ಮದುವೆಯಾದ ಹದಿನೈದೇ ದಿನಕ್ಕೆ ಹೊಸ ಅತಿಥಿಯ ಆಗಮನ

0
3151

ಮದುವೆಯಾಗಿ ಹದಿನೈದೇ ದಿನಕ್ಕೆ ಹೊಸ ಅತಿಥಿ, ಇದೇನಪ್ಪಾ ಎಂದು ಹುಬ್ಬೇರಿಸಬೇಡಿ! ನಮಗೂ ಆಶ್ಚರ್ಯವಾಗಿದೆ. ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಮದುವೆಯಾಗಿ 15 ದಿನಗಳು ಕಳೆದಿದೆ ಅಷ್ಟೇ. ಅಷ್ಟರಲ್ಲಿ ಮತ್ತೇನು ಹೊಸ ಅತಿಥಿ ಅಂತ ಬರಿದಿದ್ದೀರಲ್ಲ ಅಂತ ಕೇಳ್ಬೇಡಿ.

ಬಿಗ್ಬಾಸ್ ವಿನ್ನರ್ ನಟ ಭಯಂಕರ ಒಳ್ಳೆ ಹುಡುಗ ಪ್ರಥಮ್ ಈ ರೀತಿಯಲ್ಲಿ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕ್ಕೊಂಡಿದ್ದಾರೆ. Surprise news ಇನ್ನೂ ಕೆಲವೇ ಹೊತ್ತಿನಲ್ಲಿ ಧ್ರುವ ಸರ್ಜಾ ದಂಪತಿಗಳಿಂದ.. ಕಾಯ್ತಾ ಇರಿ ಹೊಸ ಅತಿಥಿಯನ್ನ ಬರಮಾಡಿಕೊಳ್ಳೋಕೆ ಅಂತ ಬರ್ಕೊಂಡಿದ್ದಾರೆ.

ಪ್ರಥಮ್ ಧ್ರುವ ನಡುವೆ ಅತ್ಯುತ್ತಮ ಆತ್ಮೀಯತೆ ಮತ್ತು ಗಾಢ ಸ್ನೇಹ ಇದೆ. ಪ್ರಥಮ್ ಯಾವಾಗಲೂ ಈ ರೀತಿಯ ತಮಾಷೆಯ ಮತ್ತು ಚೇಷ್ಟೆಯ ಸ್ಟೇಟಸ್ ಹಾಕಿ ಶಾಕ್ ಕೊಡ್ತಿರ್ತಾರೆ‌. ಬಹುಶ ಈ ಸ್ಟೇಟಸ್ ಅರ್ಥ ಬೇರೇನೋ ಇದೆ. ಅಂದರೆ ಬಹುಶಃ ಅವರ ಮನೆಗೆ ಹೊಸ ಅತಿಥಿ ಅಂದರೆ ಯಾವುದೋ ಕಾರು ಅಥವಾ ಬೆಲೆಬಾಳುವ ಬೈಕ್ ಬರಬಹುದು ಎಂದು ಅರ್ಥ ಇರಬಹುದು. ಅದನ್ನೇ ಪ್ರಥಮ್ ಈ ರೀತಿಯಲ್ಲಿ ಸ್ಟೇಟಸ್ ಹಾಕಿದ್ದಾರೆ ಎಂದು ಪ್ರಥಮ್’ಗೆ ಕರೆ ಮಾಡಿ ಕೇಳಿದಾಗ ಅವರು ಹೇಳಿದ್ದಿಷ್ಟು ಧ್ರುವರವರು ಹನುಮನ ಭಕ್ತರು. ಇಂದು ಹನುಮ ಜಯಂತಿ ಹಾಗೂ ಅವರ ನಿಶ್ಚಿತಾರ್ಥ ಆಗಿ ಒಂದು ವರ್ಷವಾದ ದಿನ . ಈ ಶುಭ ಸಂದರ್ಭದಲ್ಲಿ ಅವರು ಹೊಸ ಕಾರನ್ನು ಖರೀದಿಸಿದ್ದಾರೆ ಎಂದು ಹೇಳಿದರು.

ಧ್ರುವ ಸರ್ಜಾ ಮತ್ತು ಪ್ರೇರಣಾರವರ ಮದುವೆ ಕಳೆದ ತಿಂಗಳು 24 ರಂದು ಬೃಂದಾವನ ಹಾಲಿನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇದಕ್ಕೆ ಚಿತ್ರರಂಗದ ನಟ ನಟಿಯರು , ಅಭಿಮಾನಿಗಳು ಹಾಜರಿದ್ದು ದಂಪತಿಗಳನ್ನು ಹಾರೈಸಿದರು. ಅದೂ ಅಲ್ಲದೇ ಪ್ರೇರಣಾರವರ ತಂದೆ ಧ್ರುವರವರಿಗೆ ಬೆಲೆಬಾಳುವ ಕಾರೊಂದನ್ನು ಗಿಪ್ಟ್ ಆಗಿ ನೀಡಿ ಸುದ್ದಿಯಾಗಿದ್ದರು.

ನಂತರ ಧ್ರುವ ಸರ್ಜಾ ಪ್ರೇರಣಾರವರಿಗೆ ಬೆಂಗಳೂರಿನಲ್ಲಿ ಹೊಸ ಮನೆಯನ್ನು ಖರೀದಿಸಿ ಗಿಪ್ಟ್ ಆಗಿ ನೀಡಿದ್ದರು. ಇದು ಸುಮಾರು 5 ಎಕರೆ ಜಾಗ ಹೊಂದಿತ್ತು. ಮನೆಗೆ ಸತ್ಯನಾರಾಯಣ ಪೂಜೆ ಕೂಡ ಮಾಡಿ ಗೃಹ ಪ್ರವೇಶ ಮಾಡಿದ್ದರು.

ನಟ ಭಯಂಕರ ಪ್ರಥಮ್ ಧ್ರುವರಿಗೆ ಉತ್ತಮ ಸ್ನೇಹಿತರು. ಅವರ ಪೊಗರು ಮೂವಿ ಟ್ರೇಲರ್ ದಾಖಲೆ ವೀವ್ಸ್ ಮಾಡಿದ್ದನ್ನು ಸಂಭ್ರಮಿಸಿ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿದ್ದರು.

LEAVE A REPLY

Please enter your comment!
Please enter your name here