೆಜ್ಜೆ ಧಾರವಾಹಿಯಲ್ಲಿ ನಟಿಸಿದ್ದರು. ನಂತರ ಅಲೆಮಾರಿ ಸಿದ್ಧಾರ್ಥ ಲಿಮಿಟ್ ಅಯೋಧ್ಯಪುರಂ ಹಾಗೂ ಇತರೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಂತರ 2018 ರಲ್ಲಿ ಚರಣ್ ಅವರ ಜೊತೆ ವಿವಾಹವಾದರು.
ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಸ್ಪೆಷಲ್ ಸಂದೇಶವನ್ನು ನಯನ ಅವರು ಹಾಕಿಕೊಂಡಿದ್ದಾರೆ. ಅದೇನೆಂದರೆ ನಯನ ಅವರಿಗೆ ಯಾವ ಮಗು ಆಗಲಿದೆ ಎಂಬುದು. ಹೌದು ಅಮೆರಿಕ ದೇಶದಲ್ಲಿ ಲಿಂ’ಗಪತ್ತೆಯು ನಡೆಯುತ್ತದೆ ಹಾಗಾಗಿ ನಯನ ಹಾಗೂ ಚರಣ್ ದಂಪತಿಗಳಿಗೆ ಈಗಾಗಲೇ ಯಾವ ಮಗು ಆಗಿದೆ ಎಂಬುದು ಗೊತ್ತಾಗಿದೆ.
ಬರ್ತಡೇ ಪಾಪರ್ ಪಾಪ್ ಮಾಡುವ ಮೂಲಕ ನಯನ ಹಾಗೂ ಚರಣ್ ಅವರು ತಮ್ಮ ಮಗುವಿನ ಲಿಂಗವನ್ನು ಜನರಿಗೆ ತಿಳಿಸಲು ಹೊರಟು, ಆದರೆ ವಿಡಿಯೋ ಕೊನೆಯಲ್ಲಿ ವಿಡಿಯೋವನ್ನು ಕ್ರಾಪ್ ಮಾಡುವ ಮೂಲಕ ಸಸ್ಪೆನ್ಸ್ ಆಗಿ ಮಗು ಯಾವುದೆಂಬುದನ್ನು ಹೇಳದೆ ಕಾತುರತೆ ಹೆಚ್ಚಿಸಿದ್ದಾರೆ.
ಪಾರು ಖ್ಯಾತಿಯ ಮೋಕ್ಷಿತ, ಬಿಗ್ ಬಾಸ್ ಖ್ಯಾತಿಯ ಶಶಿ, ಖ್ಯಾತ ನಟಿ ನೀತು ಶೆಟ್ಟಿ, ಖ್ಯಾತ ಗಾಯಕ ಅಲೋಕ್, ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ, ಸೋನು ಪಾಟೀಲ್, ದೀಪಿಕಾ ದಾಸ್, ಶಾಲಿನಿ ಧನರಾಜ್, ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ, ಹಾಗೂ ಖ್ಯಾತ ಜರ್ನಲಿಸ್ಟ್ ಆದ ಸುನೈನ ಸುರೇಶ್ ಮತ್ತಿತರರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭ ಹಾರೈಸಿದ್ದಾರೆ.